ಬಾಗಲಕೋಟೆ : ಅಯೋಧ್ಯೆಯ ರಾಮ ಮಂದಿರದಲ್ಲಿ ನಡೆದಿರೋದು ದರೋಡೆ ವಿಚಾರವಾಗಿ ಮಾತನಾಡಿದ ಶಾಸಕ ಆರ್.ಬಿ. ತಿಮ್ಮಾಪುರ, ರಾಮನ ಹೆಸರಿನಲ್ಲಿ ದರೋಡೆ ನಡೆಯುತ್ತಿದೆ. ಇದನ್ನೆಲ್ಲ ನೋಡುತ್ತಾ ದೇಶದ ಪ್ರಧಾನಿಗಳು ಕಣ್ಮುಚ್ಚಿ ಕೂತಿದ್ದಾರೆ. ಏನಾಗಿದೆ ಎಂದು ದೇಶದ ಪ್ರಧಾನಿಗಳು ಬಾಯಿಬಿಟ್ಟು ಹೇಳಬೇಕು. ಸುಮ್ಮನಾದರೆ ಇವ್ರದೇನು ಪಾಲು ಇದಿಯಾ ಎಂದು ಜನರು ತಪ್ಪು ತಿಳಿದುಕೊಳ್ತಾರೆ ಎಂದು ಹೇಳಿದ್ದಾರೆ.
ಬಾಗಲಕೋಟೆಯಲ್ಲಿ ವರದಿಗಾರರೊಂದಿಗೆ ಮಾತನಾಡಿದ ಅವರು, ಪ್ರಧಾನಿಗಳು ಯಾಕೆ ಬಾಯಿ ಬಿಟ್ಟು ಮಾತನಾಡ್ತಿಲ್ಲ? ರಾಮ ಮಂದಿರ ಕಟ್ಟುತ್ತೇವೆ ಎಂಬ ಸ್ಲೋಗನ್ ಮೇಲೆ ಅಧಿಕಾರಕ್ಕೆ ಬಂದವ್ರು ಏನಾಗಿದೆ ಎಂಬುದನ್ನು ಜನತೆಗೆ ಹೇಳಿ ಎಂದಿದ್ದಾರೆ.
ನಿಮ್ಮ ಮಾತಿನಿಂದ ಜನ ಉತ್ತರ ಬಯಸುತ್ತಾರೆ. ಬಾಯಿ ಬಿಡದೇ ಇದ್ರೆ ಜನರಲ್ಲಿ ಶಂಕೆ ಮೂಡುತ್ತದೆ. ಇದರ ಬಗ್ಗೆ ಆನಾದ್ರೂ ಮಾತಾಡಿ ಎಂದು ಆರ್.ಬಿ. ತಿಮ್ಮಾಪುರ ಹೇಳಿದ್ದಾರೆ.



















