ಬೆಂಗಳೂರು : ಸ್ವಾತಂತ್ರ್ಯೋತ್ಸವದ ಸಂದರ್ಭದಲ್ಲಿ ರಾಷ್ಟ್ರಪತಿಗಳಿಂದ ನೀಡಲಾಗುವ ವಿಶಿಷ್ಟ ಸೇವಾ ಪದಕ ಗೌರವಕ್ಕೆ ಕೇಂದ್ರ ಅಪರಾಧ ವಿಭಾಗದ ಸಹಾಯಕ ಪೊಲೀಸ್ ಆಯುಕ್ತ ಎಚ್.ಎನ್. ಧರ್ಮೇಂದ್ರ ಅವರು ಭಾಜನರಾಗಿದ್ದಾರೆ. ಪೊಲೀಸ್ ಇಲಾಖೆಯಲ್ಲಿ ಸಲ್ಲಿಸಿರುವ ದಕ್ಷ ಹಾಗೂ ಉತ್ತಮ ಸೇವೆಯನ್ನು ಪರಿಗಣಿಸಿ ಅವರಿಗೆ ಈ ಪ್ರತಿಷ್ಠಿತ ಗೌರವ ದೊರೆತಿದೆ. 80ನೇ ಸ್ವಾತಂತ್ರ್ಯೋತ್ಸವದ ಸಂದರ್ಭದಲ್ಲಿ ರಾಷ್ಟ್ರಪತಿಗಳಿಂದ ವಿಶಿಷ್ಟ ಸೇವಾ ಪದಕ ಸ್ವೀಕರಿಸುತ್ತಿರುವುದು ಧರ್ಮೇಂದ್ರ ಅವರ ಸೇವೆಗೆ ಮತ್ತೊಂದು ಗರಿಮೆ ತಂದಿದೆ.

ಈ ಬಾರಿ ಕರ್ನಾಟಕದಿಂದ ವಿಶಿಷ್ಟ ಸೇವಾ ಪದಕಕ್ಕೆ ಭಾಜನರಾಗಿರುವ ಏಕೈಕ ಅಧಿಕಾರಿ ಎಂಬ ಹೆಗ್ಗಳಿಕೆಯೂ ಎಚ್.ಎನ್. ಧರ್ಮೇಂದ್ರ ಅವರದ್ದಾಗಿದೆ. ಹಲವು ವರ್ಷಗಳಿಂದ ಪೊಲೀಸ್ ಇಲಾಖೆಯಲ್ಲಿ ವಿವಿಧ ಜವಾಬ್ದಾರಿಗಳನ್ನು ನಿರ್ವಹಿಸಿರುವ ಅವರು, ಕರ್ತವ್ಯದಲ್ಲಿ ದಕ್ಷತೆ ಹಾಗೂ ಪ್ರಾಮಾಣಿಕ ಸೇವೆ ಮೂಲಕ ಗಮನ ಸೆಳೆದಿದ್ದಾರೆ.
ಇತ್ತೀಚೆಗಷ್ಟೇ ನ್ಯೂಸ್ ಬೀಟ್ ವಾಹಿನಿಯ 13ನೇ ವರ್ಷದ ವಾರ್ಷಿಕೋತ್ಸವದ ಸಂದರ್ಭದಲ್ಲಿ ಕೂಡ ಅಧಿಕಾರಿ ಧರ್ಮೇಂದ್ರ ಅವರ ಪೊಲೀಸ್ ಇಲಾಖೆಯಲ್ಲಿನ ದಕ್ಷ ಸೇವೆಯನ್ನು ಪರಿಗಣಿಸಿ ಗೌರವಿಸಲಾಗಿತ್ತು. ಅವರ ಸೇವೆಯನ್ನು ಗುರುತಿಸಿ ‘ದಕ್ಷ ಸೇವಾ ರತ್ನ’ ಎಂಬ ಬಿರುದನ್ನು ನೀಡಿ ಸನ್ಮಾನಿಸಲಾಗಿತ್ತು.
ಪೊಲೀಸ್ ಇಲಾಖೆಯಲ್ಲಿ ತಮ್ಮ ಕರ್ತವ್ಯವನ್ನು ಪರಿಣಾಮಕಾರಿಯಾಗಿ ನಿರ್ವಹಿಸಿರುವ ಧರ್ಮೇಂದ್ರ ಅವರಿಗೆ ಇದೀಗ ರಾಷ್ಟ್ರಪತಿಗಳಿಂದಲೇ ವಿಶಿಷ್ಠ ಸೇವಾ ಪದಕ ದೊರೆತಿರುವುದು ಮತ್ತಷ್ಟು ಗೌರವ ತಂದಿದೆ. ಒಂದೇ ವರ್ಷದಲ್ಲಿ ಸೇವಾ ಕ್ಷೇತ್ರದಲ್ಲಿನ ಸಾಧನೆಗಾಗಿ ಎರಡು ಮಹತ್ವದ ಗೌರವಗಳಿಗೆ ಪಾತ್ರರಾಗಿರುವುದು ಅವರ ವೃತ್ತಿ ಜೀವನದ ವಿಶೇಷ ಸಾಧನೆಯಾಗಿದೆ.
ಸದ್ಯ ಕೇಂದ್ರ ಅಪರಾಧ ವಿಭಾಗದ ಮಹಿಳಾ ಸಂರಕ್ಷಣಾ ದಳದ ಸಹಾಯಕ ಪೊಲೀಸ್ ಆಯುಕ್ತರಾಗಿ ಎಚ್.ಎನ್. ಧರ್ಮೇಂದ್ರ ಅವರು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ರಾಷ್ಟ್ರಪತಿಗಳ ವಿಶಿಷ್ಟ ಸೇವಾ ಪದಕಕ್ಕೆ ಭಾಜನರಾಗಿರುವ ಅವರ ಸಾಧನೆಗೆ ಪೊಲೀಸ್ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿ ಹಾಗೂ ವಿವಿಧ ಕ್ಷೇತ್ರಗಳ ಗಣ್ಯರು ಅಭಿನಂದನೆ ಸಲ್ಲಿಸಿದ್ದಾರೆ.
ಇದನ್ನೂ ಓದಿ : ಜೀ ಕನ್ನಡದ ‘ಹಳ್ಳಿ ಪವರ್’ ಶೋನಲ್ಲಿ ಮಹಿಳಾ ಸ್ಪರ್ಧಿಗಳಿಗೆ ಅವಮಾನ ; ಕ್ರಮಕ್ಕೆ ಸೂಚಿಸಿದ ಮಹಿಳಾ ಆಯೋಗ!



















