ಕರ್ನಾಟಕ ನ್ಯೂಸ್ ಬೀಟ್

ನಾಗರಾಜ್ ಅರೆಹೊಳೆ

ಪ್ರಧಾನ ಸಂಪಾದಕರು

newsbeatkarnataka@gmail.com

  • ಬ್ಲಾಗ್
  • ಜಿಲ್ಲಾ ಸುದ್ದಿ
    • ಬೆಂಗಳೂರು ನಗರ
    • ಬೆಂಗಳೂರು ಗ್ರಾಮಾಂತರ
    • ಬೆಳಗಾವಿ
    • ಬೀದರ್
    • ಬಾಗಲಕೋಟೆ
    • ಬಳ್ಳಾರಿ
    • ಚಾಮರಾಜನಗರ
    • ದಕ್ಷಿಣ ಕನ್ನಡ
    • ಚಿಕ್ಕಬಳ್ಳಾಪುರ
    • ಮಂಗಳೂರು
    • ಧಾರವಾಡ
    • ದಾವಣಗೆರೆ
    • ಚಿತ್ರದುರ್ಗ
    • ಗದಗ
    • ಹಾಸನ
    • ವಿಜಯಪುರ
    • ಹಾವೇರಿ
    • ಕಲಬುರ್ಗಿ
    • ಕೋಲಾರ
    • ರಾಯಚೂರು
    • ಕೊಡಗು
    • ರಾಯಚೂರು
    • ರಾಮನಗರ
    • ಕೊಪ್ಪಳ
    • ತುಮಕೂರು
    • ಮೈಸೂರು
    • ಮಂಡ್ಯ
    • ಉಡುಪಿ
    • ಚಿಕ್ಕಮಗಳೂರು
    • ಉತ್ತರ ಕನ್ನಡ
    • ವಿಜಯನಗರ
    • ಶಿವಮೊಗ್ಗ
    • ಯಾದಗಿರಿ
  • ರಾಜ್ಯ
  • ರಾಜಕೀಯ
  • ದೇಶ
  • ವಿದೇಶ
  • ಕ್ರೀಡೆ
  • ಸಿನಿಮಾ-ಮನರಂಜನೆ
  • ವಿಶೇಷ ಅಂಕಣ
  • ಧರ್ಮ-ಸನಾತನ
  • ಅಪರಾಧ
  • ಆರೋಗ್ಯ-ಆಹಾರ
  • ತಂತ್ರಜ್ಞಾನ
  • ಕೃಷಿ-ಪರಿಸರ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ವಾಣಿಜ್ಯ-ವ್ಯಾಪಾರ
  • ಜ್ಯೋತಿಷ್ಯ
  • ಪುರಾಣ
  • ಇತಿಹಾಸ
No Result
View All Result
Karnataka News Beat
  • ಬ್ಲಾಗ್
  • ಜಿಲ್ಲಾ ಸುದ್ದಿ
    • ಬೆಂಗಳೂರು ನಗರ
    • ಬೆಂಗಳೂರು ಗ್ರಾಮಾಂತರ
    • ಬೆಳಗಾವಿ
    • ಬೀದರ್
    • ಬಾಗಲಕೋಟೆ
    • ಬಳ್ಳಾರಿ
    • ಚಾಮರಾಜನಗರ
    • ದಕ್ಷಿಣ ಕನ್ನಡ
    • ಚಿಕ್ಕಬಳ್ಳಾಪುರ
    • ಮಂಗಳೂರು
    • ಧಾರವಾಡ
    • ದಾವಣಗೆರೆ
    • ಚಿತ್ರದುರ್ಗ
    • ಗದಗ
    • ಹಾಸನ
    • ವಿಜಯಪುರ
    • ಹಾವೇರಿ
    • ಕಲಬುರ್ಗಿ
    • ಕೋಲಾರ
    • ರಾಯಚೂರು
    • ಕೊಡಗು
    • ರಾಯಚೂರು
    • ರಾಮನಗರ
    • ಕೊಪ್ಪಳ
    • ತುಮಕೂರು
    • ಮೈಸೂರು
    • ಮಂಡ್ಯ
    • ಉಡುಪಿ
    • ಚಿಕ್ಕಮಗಳೂರು
    • ಉತ್ತರ ಕನ್ನಡ
    • ವಿಜಯನಗರ
    • ಶಿವಮೊಗ್ಗ
    • ಯಾದಗಿರಿ
  • ರಾಜ್ಯ
  • ರಾಜಕೀಯ
  • ದೇಶ
  • ವಿದೇಶ
  • ಕ್ರೀಡೆ
  • ಸಿನಿಮಾ-ಮನರಂಜನೆ
  • ವಿಶೇಷ ಅಂಕಣ
  • ಧರ್ಮ-ಸನಾತನ
  • ಅಪರಾಧ
  • ಆರೋಗ್ಯ-ಆಹಾರ
  • ತಂತ್ರಜ್ಞಾನ
  • ಕೃಷಿ-ಪರಿಸರ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ವಾಣಿಜ್ಯ-ವ್ಯಾಪಾರ
  • ಜ್ಯೋತಿಷ್ಯ
  • ಪುರಾಣ
  • ಇತಿಹಾಸ
No Result
View All Result
ಕರ್ನಾಟಕ ನ್ಯೂಸ್ ಬೀಟ್

ನಾಗರಾಜ್ ಅರೆಹೊಳೆ
ಪ್ರಧಾನ ಸಂಪಾದಕರು

No Result
View All Result
Home ರಾಜ್ಯ

ಕಾವೇರಿಗಾಗಿ ಉಪವಾಸ ಕೂತಿದ್ದ ಜಯಲಲಿತಾ ವಾಟಾಳ್ ನಾಗರಾಜ್ ಹೋರಾಟಕ್ಕೂ ಇದೆ ದೀರ್ಘ ಇತಿಹಾಸ!

August 5, 2026
Share on WhatsappShare on FacebookShare on Twitter

ಬೆಂಗಳೂರು : ಕಾವೇರಿ ನೀರಿನ ಹಂಚಿಕೆ ವಿವಾದ ಹೊಸದೇನಲ್ಲ. ಕರ್ನಾಟಕ–ತಮಿಳುನಾಡು ನಡುವಿನ ಈ ವಿವಾದ ಹಲವು ಬಾರಿ ರಾಜಕೀಯ ಮತ್ತು ಕಾನೂನು ಹೋರಾಟಕ್ಕೆ ಕಾರಣವಾಗಿದೆ. ಇದೀಗ ಮತ್ತೆ ಕಾವೇರಿ ನೀರು ನಿಯಂತ್ರಣ ಸಮಿತಿ ಹಾಗೂ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ನೀಡಿರುವ ಆದೇಶಕ್ಕೆ ರಾಜ್ಯದಲ್ಲಿ ಕನ್ನಡ ಪರ ಸಂಘಟನೆಗಳು, ರಾಜಕೀಯ ನಾಯಕರು, ರೈತ ಸಂಘಟನೆಗಳು ತೀವ್ರ ವಿರೋಧ ವ್ಯಕ್ತಪಡಿಸಿದ್ದು, ಪ್ರತಿಭಟನೆಗೆ ಧುಮುಕಿವೆ.

ಇದೇ ಹೋರಾಟದ ಇತಿಹಾಸದಲ್ಲಿ ತಮಿಳುನಾಡಿನ ಆಗಿನ ಮುಖ್ಯಮಂತ್ರಿ ಜೆ. ಜಯಲಲಿತಾ ನಡೆಸಿದ ಉಪವಾಸ ಸತ್ಯಾಗ್ರಹ ಪ್ರಮುಖ ಘಟ್ಟವಾಗಿ ದಾಖಲಾಗಿದೆ. ಇತ್ತ ಕರ್ನಾಟಕದಲ್ಲಿ ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ನಿರಂತರ ಹೋರಾಟಗಳ ಮೂಲಕ ಕಾವೇರಿ ವಿಚಾರವನ್ನು ಜೀವಂತವಾಗಿಟ್ಟ ಪ್ರಮುಖ ನಾಯಕರಾಗಿಯೂ ಗುರುತಿಸಿಕೊಂಡಿದ್ದಾರೆ.

ಹೌದು.. 1993ರ ಜುಲೈನಲ್ಲಿ ಕರ್ನಾಟಕವು ಕಾವೇರಿ ನೀರನ್ನು ಬಿಡುಗಡೆ ಮಾಡುತ್ತಿಲ್ಲ ಎಂದು ತಮಿಳುನಾಡಿನ ಆಗಿನ ಮುಖ್ಯಮಂತ್ರಿ ಜಯಲಲಿತಾ, ಚೆನ್ನೈನ ಎಂಜಿಆರ್ ಸ್ಮಾರಕದ ಬಳಿ ಅನಿರ್ದಿಷ್ಟಾವಧಿ ಉಪವಾಸ ಆರಂಭಿಸಿದ್ದರು. ತಮಿಳುನಾಡಿನ ರೈತರಿಗೆ ನೀರು ಒದಗಿಸಬೇಕು ಹಾಗೂ ಕಾವೇರಿ ನ್ಯಾಯಮಂಡಳಿಯ ಮಧ್ಯಂತರ ಆದೇಶ ಜಾರಿಯಾಗಬೇಕು ಎಂಬುದು ಅವರ ಪ್ರಮುಖ ಬೇಡಿಕೆಯಾಗಿತ್ತು. ಈ ಉಪವಾಸ ರಾಜ್ಯ ರಾಜಕೀಯದಲ್ಲಿ ಮಾತ್ರವಲ್ಲ, ರಾಷ್ಟ್ರ ಮಟ್ಟದಲ್ಲೂ ಭಾರೀ ಸದ್ದು ಮಾಡಿತ್ತು.

ಇದೇ ಸಂದರ್ಭದಲ್ಲಿ ಕರ್ನಾಟಕ ವಿಧಾನಸಭೆಯಲ್ಲಿ ಗಂಭೀರ ವಿಚಾರಗಳು ಪ್ರಸ್ತಾಪ ಆಗಿದ್ದವು. ಕಾವೇರಿಗಾಗಿ ಜಯಲಲಿತಾ ಉಪವಾಸ ಸತ್ಯಾಗ್ರಹ ಹಾಗೂ ಈ ಹಿನ್ನೆಲೆ ಮಾತುಕತೆ ನಡೆಸಲು ರಾತ್ರೋ ರಾತ್ರಿ ಕರ್ನಾಟಕಕ್ಕೆ ಕೇಂದ್ರ ಸಚಿವ ವಿ.ಸಿ.ಶುಕ್ಲಾ ಅವರು ಆಗಮಿಸಿದ್ದ ಬಗ್ಗೆ ಚರ್ಚೆ ನಡೆದಿತ್ತು. ಅಂದು ಚಾಮರಾಜನಗರ ವಿಧಾನಸಭಾ ಕ್ಷೇತ್ರದ ಶಾಸಕರಾಗಿದ್ದ ವಾಟಾಳ್ ನಾಗರಾಜ್ ಅವರು ಭಾವಾವೇಶದಿಂದ ಮಾತನಾಡಿದ್ದರು.

ಈ ವೇಳೆ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದ ವಾಟಾಳ್ ನಾಗರಾಜ್‌, ಮುಖ್ಯಮಂತ್ರಿ ವೀರಪ್ಪ ಮೊಯಿಲಿಯವರ ಸರ್ಕಾರ ಕಾವೇರಿ ವಿಚಾರದಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ. ರಾಜ್ಯದ ಹಿತವನ್ನು ಕಾಪಾಡುವಲ್ಲಿ ತಮ್ಮ ಜವಾಬ್ದಾರಿಯನ್ನು ಕಳೆದುಕೊಂಡಿದ್ದಾರೆಂದು ಗುಡುಗಿದ್ದರು.

ಜಯಲಲಿತಾ ಸತ್ಯಾಗ್ರಹ ಅಂತ್ಯಕ್ಕೆ ಹೇಗೆ ನಡೆದಿತ್ತು ಕಸರತ್ತು?

ಜಯಲಲಿತಾರವರ ಸತ್ಯಾಗ್ರಹವನ್ನು ಅಂತ್ಯ ಮಾಡುವುದಕ್ಕೆ ರಾತ್ರೋರಾತ್ರಿ ವಿಶೇಷ ವಿಮಾನದಲ್ಲಿ ಕೇಂದ್ರದ ಮಂತ್ರಿಗಳಾದ ವಿ.ಸಿ.ಶುಕ್ಲಾರವರು ಆಗಮಿಸಿದ್ದರು. ಅವರನ್ನು ಒಂದು ಗಂಟೆ ರಾತ್ರಿಯಲ್ಲಿ ನಮ್ಮ ಮುಖ್ಯಮಂತ್ರಿಗಳೂ ಸೇರಿದಂತೆ ಸಚಿವ ಸಂಪುಟದ ಅನೇಕ ಮಂತ್ರಿಗಳು ವಿಮಾನ ನಿಲ್ದಾಣದಿಂದ ರಾತ್ರೋರಾತ್ರಿ ಕರೆದು ಕೊಂಡು ಬಂದು ಎರಡು ಗಂಟೆ ರಾತ್ರಿಯಲ್ಲಿ ಔತಣ ವ್ಯವಸ್ಥೆ ಎಲ್ಲವನ್ನೂ ಮಾಡಿದರು ಎಂದು ವಾಟಾಳ್ ಆರೋಪಿಸಿದ್ದರು.

ಆ ರಾತ್ರಿ 12 ಗಂಟೆಯಿಂದ 2 ಗಂಟೆಯವರೆಗೆ ಕರ್ನಾಟಕ ರಾಜ್ಯದಲ್ಲಿ ನಡೆದ ಪಿತೂರಿ ಏನು? ಪ್ರಧಾನ ಮಂತ್ರಿಯವರ ಆದೇಶದ ಮೇಲೆ ಇಲ್ಲಿಗೆ ಯಾವ ವಿ.ಸಿ. ಶುಕ್ಲಾರವರು ಬಂದಿದ್ದರು. ಆ ವಿ.ಸಿ.ಶುಕ್ಲಾರವರಿಗೂ ನಮ್ಮ ರಾಜ್ಯದ ಮುಖ್ಯಮಂತ್ರಿಗಳಿಗೂ ನಡೆದಂಥ ಮಾತುಗಳೇನು, ಕರಾರುಗಳೇನು, ಗೋಪ್ಯ ಕರಾರುಗಳೇನು, ಇದರ ಬಗ್ಗೆ ತಿಳಿಸಬೇಕೆಂದು ಮುಖ್ಯಮಂತ್ರಿಗಳನ್ನು ಈ ಒಂದು ಸಭೆಯ ಮುಖಾಂತರ ಒತ್ತಾಯ ಮಾಡುತ್ತಿದ್ದೇನೆ ಎಂದು ಆಕ್ರೋಶ ಹೊರಹಾಕಿದ್ದರು.

ಆ ಒಂದು ಕಾಗದ ಪತ್ರಗಳನ್ನು ಸಭೆಯ ಮುಂದೆ ಮಂಡಿಸಬೇಕು. ಅದು ಅತಿಮುಖ್ಯ. ಇವರಿಗೂ ಶುಕ್ಲಾರವರಿಗೂ ನಡೆದಿರತಕ್ಕಂಥ ಪತ್ರ ವ್ಯವಹಾರ ಮತ್ತು ಇವರಿಗೂ ಶುಕ್ಲಾರವರಿಗೂ ನಡೆದಿರತಕ್ಕಂಥ ಮಾತಿನ ವ್ಯವಹಾರ, ಇವರು ಅವರು ಬಹಳ ಗೋಪ್ಯವಾಗಿ ಮಾತನಾಡಿರತಕ್ಕಂಥದ್ದು ಏನು ಇದೆ, ಅದು ಬಹಳ ಅತಿಮುಖ್ಯ. ಈ ಅತಿಮುಖ್ಯವಾದಂಥ ಕಾಗದ ಪತ್ರಗಳು ಈ ಸದನಕ್ಕೆ ಬಹಳ ಅಮೂಲ್ಯವಾದದ್ದು. ಈ ಸದನದ ವಸ್ತುವಾಗಿ ಅದು ಬರಬೇಕು ಎಂದು ಗಮನ ಸೆಳೆದಿದ್ದರು.

ಸದನದ ಮುಂದೆ ಪತ್ರ ಮಂಡಿಸಲು ಆಗ್ರಹಿಸಿದ್ದ ವಾಟಾಳ್

ಸದನದ ಮುಂದೆ ಅದನ್ನು ಮುಖ್ಯಮಂತ್ರಿಗಳು ಮಂಡಿಸಬೇಕು. ಜೊತೆಗೆ ಪ್ರಧಾನ ಮಂತ್ರಿಗಳಿಗೆ ಇವರು ಬರೆದಿರತಕ್ಕಂಥ ಪತ್ರಗಳೇನು, ಇವರು ಅವರು ಗೋಪ್ಯವಾಗಿ ಮಾಡಿರತಕ್ಕಂಥ ವಿಚಾರಗಳೇನು, ಇವೆಲ್ಲವೂ ಈ ಸದನದ ಮುಂದೆ ಬರಬೇಕು. ಇಲ್ಲಿಂದ ತಮಿಳುನಾಡಿಗೆ ಹೋದಂಥ ವಿ.ಸಿ. ಶುಕ್ಲಾರವರು ಅವರ ಬೇಡಿಕೆಯನ್ನು ನಾವು ಈಡೇರಿಸಿದ್ದೇವೆ, ಈ ಬೇಡಿಕೆಗೆ ಕರ್ನಾಟಕದ ಮುಖ್ಯಮಂತ್ರಿಯವರಾದ ವೀರಪ್ಪ ಮೊಯಿಲಿಯವರು ಒಪ್ಪಿದ್ದಾರೆಂದು ಹೇಳಿ ಅವರನ್ನು ಸತ್ಯಾಗ್ರಹದಿಂದ ಏಳಿಸಿದರು ಎಂದು ಆಕ್ರೋಶ ಹೊರಹಾಕಿದ್ದರು.

ಇವರು ಒಪ್ಪಂದ ಮಾಡಿಕೊಂಡಿರುವ ವಿಚಾರಗಳು ಏನು? ಯಾವ ಒಪ್ಪಂದವಾಯಿತು? ಏತಕ್ಕೆಂದರೆ ಅವರು ಅಷ್ಟು ಸುಲಭವಾಗಿ ಸತ್ಯಾಗ್ರಹವನ್ನು ಬಿಡತಕ್ಕಂಥವರಲ್ಲ. ಆದರೂ ಸತ್ಯಾಗ್ರಹವನ್ನು ಬಿಡಬೇಕಾದರೆ ಒಂದು ಒಪ್ಪಂದ ಆಗಿರಲೇಬೇಕು. ಅದು ಏನು ಒಪ್ಪಂದ ? ನಿಮಗೂ ಅವರಿಗೂ ನಡೆದಿರತಕ್ಕಂಥ ಕರಾರು ಏನು? ಅದರ ವಿಚಾರವೇನು ಎನ್ನುವುದನ್ನು ಬಹಿರಂಗಪಡಿಸಬೇಕು ಎನ್ನತಕ್ಕಂಥದ್ದು ಒಂದು ಪ್ರಮುಖವಾದಂಥ ವಿಚಾರ ಎಂದು ಉಲ್ಲೇಖಿಸಿದ್ದರು.

ರಾಷ್ಟ್ರಪತಿಗಳಾಗಿ ಒಂದು ‘ರಾಜ್ಯದ ಪಕ್ಷಪಾತಿಗಳಾಗಿ ನಡೆದುಕೊಂಡಿದ್ದಾರೆ. ಅವರ ಪ್ರೇರಣೆಯಿಂದ, ಪ್ರಭಾವದಿಂದ, ಒತ್ತಾಯದಿಂದ ನ್ಯಾಯ ಮಂಡಲಿ ರಚನೆಯಾಗಿ ನಮಗೆ ಆಗಿರತಕ್ಕ ಅನ್ಯಾಯ ಎಷ್ಟು ಎಂಬುದಕ್ಕೆ ಪುಷ್ಠಿಕರಣ ಕೊಡುತ್ತಿದ್ದೇನೆ. ಈ ರೀತಿ ಪುಷ್ಠಿಕರಣ ಕೊಡುವುದಕ್ಕೆ ಆಧಾರಗಳು ಏನು ಎಂದು ಕೇಳುವುದಾದರೆ, ಅದಕ್ಕೆ ಆಧಾರ ಪ್ರತಿ ಹೆಜ್ಜೆಗೂ ತಮಿಳ್ಳಾಡಿನ ಎಲ್ಲರನ್ನೂ ಅವರು ಸಂತೈಸಿದರು.

ತಮಿಳ್ಳಾಡಿನ ಎಲ್ಲಾ ಪಕ್ಷದ ಮುಖಂಡರುಗಳನ್ನು ಭೇಟಿಯಾದರು. ತಮಿಳ್ಳಾಡಿನ ಎಲ್ಲಾ ಪಕ್ಷದ ಮುಖಂಡರನ್ನು ರಾಷ್ಟ್ರಪತಿ ಭವನಕ್ಕೆ ಕರೆಸಿದರು. ಕಾವೇರಿ ಸಂಬಂಧದಲ್ಲಿ ಅದು ಕಾವೇರಿಯ ವಿರುದ್ಧದ ಪಿತೂರಿಯ ಕೂಪವಾಗಿತ್ತು ಎಂದು ನಾನು ಹೇಳುತ್ತೇನೆ. ಅದು ವೆಂಕಟರಾಮನ್ ಅವರ ಕಾಲದಲ್ಲಿ ನಡೆದದ್ದು. ಇನ್ನೂ ಮುಂದೆ ಹೋಗಿ ಹೇಳುವುದಾದರೆ, ಈ ಸಂಬಂಧದಲ್ಲಿ ಒಂದು ಸಮಗ್ರ ತನಿಖೆಯನ್ನು ಕಾವೇರಿ ಪಕ್ಷಪಾತಿಗಳಾಗಿ ನಡೆದುಕೊಂಡಿದ್ದಾರೆ. ಅವರ ಪ್ರೇರಣೆಯಿಂದ, ಪ್ರಭಾವದಿಂದ, ಒತ್ತಾಯದಿಂದ ನ್ಯಾಯ ಮಂಡಲಿ ರಚನೆಯಾಗಿ ನಮಗೆ ಆಗಿರತಕ್ಕ ಅನ್ಯಾಯ ಎಷ್ಟು ಎಂಬುದಕ್ಕೆ ಪುಷ್ಠಿಕರಣ ಕೊಡುತ್ತಿದ್ದೇನೆ.

ಈ ರೀತಿ ಪುಷ್ಠಿಕರಣ ಕೊಡುವುದಕ್ಕೆ ಆಧಾರಗಳು ಏನು ಎಂದು ಕೇಳುವುದಾದರೆ, ಅದಕ್ಕೆ ಆಧಾರ ಪ್ರತಿ ಹೆಜ್ಜೆಗೂ ತಮಿಳ್ಳಾಡಿನ ಎಲ್ಲರನ್ನೂ ಅವರು ಸಂತೈಸಿದರು. ತಮಿಳ್ಳಾಡಿನ ಎಲ್ಲಾ ಪಕ್ಷದ ಮುಖಂಡರುಗಳನ್ನು ಭೇಟಿಯಾದರು. ತಮಿಳ್ಳಾಡಿನ ಎಲ್ಲಾ ಪಕ್ಷದ ಮುಖಂಡರನ್ನು ರಾಷ್ಟ್ರಪತಿ ಭವನಕ್ಕೆ ಕರೆಸಿದರು.

ಕಾವೇರಿ ಸಂಬಂಧದಲ್ಲಿ ಅದು ಕಾವೇರಿಯ ವಿರುದ್ಧದ ಪಿತೂರಿಯ ಕೂಪವಾಗಿತ್ತು ಎಂದು ನಾನು ಹೇಳುತ್ತೇನೆ. ಅದು ಶ್ರೀ ವೆಂಕಟರಾಮನ್ ಅವರ ಕಾಲದಲ್ಲಿ ನಡೆದದ್ದು. ಇನ್ನೂ ಮುಂದೆ ಹೋಗಿ ಹೇಳುವುದಾದರೆ, ಈ ಸಂಬಂಧದಲ್ಲಿ ಒಂದು ಸಮಗ್ರ ತನಿಖೆಯನ್ನು ಕಾವೇರಿ ಸಂಬಂಧದಲ್ಲಿ ನಡೆದ ವ್ಯವಹಾರಗಳ ಬಗ್ಗೆ ನಡೆಸುವುದಕ್ಕೆ ಸುಪ್ರೀಂ ಕೋರ್ಟಿನ ನ್ಯಾಯಾಧೀಶರನ್ನು ನೇಮಿಸಬೇಕೆಂದು ಕೇಂದ್ರ ಸರ್ಕಾರವನ್ನು ಒತ್ತಾಯಮಾಡುತ್ತಿದ್ದೇನೆ ಎಂದಿದ್ದರು ವಾಟಾಳ್.

ಇದನ್ನೂ ಓದಿ : ‘ಘಜನಿ’ ಖ್ಯಾತಿಯ ಖಳನಟ ಪ್ರದೀಪ್ ರಾವತ್ ವಿಧಿವಶ!

Tags: Cauvery AgitationCauvery Water DisputeJayalalithaaKarnataka NewsKarnataka News beatkarnataka politicsKarnataka ProtestKNBPolitical HistoryTamil Nadu Karnatakavatal NagarajWater Sharing Dispute
SendShareTweet
Previous Post

‘ಘಜನಿ’ ಖ್ಯಾತಿಯ ಖಳನಟ ಪ್ರದೀಪ್ ರಾವತ್ ವಿಧಿವಶ!

Next Post

ಲಂಕಾ ತಲುಪಿದ ಭಾರತ ಟೆಸ್ಟ್ ತಂಡ : ಸರಣಿಗೂ ಮುನ್ನ ಕೊಲಂಬೊದಲ್ಲಿ 3 ದಿನಗಳ ಕಠಿಣ ಅಭ್ಯಾಸ

Related Posts

ಸಚಿವ ಸ್ಥಾನ ಕಗ್ಗಂಟು : ‘ಕೈ’ಗೆ ಬಂಡಾಯದ ಬಿಸಿ.. ಖಾತೆ ಹಂಚಿಕೆಗೂ ಹೊಸ ತಲೆನೋವು!
ರಾಜಕೀಯ

ಸಚಿವ ಸ್ಥಾನ ಕಗ್ಗಂಟು : ‘ಕೈ’ಗೆ ಬಂಡಾಯದ ಬಿಸಿ.. ಖಾತೆ ಹಂಚಿಕೆಗೂ ಹೊಸ ತಲೆನೋವು!

ಶಾಂತಿನಗರ ವಿಭಾಗದಲ್ಲಿ 8.91 ಕೋಟಿ ಅಕ್ರಮ ಆರೋಪ : ಲೋಕಾಯುಕ್ತಕ್ಕೆ ಎನ್‌.ಆರ್‌ ರಮೇಶ್‌  ದೂರು!
ಬೆಂಗಳೂರು

ಶಾಂತಿನಗರ ವಿಭಾಗದಲ್ಲಿ 8.91 ಕೋಟಿ ಅಕ್ರಮ ಆರೋಪ : ಲೋಕಾಯುಕ್ತಕ್ಕೆ ಎನ್‌.ಆರ್‌ ರಮೇಶ್‌ ದೂರು!

ಕರ್ನಾಟಕದಲ್ಲಿ ಮುಂಗಾರು ಆರ್ಭಟ : ಕರಾವಳಿ, ಮಲೆನಾಡಿಗೆ ರೆಡ್ ಅಲರ್ಟ್.. ಬೆಂಗಳೂರಿನಲ್ಲೂ ಚಳಿ ಮಿಶ್ರಿತ ಮಳೆ!
ರಾಜ್ಯ

ರಾಜ್ಯದ ಹಲವೆಡೆ ಭಾರೀ ಮಳೆ.. ಕರಾವಳಿಯಲ್ಲಿ ಶಾಲೆಗಳಿಗೆ ರಜೆ!

ಬೆಂಗಳೂರಲ್ಲಿ ಪುಡಿ ರೌಡಿಗಳ ಪುಂಡಾಟ : ಸಿಸಿಟಿವಿ ಸಾಕ್ಷಿ ಇದ್ರೂ FIRಗೆ ಪೊಲೀಸರು ಹಿಂದೇಟು?
ಬೆಂಗಳೂರು

ಬೆಂಗಳೂರಲ್ಲಿ ಪುಡಿ ರೌಡಿಗಳ ಪುಂಡಾಟ : ಸಿಸಿಟಿವಿ ಸಾಕ್ಷಿ ಇದ್ರೂ FIRಗೆ ಪೊಲೀಸರು ಹಿಂದೇಟು?

ಅವಳಿ ಜಿಲ್ಲೆಗಳಿಗೆ ಸಚಿವ ಸ್ಥಾನ ಇಲ್ಲ : ಸರ್ಕಾರದ ವಿರುದ್ಧ ಸಮತಾ ಸೈನಿಕ ದಳದ ರಾಜ್ಯಾಧ್ಯಕ್ಷ  ವೆಂಕಟರಮಣಪ್ಪ ಆಕ್ರೋಶ!
ಬೆಂಗಳೂರು

ಅವಳಿ ಜಿಲ್ಲೆಗಳಿಗೆ ಸಚಿವ ಸ್ಥಾನ ಇಲ್ಲ : ಸರ್ಕಾರದ ವಿರುದ್ಧ ಸಮತಾ ಸೈನಿಕ ದಳದ ರಾಜ್ಯಾಧ್ಯಕ್ಷ ವೆಂಕಟರಮಣಪ್ಪ ಆಕ್ರೋಶ!

ಸಂಪುಟ ‘ವಿಸ್ತರಣೆ’ ಬೆನ್ನಲ್ಲೇ ಅಸಮಾಧಾನ ಸ್ಫೋಟ ; 10ಕ್ಕೂ ಹೆಚ್ಚು ‘ಕೈ’ ಶಾಸಕರು ಇಂದೇ  ರಾಜೀನಾಮೆ?
ರಾಜಕೀಯ

ಸಂಪುಟ ‘ವಿಸ್ತರಣೆ’ ಬೆನ್ನಲ್ಲೇ ಅಸಮಾಧಾನ ಸ್ಫೋಟ ; 10ಕ್ಕೂ ಹೆಚ್ಚು ‘ಕೈ’ ಶಾಸಕರು ಇಂದೇ ರಾಜೀನಾಮೆ?

Next Post
ಲಂಕಾ ತಲುಪಿದ ಭಾರತ ಟೆಸ್ಟ್ ತಂಡ : ಸರಣಿಗೂ ಮುನ್ನ ಕೊಲಂಬೊದಲ್ಲಿ 3 ದಿನಗಳ ಕಠಿಣ ಅಭ್ಯಾಸ

ಲಂಕಾ ತಲುಪಿದ ಭಾರತ ಟೆಸ್ಟ್ ತಂಡ : ಸರಣಿಗೂ ಮುನ್ನ ಕೊಲಂಬೊದಲ್ಲಿ 3 ದಿನಗಳ ಕಠಿಣ ಅಭ್ಯಾಸ

  • Trending
  • Comments
  • Latest
ವಿಜಯ ಪತಾಕೆ ಹಾರಿಸಿದ ವಿಜಯ ಭಾರತಿ ವಿದ್ಯಾರ್ಥಿನಿ!

ವಿಜಯ ಪತಾಕೆ ಹಾರಿಸಿದ ವಿಜಯ ಭಾರತಿ ವಿದ್ಯಾರ್ಥಿನಿ!

ಉಡುಪಿ KMCಯಲ್ಲಿ ಬಡವರಿಗಿಲ್ಲ ಆಯುಷ್ಮಾನ್ ಸೌಲಭ್ಯ – ಕ್ರಮಕ್ಕೆ ಆಗ್ರಹಿಸಿದ ಬಿಜೆಪಿ ಯುವ ಮೋರ್ಚಾ!

ಉಡುಪಿ KMCಯಲ್ಲಿ ಬಡವರಿಗಿಲ್ಲ ಆಯುಷ್ಮಾನ್ ಸೌಲಭ್ಯ – ಕ್ರಮಕ್ಕೆ ಆಗ್ರಹಿಸಿದ ಬಿಜೆಪಿ ಯುವ ಮೋರ್ಚಾ!

ಚೆಕ್​ಬೌನ್ಸ್​ ಪ್ರಕರಣ; ಆರೋಪಿ ಸೆರೆ

ಚೆಕ್​ಬೌನ್ಸ್​ ಪ್ರಕರಣ; ಆರೋಪಿ ಸೆರೆ

ಹೈಡ್ರೋವಿಡ್ ಗಾಂಜಾ ಮಾರಾಟಕ್ಕೆ ಯತ್ನ – ಕುಂದಾಪುರ ಕಾಲೇಜಿನ ವಿದ್ಯಾರ್ಥಿನಿ ಬಂಧನ!

ಹೈಡ್ರೋವಿಡ್ ಗಾಂಜಾ ಮಾರಾಟಕ್ಕೆ ಯತ್ನ – ಕುಂದಾಪುರ ಕಾಲೇಜಿನ ವಿದ್ಯಾರ್ಥಿನಿ ಬಂಧನ!

ಕುಡಿದ ಮತ್ತಿನಲ್ಲಿ ಸಿಕ್ಕ ಸಿಕ್ಕವರನ್ನು ಕಚ್ಚಿದ ವ್ಯಕ್ತಿ!

ಕುಡಿದ ಮತ್ತಿನಲ್ಲಿ ಸಿಕ್ಕ ಸಿಕ್ಕವರನ್ನು ಕಚ್ಚಿದ ವ್ಯಕ್ತಿ!

ಹೃದಯಾಘಾತಕ್ಕೆ ಪತಿ ಬಲಿ; 7ನೇ ಮಹಡಿಯಿಂದ ಹಾರಿದ ಪತ್ನಿ!

ಹೃದಯಾಘಾತಕ್ಕೆ ಪತಿ ಬಲಿ; 7ನೇ ಮಹಡಿಯಿಂದ ಹಾರಿದ ಪತ್ನಿ!

ಕನ್ನಡದಲ್ಲಿ ಐಎಸ್ ಬರೆದ ಮೊದಲಿಗ ಹಾಗೂ ನಟ ಶಿವರಾಮ್ ಆರೋಗ್ಯ ಸ್ಥಿತಿ ಗಂಭೀರ!

ಕನ್ನಡದಲ್ಲಿ ಐಎಸ್ ಬರೆದ ಮೊದಲಿಗ ಹಾಗೂ ನಟ ಶಿವರಾಮ್ ಆರೋಗ್ಯ ಸ್ಥಿತಿ ಗಂಭೀರ!

ಪಿಎಂ ಕಿಸಾನ್ 16ನೇ ಕಂತಿನ ಹಣ ಬಿಡುಗಡೆ!

ಪಿಎಂ ಕಿಸಾನ್ 16ನೇ ಕಂತಿನ ಹಣ ಬಿಡುಗಡೆ!

ಸಚಿವ ಸ್ಥಾನ ಕಗ್ಗಂಟು : ‘ಕೈ’ಗೆ ಬಂಡಾಯದ ಬಿಸಿ.. ಖಾತೆ ಹಂಚಿಕೆಗೂ ಹೊಸ ತಲೆನೋವು!

ಸಚಿವ ಸ್ಥಾನ ಕಗ್ಗಂಟು : ‘ಕೈ’ಗೆ ಬಂಡಾಯದ ಬಿಸಿ.. ಖಾತೆ ಹಂಚಿಕೆಗೂ ಹೊಸ ತಲೆನೋವು!

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಚೇರಿಯಲ್ಲಿ ನೇಮಕಾತಿಗೆ ಅರ್ಜಿ ಆಹ್ವಾನ

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಚೇರಿಯಲ್ಲಿ ನೇಮಕಾತಿಗೆ ಅರ್ಜಿ ಆಹ್ವಾನ

ಲಂಕಾ ತಲುಪಿದ ಭಾರತ ಟೆಸ್ಟ್ ತಂಡ : ಸರಣಿಗೂ ಮುನ್ನ ಕೊಲಂಬೊದಲ್ಲಿ 3 ದಿನಗಳ ಕಠಿಣ ಅಭ್ಯಾಸ

ಲಂಕಾ ತಲುಪಿದ ಭಾರತ ಟೆಸ್ಟ್ ತಂಡ : ಸರಣಿಗೂ ಮುನ್ನ ಕೊಲಂಬೊದಲ್ಲಿ 3 ದಿನಗಳ ಕಠಿಣ ಅಭ್ಯಾಸ

ಕಾವೇರಿಗಾಗಿ ಉಪವಾಸ ಕೂತಿದ್ದ ಜಯಲಲಿತಾ ವಾಟಾಳ್ ನಾಗರಾಜ್ ಹೋರಾಟಕ್ಕೂ ಇದೆ ದೀರ್ಘ ಇತಿಹಾಸ!

ಕಾವೇರಿಗಾಗಿ ಉಪವಾಸ ಕೂತಿದ್ದ ಜಯಲಲಿತಾ ವಾಟಾಳ್ ನಾಗರಾಜ್ ಹೋರಾಟಕ್ಕೂ ಇದೆ ದೀರ್ಘ ಇತಿಹಾಸ!

Recent News

ಬಂಧು ಮಿತ್ರರೇ ನಮಸ್ತೇ,

ನಿಖರ, ಪ್ರಖರ, ಸ್ಪಷ್ಟ ಹಾಗೂ ವಸ್ತುನಿಷ್ಠ ಸುದ್ದಿ ನೀಡುವ ಭರವಸೆಯೊಂದಿಗೆ ನಮ್ಮ “ಕರ್ನಾಟಕ ನ್ಯೂಸ್ ಬೀಟ್” ಸುದ್ದಿ ಮಾಧ್ಯಮವನ್ನು ಚಾಲ್ತಿಗೆ ತಂದಿದ್ದೇವೆ. ಜಿಲ್ಲಾ ಸುದ್ದಿ, ಪ್ರಸ್ತುತ ಸುದ್ದಿ, ವಿಶೇಷ ಅಂಕಣ, ಧರ್ಮ, ಸನಾತನ, ರಾಜಕೀಯ, ಸಿನಿಮಾ, ಅಪರಾಧ, ಕ್ರೀಡೆ, ಆರೋಗ್ಯ, ಆಹಾರ, ತಂತ್ರಜ್ಞಾನ, ಕೃಷಿ, ಪರಿಸರ, ಸಾಹಿತ್ಯ, ವಾಣಿಜ್ಯ, ಜ್ಯೋತಿಷ್ಯ, ಪುರಾಣ, ಇತಿಹಾಸ ಸೇರಿದಂತೆ ಈ ಸಮಾಜದ ಪ್ರತಿ ವಿಭಾಗದಲ್ಲೂ ನಾವು ಕಣ್ಣಿಡುತ್ತಾ, ಅಲ್ಲಿನ ಆಗು-ಹೋಗುಗಳನ್ನು ನಿರಂತರವಾಗಿ ನಿಮ್ಮ ಮುಂದೆ ತೆರೆದಿಡುತ್ತಾ ಸಾಗುತ್ತೇವೆ. ಒಟ್ಟಿನಲ್ಲಿ, ಬರವಣಿಗೆಯಲ್ಲೇ ಭಗವಂತನನ್ನ ಕಾಣುತ್ತಿರುವ, ಸದೃಢ ತಂಡದೊಂದಿಗೆ, ಕರ್ನಾಟಕ ನ್ಯೂಸ್ ಬೀಟ್ ಸುದ್ದಿ ಮಾಧ್ಯಮವು, ವಿಶೇಷವಾಗಿ ಸುದ್ದಿ, ವರದಿ, ಅಂಕಣ, ಚಿತ್ರಣಗಳನ್ನು ಹೊತ್ತು ತರುತ್ತಾ, ಸದಾ ನಿಮ್ಮೊಂದಿಗೆ ಬೆಸೆದುಕೊಂಡಿರಲಿದೆ.

Follow Us

Join Our WhatsApp Channel

Browse by Category

  • national
  • News & Politics
  • state
  • Uncategorized
  • ಅಪರಾಧ
  • ಅಮರಾವತಿ
  • ಆರೋಗ್ಯ-ಆಹಾರ
  • ಇತರೆ ಸುದ್ದಿ
  • ಇತಿಹಾಸ
  • ಉಡುಪಿ
  • ಉತ್ತರ ಕನ್ನಡ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಕಲಬುರ್ಗಿ
  • ಕೃಷಿ-ಪರಿಸರ
  • ಕೊಡಗು
  • ಕೊಪ್ಪಳ
  • ಕೋಲಾರ
  • ಕ್ರೀಡೆ
  • ಗದಗ
  • ಚಾಮರಾಜನಗರ
  • ಚಿಕ್ಕಬಳ್ಳಾಫುರ
  • ಚಿಕ್ಕಮಗಳೂರು
  • ಚಿತ್ರದುರ್ಗ
  • ಜ್ಯೋತಿಷ್ಯ
  • ತಂತ್ರಜ್ಞಾನ
  • ತುಮಕೂರು
  • ದಕ್ಷಿಣ ಕನ್ನಡ
  • ದಾವಣಗೆರೆ
  • ದೇಶ
  • ಧರ್ಮ-ಸನಾತನ
  • ಧಾರವಾಡ
  • ಪುರಾಣ
  • ಬಳ್ಳಾರಿ
  • ಬಾಗಲಕೋಟೆ
  • ಬೀದರ್
  • ಬೆಂಗಳೂರು
  • ಬೆಂಗಳೂರು ಗ್ರಾಮಾಂತರ
  • ಬೆಂಗಳೂರು ನಗರ
  • ಬೆಳಗಾವಿ
  • ಮಂಗಳೂರು
  • ಮಂಡ್ಯ
  • ಮುಖ್ಯಾಂಶಗಳು
  • ಮೈಸೂರು
  • ಯಾದಗಿರಿ
  • ರಾಜಕೀಯ
  • ರಾಜ್ಯ
  • ರಾಮನಗರ
  • ರಾಯಚೂರು
  • ವಾಣಿಜ್ಯ-ವ್ಯಾಪಾರ
  • ವಿಜಯನಗರ
  • ವಿಜಯಪುರ
  • ವಿದೇಶ
  • ವಿಶೇಷ ಅಂಕಣ
  • ವೀಡಿಯೊ ಸುದ್ದಿ
  • ವ್ಯಾಪಾರ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ಶಿವಮೊಗ್ಗ
  • ಸಿನಿಮಾ
  • ಸಿನಿಮಾ-ಮನರಂಜನೆ
  • ಹಾವೇರಿ
  • ಹಾಸನ
  • ಹುಬ್ಬಳ್ಳಿ

Recent News

ಸಚಿವ ಸ್ಥಾನ ಕಗ್ಗಂಟು : ‘ಕೈ’ಗೆ ಬಂಡಾಯದ ಬಿಸಿ.. ಖಾತೆ ಹಂಚಿಕೆಗೂ ಹೊಸ ತಲೆನೋವು!

ಸಚಿವ ಸ್ಥಾನ ಕಗ್ಗಂಟು : ‘ಕೈ’ಗೆ ಬಂಡಾಯದ ಬಿಸಿ.. ಖಾತೆ ಹಂಚಿಕೆಗೂ ಹೊಸ ತಲೆನೋವು!

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಚೇರಿಯಲ್ಲಿ ನೇಮಕಾತಿಗೆ ಅರ್ಜಿ ಆಹ್ವಾನ

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಚೇರಿಯಲ್ಲಿ ನೇಮಕಾತಿಗೆ ಅರ್ಜಿ ಆಹ್ವಾನ

  • About
  • Advertise
  • Privacy & Policy
  • Contact Us

© 2025 Karnatakanewsbeat

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಬ್ಲಾಗ್
  • ಜಿಲ್ಲಾ ಸುದ್ದಿ
    • ಬೆಂಗಳೂರು ನಗರ
    • ಬೆಂಗಳೂರು ಗ್ರಾಮಾಂತರ
    • ಬೆಳಗಾವಿ
    • ಬೀದರ್
    • ಬಾಗಲಕೋಟೆ
    • ಬಳ್ಳಾರಿ
    • ಚಾಮರಾಜನಗರ
    • ದಕ್ಷಿಣ ಕನ್ನಡ
    • ಚಿಕ್ಕಬಳ್ಳಾಪುರ
    • ಮಂಗಳೂರು
    • ಧಾರವಾಡ
    • ದಾವಣಗೆರೆ
    • ಚಿತ್ರದುರ್ಗ
    • ಗದಗ
    • ಹಾಸನ
    • ವಿಜಯಪುರ
    • ಹಾವೇರಿ
    • ಕಲಬುರ್ಗಿ
    • ಕೋಲಾರ
    • ರಾಯಚೂರು
    • ಕೊಡಗು
    • ರಾಯಚೂರು
    • ರಾಮನಗರ
    • ಕೊಪ್ಪಳ
    • ತುಮಕೂರು
    • ಮೈಸೂರು
    • ಮಂಡ್ಯ
    • ಉಡುಪಿ
    • ಚಿಕ್ಕಮಗಳೂರು
    • ಉತ್ತರ ಕನ್ನಡ
    • ವಿಜಯನಗರ
    • ಶಿವಮೊಗ್ಗ
    • ಯಾದಗಿರಿ
  • ರಾಜ್ಯ
  • ರಾಜಕೀಯ
  • ದೇಶ
  • ವಿದೇಶ
  • ಕ್ರೀಡೆ
  • ಸಿನಿಮಾ-ಮನರಂಜನೆ
  • ವಿಶೇಷ ಅಂಕಣ
  • ಧರ್ಮ-ಸನಾತನ
  • ಅಪರಾಧ
  • ಆರೋಗ್ಯ-ಆಹಾರ
  • ತಂತ್ರಜ್ಞಾನ
  • ಕೃಷಿ-ಪರಿಸರ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ವಾಣಿಜ್ಯ-ವ್ಯಾಪಾರ
  • ಜ್ಯೋತಿಷ್ಯ
  • ಪುರಾಣ
  • ಇತಿಹಾಸ

© 2025 Karnatakanewsbeat