ಬೆಂಗಳೂರು: ಸಿಎಂ ಡಿ.ಕೆ. ಶಿವಕುಮಾರ್ ಅವರಿಗೆ ಬಿಜೆಪಿ ಹಿರಿಯ ಶಾಸಕ ಸುರೇಶ್ ಕುಮಾರ್ ಟಾಂಗ್ ನೀಡಿದ್ದಾರೆ. ತನ್ನದೇ ವಿಶಿಷ್ಟ ಹಿನ್ನೆಲೆಯುಳ್ಳ ಕುಮಾರಕೃಪದ ಒಂದಿಷ್ಟು ಭಾಗ ಇನ್ನು ಮುಂದೆ ಮುಖ್ಯಮಂತ್ರಿಗಳ ಸರ್ಕಾರಿ ನಿವಾಸ ಗಂಗಾ ಆಗಲಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಸುರೇಶ್ ಕುಮಾರ್, ಇತಿಹಾಸ ಸೃಷ್ಟಿಸಬೇಕೇ ವಿನಃ ಇತಿಹಾಸ ಬದಲಿಸುವುದು ಸಾಧನೆಯಲ್ಲ ಎಂದು ಹೇಳಿದ್ದಾರೆ.

















