ಬೆಂಗಳೂರು : ಸಂಬಳ ಪಡೆಯುವ ಉದ್ಯೋಗಿಗಳು, ಪಿಂಚಣಿದಾರರು ಪ್ರತಿ ವರ್ಷ ಐಟಿ-ರಿಟರ್ನ್ಸ್ (ಆದಾಯ ತೆರಿಗೆ ರಿಟರ್ನ್ಸ್) ಸಲ್ಲಿಸುತ್ತಾರೆ. ತೆರಿಗೆದಾರರಂತೂ ಐಟಿಆರ್ ಸಲ್ಲಿಸುವುದನ್ನು ತಪ್ಪಿಸುವುದಿಲ್ಲ. ಆದರೆ, ಸಂಬಳ ಪಡೆಯುವ ಪ್ರತಿಯೊಬ್ಬರೂ ಐಟಿಆರ್ ಸಲ್ಲಿಸಬೇಕು ಎಂಬ ತಪ್ಪು ಕಲ್ಪನೆ ಜನರಲ್ಲಿದೆ. ಆದರೆ, ಸಂಬಳ ಪಡೆಯುವ ಪ್ರತಿಯೊಬ್ಬರೂ ಐಟಿ ರಿಟರ್ನ್ಸ್ ಸಲ್ಲಿಸಬೇಕಿಲ್ಲ. ವರ್ಷಕ್ಕೆ 4 ಲಕ್ಷ ರೂ.ಗಿಂತ ಕಡಿಮೆ ಸಂಬಳದ ಪ್ಯಾಕೇಜ್ ಇರುವವರು ಐಟಿಆರ್ ಸಲ್ಲಿಸಬೇಕಿಲ್ಲ.
ಹೌದು, ಕೇಂದ್ರ ಸರ್ಕಾರವು ವರ್ಷಕ್ಕೆ 4 ಲಕ್ಷ ರೂಪಾಯಿವರೆಗೆ ಸಂಬಳ ಇರುವವರಿಗೆ ಐಟಿಆರ್ ಸಲ್ಲಿಸುವುದರಿಂದ ಸಂಪೂರ್ಣವಾಗಿ ವಿನಾಯಿತಿ ನೀಡಿದೆ. ಹೊಸ ತೆರಿಗೆ ಪದ್ಧತಿಯನ್ನು ಆಯ್ಕೆ ಮಾಡಿಕೊಂಡವರಿಗೆ 4 ಲಕ್ಷ ರೂಪಾಯಿ ಹಾಗೂ ಹಳೆಯ ತೆರಿಗೆ ಪದ್ಧತಿಯನ್ನು ಆಯ್ಕೆ ಮಾಡಿಕೊಂಡವರಿಗೆ 2.5 ಲಕ್ಷ ರೂ.ವರೆಗೆ ಐಟಿಆರ್ ಸಲ್ಲಿಸುವುದರಿಂದ ವಿನಾಯಿತಿ ನೀಡಲಾಗಿದೆ.
ಆದರೆ, ವರ್ಷಕ್ಕೆ 4 ಲಕ್ಷ ರೂಪಾಯಿಗಿಂತ ಹೆಚ್ಚಿನ ಸಂಬಳ ಇದ್ದವರು ಐಟಿಆರ್ ಸಲ್ಲಿಸುವುದು ಹಲವು ದೃಷ್ಟಿಯಿಂದ ಒಳ್ಳೆಯ ರೂಢಿಯಾಗಿದೆ. 12.75 ಲಕ್ಷ ರೂಪಾಯಿವರೆಗೆ ಸಂಬಳ ಇದ್ದರೂ ಆದಾಯ ತೆರಿಗೆಯಿಂದ ವಿನಾಯಿತಿ ನೀಡಲಾಗಿದೆ. ಆದರೂ, 4 ಲಕ್ಷ ರೂಪಾಯಿಗಿಂತ ಹೆಚ್ಚಿನ ಸಂಬಳ ಇದ್ದವರು ಪ್ರತಿ ವರ್ಷ ಐಟಿಆರ್ ಸಲ್ಲಿಸುವುದು ಉತ್ತಮ.
ಮನೆ ಖರೀದಿ, ನಿರ್ಮಾಣಕ್ಕಾಗಿ ಸಾಲ ಪಡೆದುಕೊಳ್ಳಬೇಕಾದರೆ ಬ್ಯಾಂಕುಗಳು 3 ವರ್ಷಗಳ ಐಟಿ ರಿಟರ್ನ್ಸ್ ಸಲ್ಲಿಸಿದ ದಾಖಲೆ ಕೇಳುತ್ತವೆ. ವೀಸಾಗೆ ಅರ್ಜಿ ಸಲ್ಲಿಸುವಾಗಲೂ ಐಟಿ ರಿಟರ್ನ್ಸ್ ಸಲ್ಲಿಕೆ ದಾಖಲೆ ಬೇಕು. ಇಂತಹ ಸಂದರ್ಭಗಳಲ್ಲಿ ಐಟಿ ರಿಟರ್ನ್ಸ್ ದಾಖಲೆಯು ಪ್ರಮುಖವಾಗುತ್ತದೆ. ಹಾಗೆಯೇ, ನೀವು ಎಷ್ಟು ಆದಾಯ ಹೊಂದಿದ್ದೀರಿ ಎಂಬುದಕ್ಕೆ ನಿಖರ ದಾಖಲೆ ಇರುತ್ತದೆ. 2026ರಲ್ಲಿ ಜುಲೈ 31 ಐಟಿಆರ್ ಸಲ್ಲಿಸಲು ಕೊನೆಯ ದಿನವಾಗಿದೆ.
ಇದನ್ನೂ ಓದಿ : ಬೆಂಗಳೂರಿನ NIMHANS ಸಂಸ್ಥೆಯಲ್ಲಿ 2 ಹುದ್ದೆಗಳ ನೇಮಕಾತಿ : ಸಂದರ್ಶನದ ದಿನಾಂಕ ಇಲ್ಲಿದೆ



















