ತಮಿಳು ಸೂಪರ್ ಸ್ಟಾರ್ ವಿಜಯ್ ಅಭಿನಯದ ಬಹುನಿರೀಕ್ಷಿತ ‘ಜನನಾಯಗನ್’ ಸಿನಿಮಾ ನಾಳೆ ವಿಶ್ವದಾದ್ಯಂತ ತೆರೆಕಾಣಲಿದೆ. ಇದು ವಿಜಯ್ ಅವರ ಕೊನೆಯ ಚಿತ್ರವಾಗಿರುವ ಕಾರಣ ಅಭಿಮಾನಿಗಳಲ್ಲಿ ಭಾರೀ ಕ್ರೇಜ್ ಸೃಷ್ಟಿಯಾಗಿದೆ. ಮುಂಗಡ ಬುಕಿಂಗ್‌ಗೆ ಭರ್ಜರಿ ಪ್ರತಿಕ್ರಿಯೆ ಸಿಕ್ಕಿದ್ದು, ಮೊದಲ ದಿನವೇ 100 ಕೋಟಿ ಕ್ಲಬ್ ಸೇರುವ ಗುರಿಯನ್ನು ಚಿತ್ರತಂಡ ಹೊಂದಿದೆ ಎನ್ನಲಾಗಿದೆ.
ಭಾರತದಲ್ಲಿ ಸಿನಿಮಾ ಬಿಡುಗಡೆಗೂ ಮುನ್ನವೇ ಮುಂಗಡ ಬುಕಿಂಗ್ ಭರ್ಜರಿಯಾಗಿ ನಡೆಯುತ್ತಿದೆ. ದೇಶಾದ್ಯಂತ 6.45 ಲಕ್ಷಕ್ಕೂ ಹೆಚ್ಚು ಟಿಕೆಟ್‌ಗಳು ಮಾರಾಟವಾಗಿವೆ ಎಂದು ವರದಿಯಾಗಿದೆ. ಬೆಂಗಳೂರಿನಲ್ಲಿ ಬೆಳಗಿನ 6 ಗಂಟೆಯ ಶೋಗಳಿಗೂ ಭಾರೀ ಬೇಡಿಕೆ ಕಂಡುಬಂದಿದ್ದು, ಹಲವು ಶೋಗಳು ವೇಗವಾಗಿ ಹೌಸ್‌ಫುಲ್ ಆಗುತ್ತಿವೆ.
ಅಮೆರಿಕಾ ಸೇರಿದಂತೆ ವಿದೇಶಗಳಲ್ಲೂ ವಿಜಯ್ ದಳಪತಿ ಕ್ರೇಜ್ ಜೋರಾಗಿದೆ. ವಿಜಯ್ ಅವರ ಕೊನೆಯ ಸಿನಿಮಾ ‘ಜನನಾಯಗನ್’ಗೆ ವಿದೇಶಗಳಲ್ಲೂ ಭಾರೀ ಬೇಡಿಕೆ ಸೃಷ್ಟಿಯಾಗಿದೆ. ಚಿತ್ರಕ್ಕೆ ಸಿಕ್ಕಿರುವ ಆರಂಭಿಕ ಪ್ರತಿಕ್ರಿಯೆ ನೋಡಿದರೆ ದಾಖಲೆ ಓಪನಿಂಗ್ ಪಡೆಯುವ ನಿರೀಕ್ಷೆ ಮೂಡಿದೆ.
ಬೆಂಗಳೂರಿನಲ್ಲಿ ‘ಜನನಾಯಗನ್’ ಟಿಕೆಟ್‌ಗಳಿಗೆ ಭಾರೀ ಬೆಲೆ ನಿಗದಿಯಾಗಿರುವುದು ಕೂಡ ಚರ್ಚೆಗೆ ಕಾರಣವಾಗಿದೆ. ಕೆಲವು ಚಿತ್ರಮಂದಿರಗಳಲ್ಲಿ ಟಿಕೆಟ್ ಬೆಲೆ ₹2,500ರವರೆಗೂ ತಲುಪಿದೆ ಎಂದು ವರದಿಯಾಗಿದ್ದು, ದುಬಾರಿ ಬೆಲೆಯ ನಡುವೆಯೂ ಶೋಗಳು ಸೋಲ್ಡ್ ಔಟ್ ಆಗುತ್ತಿವೆ. ಹೀಗಾಗಿ ಬೆಂಗಳೂರಿನಲ್ಲಿ ವಿಜಯ್ ಕ್ರೇಜ್ ಮತ್ತೊಮ್ಮೆ ಸಾಬೀತಾಗಿದೆ.
ಇನ್ನು, ಸಿನಿಮಾ ಬಿಡುಗಡೆಗೂ ಮುನ್ನವೇ ಭರ್ಜರಿ ಮುಂಗಡ ಬುಕಿಂಗ್ ಕಂಡಿರುವ ‘ಜನನಾಯಗನ್’, ಮೊದಲ ದಿನವೇ 100 ಕೋಟಿ ಕ್ಲಬ್ ಸೇರಲಿದೆಯೇ ಎಂಬ ಕುತೂಹಲ ಮೂಡಿಸಿದೆ. ವಿಜಯ್ ಅವರ ಕೊನೆಯ ಸಿನಿಮಾ ಅಭಿಮಾನಿಗಳ ಪಾಲಿಗೆ ವಿಶೇಷವಾಗಿದ್ದು, ನಾಳೆ ವಿಶ್ವದಾದ್ಯಂತ ವಿಜಯ್ ದರ್ಬಾರ್ ಶುರುವಾಗಲಿದೆ.
ಇದನ್ನೂ ಓದಿ : ರಾಜ್ಯ ಖನಿಜಗಳ ನಿಗಮದಲ್ಲಿ 50 ಎಂಜಿನಿಯರ್ ಗಳ ನೇಮಕಾತಿ : ಸಂದರ್ಶನದ ದಿನಾಂಕ ಇಲ್ಲಿದೆ



















