ಬೆಂಗಳೂರು : ಯುವಕನೋರ್ವ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೊಮ್ಮನಹಳ್ಳಿಯ ರೂಪೇನ ಅಗ್ರಹಾರ ಬಳಿಯ ಗುಲ್ಬರ್ಗಾ ಕಾಲೋನಿಯಲ್ಲಿ ನಡೆದಿದೆ. ಶಿವಕುಮಾರ್ ಆತ್ಮಹತ್ಯೆಗೆ ಮಾಡಿಕೊಂಡ ಯುವಕ.
ಡ್ರೈವರ್ ಕೆಲಸ ಮಾಡಿಕೊಂಡಿದ್ದ ಶಿವಕುಮಾರ್, ನಿನ್ನೆ ಬೆಳಗ್ಗೆ ಮನೆಯ ರೂಮಿನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಕೆಲವು ದಿನಗಳ ಹಿಂದೆ ಅಯ್ಯಪ್ಪ ಎಂಬ ವ್ಯಕ್ತಿ ರೂಪೇನ ಅಗ್ರಹಾರ ಬಳಿಯ ಸರ್ಕಲ್‌ನಲ್ಲಿ ಬ್ಯಾನರ್ ಹಾಕಿದ್ದ. ಈ ಬ್ಯಾನ್‌ರನ್ನು ಯಾರೋ ಹರಿದು ಹಾಕಿದ್ರಂತೆ. ಈ ವೇಳೆ ಶಿವಕುಮಾರೇ ಹರಿದು ಹಾಕಿದ್ದಾನೆಂದು ಅಯ್ಯಪ್ಪ ಆವಾಜ್ ಹಾಕಿದ್ನಂತೆ. ಅಲ್ಲದೆ, ಬ್ಯಾನರ್ ಹರಿದು ಹಾಕಿರೋ ಬಗ್ಗೆ ಪೋಲಿಸರಿಗೆ ದೂರು ಕೂಡ ಕೊಟ್ಟಿದ್ದೆನೆಂದು ಹೇಳಿದ್ದನಂತೆ. ಇದರಿಂದ ಹೆದರಿದ ಶಿವಕುಮಾರ್ ಮೂರು ದಿನಗಳ ಕಾಲ ಮನೆ ಬಿಟ್ಟಿದ್ದ.
ಈ ಸಮಯದಲ್ಲಿ ಶಿವಕುಮಾರ್ ಮನೆ ಬಳಿ ಪೋಲಿಸರು ಬಂದು ವಿಚಾರಿಸಿದ್ದಾರಂತೆ. ಶಿವಕುಮಾರ್ ಮನೆಗೆ ಬಂದ ನಂತರ ಊಟ ಮಾಡಿ ಮಹಡಿ ಮೇಲೆ ಹೋಗಿದ್ದ. ನಿನ್ನೆ ಬೆಳಗ್ಗೆ ತಾಯಿ ಮಹಡಿ ಮೇಲೆ ಹೋದಾಗ ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ. ಘಟನಾ ಸಂಬಂಧ ಬೊಮ್ಮನಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದವರೆಸಿದ್ದಾರೆ.
ಇದನ್ನೂ ಓದಿ : KPSC ನೇಮಕಾತಿ ಹಗರಣ ; ತನಿಖಾಧಿಕಾರಿಯಾಗಿ CID ಎಸ್‌ಪಿ ರಾಘವೇಂದ್ರ ಹೆಗಡೆ ನೇಮಕ



















