ನ್ಯೂಸ್ ಬೀಟ್

ನಾಗರಾಜ್ ಅರೆಹೊಳೆ

ಪ್ರಧಾನ ಸಂಪಾದಕರು

newsbeatkarnataka@gmail.com

  • ಬ್ಲಾಗ್
  • ಜಿಲ್ಲಾ ಸುದ್ದಿ
    • ಬೆಂಗಳೂರು ನಗರ
    • ಬೆಂಗಳೂರು ಗ್ರಾಮಾಂತರ
    • ಬೆಳಗಾವಿ
    • ಬೀದರ್
    • ಬಾಗಲಕೋಟೆ
    • ಬಳ್ಳಾರಿ
    • ಚಾಮರಾಜನಗರ
    • ದಕ್ಷಿಣ ಕನ್ನಡ
    • ಚಿಕ್ಕಬಳ್ಳಾಪುರ
    • ಮಂಗಳೂರು
    • ಧಾರವಾಡ
    • ದಾವಣಗೆರೆ
    • ಚಿತ್ರದುರ್ಗ
    • ಗದಗ
    • ಹಾಸನ
    • ವಿಜಯಪುರ
    • ಹಾವೇರಿ
    • ಕಲಬುರ್ಗಿ
    • ಕೋಲಾರ
    • ರಾಯಚೂರು
    • ಕೊಡಗು
    • ರಾಯಚೂರು
    • ರಾಮನಗರ
    • ಕೊಪ್ಪಳ
    • ತುಮಕೂರು
    • ಮೈಸೂರು
    • ಮಂಡ್ಯ
    • ಉಡುಪಿ
    • ಚಿಕ್ಕಮಗಳೂರು
    • ಉತ್ತರ ಕನ್ನಡ
    • ವಿಜಯನಗರ
    • ಶಿವಮೊಗ್ಗ
    • ಯಾದಗಿರಿ
  • ರಾಜ್ಯ
  • ರಾಜಕೀಯ
  • ದೇಶ
  • ವಿದೇಶ
  • ಕ್ರೀಡೆ
  • ಸಿನಿಮಾ-ಮನರಂಜನೆ
  • ವಿಶೇಷ ಅಂಕಣ
  • ಧರ್ಮ-ಸನಾತನ
  • ಅಪರಾಧ
  • ಆರೋಗ್ಯ-ಆಹಾರ
  • ತಂತ್ರಜ್ಞಾನ
  • ಕೃಷಿ-ಪರಿಸರ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ವಾಣಿಜ್ಯ-ವ್ಯಾಪಾರ
  • ಜ್ಯೋತಿಷ್ಯ
  • ಪುರಾಣ
  • ಇತಿಹಾಸ
No Result
View All Result
Karnataka News Beat
  • ಬ್ಲಾಗ್
  • ಜಿಲ್ಲಾ ಸುದ್ದಿ
    • ಬೆಂಗಳೂರು ನಗರ
    • ಬೆಂಗಳೂರು ಗ್ರಾಮಾಂತರ
    • ಬೆಳಗಾವಿ
    • ಬೀದರ್
    • ಬಾಗಲಕೋಟೆ
    • ಬಳ್ಳಾರಿ
    • ಚಾಮರಾಜನಗರ
    • ದಕ್ಷಿಣ ಕನ್ನಡ
    • ಚಿಕ್ಕಬಳ್ಳಾಪುರ
    • ಮಂಗಳೂರು
    • ಧಾರವಾಡ
    • ದಾವಣಗೆರೆ
    • ಚಿತ್ರದುರ್ಗ
    • ಗದಗ
    • ಹಾಸನ
    • ವಿಜಯಪುರ
    • ಹಾವೇರಿ
    • ಕಲಬುರ್ಗಿ
    • ಕೋಲಾರ
    • ರಾಯಚೂರು
    • ಕೊಡಗು
    • ರಾಯಚೂರು
    • ರಾಮನಗರ
    • ಕೊಪ್ಪಳ
    • ತುಮಕೂರು
    • ಮೈಸೂರು
    • ಮಂಡ್ಯ
    • ಉಡುಪಿ
    • ಚಿಕ್ಕಮಗಳೂರು
    • ಉತ್ತರ ಕನ್ನಡ
    • ವಿಜಯನಗರ
    • ಶಿವಮೊಗ್ಗ
    • ಯಾದಗಿರಿ
  • ರಾಜ್ಯ
  • ರಾಜಕೀಯ
  • ದೇಶ
  • ವಿದೇಶ
  • ಕ್ರೀಡೆ
  • ಸಿನಿಮಾ-ಮನರಂಜನೆ
  • ವಿಶೇಷ ಅಂಕಣ
  • ಧರ್ಮ-ಸನಾತನ
  • ಅಪರಾಧ
  • ಆರೋಗ್ಯ-ಆಹಾರ
  • ತಂತ್ರಜ್ಞಾನ
  • ಕೃಷಿ-ಪರಿಸರ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ವಾಣಿಜ್ಯ-ವ್ಯಾಪಾರ
  • ಜ್ಯೋತಿಷ್ಯ
  • ಪುರಾಣ
  • ಇತಿಹಾಸ
No Result
View All Result
ನ್ಯೂಸ್ ಬೀಟ್

ನಾಗರಾಜ್ ಅರೆಹೊಳೆ
ಪ್ರಧಾನ ಸಂಪಾದಕರು

No Result
View All Result
Home ದೇಶ

ಬಿಜೆಪಿಗೆ ಅಣ್ಣಾಮಲೈ ಗುಡ್‌ಬೈ? ತಲೆಎತ್ತಿದ ಪೋಸ್ಟರ್‌ಗಳು.. ಹೊಸ ಪಕ್ಷದ ಸುಳಿವು!

June 1, 2026
Share on WhatsappShare on FacebookShare on Twitter

ಚೆನ್ನೈ : ಇತ್ತೀಚೆಗೆ ನಡೆದ ವಿಧಾನಸಭೆ ಚುನಾವಣೆಯಲ್ಲಿ ಟಿವಿಕೆಗೆ ಗೆಲುವು ತಂದುಕೊಡುವ ಮೂಲಕ ಹೊಸ ರಾಜಕೀಯ ಇತಿಹಾಸ ಬರೆದ ತಮಿಳುನಾಡಿನಲ್ಲಿ ಈಗ ಮತ್ತೊಂದು ಭಾರಿ ರಾಜಕೀಯ ಧ್ರುವೀಕರಣದ ಸುಳಿವು ಸಿಕ್ಕಿದೆ. ತಮಿಳುನಾಡು ಬಿಜೆಪಿಯ ಮಾಜಿ ರಾಜ್ಯಾಧ್ಯಕ್ಷ ಕೆ. ಅಣ್ಣಾಮಲೈ ಅವರು ಬಿಜೆಪಿಯಿಂದ ಹೊರಬಂದು ಹೊಸ ರಾಜಕೀಯ ಪಕ್ಷವನ್ನು ಸ್ಥಾಪಿಸಲಿದ್ದಾರೆಯೇ ಎಂಬ ದಟ್ಟ ವದಂತಿಗಳು ಹರಡಲಾರಂಭಿಸಿವೆ. ಕೊಯಮತ್ತೂರು ನಗರದಾದ್ಯಂತ ಅಣ್ಣಾಮಲೈ ಅವರ ಫೋಟೋ ಇರುವ ನಿಗೂಢ ಪೋಸ್ಟರ್‌ಗಳು ಪ್ರತ್ಯಕ್ಷವಾಗಿರುವುದು ಈ ಅನುಮಾನಗಳಿಗೆ ರೆಕ್ಕೆಪುಕ್ಕ ನೀಡಿದೆ.

ಪ್ರಸ್ತುತ ತಮಿಳುನಾಡಿನಲ್ಲಿ ಬಿಜೆಪಿ ರಾಜ್ಯ ಕೇಂದ್ರ ಸಮಿತಿಯ ಸಭೆ ನಡೆಯುತ್ತಿರುವಾಗಲೇ, ಅದರಿಂದ ಅಣ್ಣಾಮಲೈ ದೂರ ಉಳಿದಿರುವುದು ಹಾಗೂ ಅವರ ಬೆಂಬಲಿಗರು ಹೊಸ ಸಂಘಟನೆಗೆ ಜನರನ್ನು ಸೇರಿಸುತ್ತಿರುವುದು ತಮಿಳುನಾಡು ರಾಜಕಾರಣದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ. ಕೊಯಮತ್ತೂರಿನ ಪ್ರಮುಖ ರಸ್ತೆ ಹಾಗೂ ವೃತ್ತಗಳಲ್ಲಿ ಅಣ್ಣಾಮಲೈ ಅವರ ಬೃಹತ್ ಪೋಸ್ಟರ್‌ಗಳನ್ನು ಅಂಟಿಸಲಾಗಿದೆ. ಆ ಪೋಸ್ಟರ್‌ಗಳಲ್ಲಿ “ಭಯವಿಲ್ಲದ ಮನಸ್ಸುಗಳಿಗೆ ಯಾವುದೇ ಮಿತಿಗಳಿರುವುದಿಲ್ಲ” (Fearless minds gave no limits) ಎಂಬ ಒಕ್ಕಣೆಯನ್ನು ಬರೆಯಲಾಗಿದೆ.

ಇದರ ಬೆನ್ನಲ್ಲೇ, ಅಣ್ಣಾಮಲೈ ಅವರ ಅಭಿಮಾನಿಗಳ ಕಲ್ಯಾಣ ಸಂಘಟನೆಯಾದ ‘ಅಣ್ಣಾಮಲೈ ಅನ್ಬು ಕೂಟಂ’ ರಾಜ್ಯಾದ್ಯಂತ ಹೊಸ ಸದಸ್ಯರನ್ನು ಹಾಗೂ ಪದಾಧಿಕಾರಿಗಳನ್ನು ಭರದಿಂದ ದಾಖಲಿಸಿಕೊಳ್ಳಲು ಆರಂಭಿಸಿದೆ. ಈ ಎಲ್ಲ ಬೆಳವಣಿಗೆಗಳು ಹೊಸ ಪಕ್ಷದ ಉದಯಕ್ಕೆ ಮುನ್ನುಡಿಯಾಗಿವೆ ಎಂದು ರಾಜಕೀಯ ವಿಶ್ಲೇಷಕರು ಅಂದಾಜಿಸುತ್ತಿದ್ದಾರೆ. ಇದಕ್ಕೆ ಪೂರಕವೆಂಬಂತೆ ಕಾಂಗ್ರೆಸ್ ಸಂಸದ ಕಾರ್ತಿ ಚಿದಂಬರಂ ಅವರು ಟ್ವೀಟ್ ಮಾಡಿ, “ತಮಿಳುನಾಡಿನಲ್ಲಿ ಮತ್ತೊಂದು ಹೊಸ ರಾಜಕೀಯ ಪಕ್ಷ ಉದಯಿಸಲು ಸಿದ್ಧವಾಗುತ್ತಿದೆ, ರಾಜಕೀಯ ಮಂಥನ ವೇಗ ಪಡೆದುಕೊಂಡಿದೆ” ಎಂದು ಬರೆಯುವ ಮೂಲಕ ವದಂತಿಗಳಿಗೆ ಮತ್ತಷ್ಟು ತುಪ್ಪ ಸುರಿದಿದ್ದಾರೆ.

ಕೇಂದ್ರ ಸರ್ಕಾರದ ಭಾಷಾ ನೀತಿ ವಿರುದ್ಧ ಬಂಡಾಯ

ಅಣ್ಣಾಮಲೈ ಮತ್ತು ಬಿಜೆಪಿ ಹೈಕಮಾಂಡ್ ನಡುವೆ ಎಲ್ಲವೂ ಸರಿಯಿಲ್ಲ ಎಂಬುದಕ್ಕೆ ಕೇಂದ್ರ ಸರ್ಕಾರದ ತ್ರಿಭಾಷಾ ನೀತಿಯೇ ಪ್ರಮುಖ ಕಾರಣ ಎನ್ನಲಾಗುತ್ತಿದೆ. ಇತ್ತೀಚೆಗಷ್ಟೇ ಸಿಬಿಎಸ್‌ಇ 9ನೇ ತರಗತಿಯ ವಿದ್ಯಾರ್ಥಿಗಳಿಗೆ ಮೂರು ಭಾಷೆಗಳನ್ನು ಕಡ್ಡಾಯಗೊಳಿಸಿ ಜುಲೈ 1, 2026ರಿಂದಲೇ ಜಾರಿಗೆ ಬರುವಂತೆ ಕೇಂದ್ರ ಸರ್ಕಾರ ಆದೇಶ ಹೊರಡಿಸಿತ್ತು. ಈ ದಿಢೀರ್ ನಿರ್ಧಾರವನ್ನು ಅಣ್ಣಾಮಲೈ ಬಹಿರಂಗವಾಗಿಯೇ ವಿರೋಧಿಸಿದ್ದರು. ಈ ನಿಯಮದಿಂದ ತಮಿಳುನಾಡಿನ ವಿದ್ಯಾರ್ಥಿಗಳಿಗೆ ಭಾರಿ ತೊಂದರೆಯಾಗಲಿದ್ದು, ಕೇಂದ್ರ ಶಿಕ್ಷಣ ಸಚಿವಾಲಯವು ತಕ್ಷಣವೇ ಈ ಆದೇಶವನ್ನು ಹಿಂಪಡೆಯಬೇಕು ಮತ್ತು ಈ ಹಿಂದೆ ನಿರ್ಧರಿಸಿದಂತೆ 2029-30ನೇ ಸಾಲಿನಿಂದ ಇದನ್ನು ಜಾರಿಗೆ ತರಬೇಕು ಎಂದು ಅಣ್ಣಾಮಲೈ ಆಗ್ರಹಿಸಿದ್ದರು. ಕೇಂದ್ರದ ನೀತಿಯ ವಿರುದ್ಧವೇ ಅವರು ಧ್ವನಿ ಎತ್ತಿದ್ದು ಹೈಕಮಾಂಡ್‌ಗೆ ಮುಜುಗರ ಉಂಟುಮಾಡಿತ್ತು.

ಅಧ್ಯಕ್ಷ ಸ್ಥಾನದಿಂದ ಮುಕ್ತಿ

ಕಳೆದ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ತಮಿಳುನಾಡಿನ ಪ್ರಾದೇಶಿಕ ಪಕ್ಷವಾದ ಎಐಎಡಿಎಂಕೆ (AIADMK) ಜೊತೆಗಿನ ಮೈತ್ರಿ ಮುರಿಯಲು ಅಣ್ಣಾಮಲೈ ಅವರೇ ಕಾರಣ ಎಂಬ ಆರೋಪ ಕೇಳಿಬಂದಿತ್ತು. ತಮಿಳುನಾಡಿನ ದ್ರಾವಿಡ ನಾಯಕರಾದ ಸಿ.ಎನ್. ಅಣ್ಣಾದೊರೈ ಮತ್ತು ಜೆ. ಜಯಲಲಿತಾ ಅವರ ಕುರಿತು ಅಣ್ಣಾಮಲೈ ನೀಡಿದ್ದ ವಿವಾದಾತ್ಮಕ ಹೇಳಿಕೆಗಳು ಮೈತ್ರಿಕೂಟದಲ್ಲಿ ಬಿರುಕು ಮೂಡಿಸಿದ್ದವು. ಅಂತಿಮವಾಗಿ ಎಐಎಡಿಎಂಕೆ ನಾಯಕರ ಕಠಿಣ ಒತ್ತಾಯಕ್ಕೆ ಮಣಿದ ಕೇಂದ್ರ ಬಿಜೆಪಿ ನಾಯಕರು, ಅಣ್ಣಾಮಲೈ ಅವರನ್ನು ತಮಿಳುನಾಡು ಬಿಜೆಪಿ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸಿದ್ದರು. ಈ ನಿರ್ಧಾರದಿಂದ ಅಣ್ಣಾಮಲೈ ಮತ್ತು ಅವರ ಬೆಂಬಲಿಗರು ತೀವ್ರ ಅಸಮಾಧಾನಗೊಂಡಿದ್ದರು ಎನ್ನಲಾಗಿದೆ.

ವರಿಷ್ಠರ ಭೇಟಿ ನಂತರ ಅಂತಿಮ ನಿರ್ಧಾರ?

ಬಿಜೆಪಿಯ ಪ್ರಮುಖ ಎರಡು ರಾಜ್ಯ ಮಟ್ಟದ ಸಭೆಗಳಿಗೆ ಗೈರುಹಾಜರಾಗಿ ವಿದೇಶ ಪ್ರವಾಸದಲ್ಲಿರುವ ಅಣ್ಣಾಮಲೈ, ಈ ಹೊಸ ಪಕ್ಷದ ವದಂತಿಗಳ ಕುರಿತು ಇದುವರೆಗೆ ಯಾವುದೇ ಅಧಿಕೃತ ಪ್ರತಿಕ್ರಿಯೆ ನೀಡಿಲ್ಲ. ಆದರೆ, ಮೂಲಗಳ ಪ್ರಕಾರ ಅವರು ಶೀಘ್ರದಲ್ಲೇ ದೆಹಲಿಗೆ ಆಗಮಿಸಲಿದ್ದು, ಬಿಜೆಪಿ ಉಸ್ತುವಾರಿ ನಿತಿನ್ ನಬೀನ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಲಿದ್ದಾರೆ. ಈ ಭೇಟಿಯ ನಂತರವೇ ಅಣ್ಣಾಮಲೈ ಬಿಜೆಪಿಯಲ್ಲೇ ಮುಂದುವರಿಯುತ್ತಾರೋ ಅಥವಾ ತಮ್ಮ ಬೆಂಬಲಿಗರ ಆಸೆಯಂತೆ ಹೊಸ ರಾಜಕೀಯ ವೇದಿಕೆ ಸೃಷ್ಟಿಸುತ್ತಾರೋ ಎಂಬುದು ಸ್ಪಷ್ಟವಾಗಲಿದೆ.

ಇದನ್ನೂ ಓದಿ : RCB ಕಪ್ ಗೆದ್ದ ಖುಷಿಯಲ್ಲಿ ಅನಾಹುತ ; ಸಂಭ್ರಮಾಚರಣೆ ಮುಗಿಸಿ ಮನೆಗೆ ಬರ್ತಿದ್ದ ಅಭಿಮಾನಿ ಸಾವು!

Tags: IndiaKarnataka News beatPolitician
SendShareTweet
Previous Post

RCB ಕಪ್ ಗೆದ್ದ ಖುಷಿಯಲ್ಲಿ ಅನಾಹುತ ; ಸಂಭ್ರಮಾಚರಣೆ ಮುಗಿಸಿ ಮನೆಗೆ ಬರ್ತಿದ್ದ ಅಭಿಮಾನಿ ಸಾವು!

Next Post

ಕೇರಳಕ್ಕೆ ಮುಂಗಾರು ಪ್ರವೇಶ ಮತ್ತೆ ವಿಳಂಬ : ಅನ್ನದಾತರಿಗೆ ತೀವ್ರ ಆತಂಕ

Related Posts

ಆಯುಷ್ಮಾನ್ ಭಾರತ್ ಕಾರ್ಡ್: ಮನೆಯಲ್ಲೇ ಕುಳಿತು ಸುಲಭವಾಗಿ ಅರ್ಜಿ ಸಲ್ಲಿಸುವುದು ಹೇಗೆ?
ದೇಶ

ಆಯುಷ್ಮಾನ್ ಭಾರತ್ ಕಾರ್ಡ್: ಮನೆಯಲ್ಲೇ ಕುಳಿತು ಸುಲಭವಾಗಿ ಅರ್ಜಿ ಸಲ್ಲಿಸುವುದು ಹೇಗೆ?

3 ಹೊಸ ಯೋಜನೆ ಘೋಷಿಸಿದ LIC: ಗ್ರಾಹಕರಿಗೆ ಏನೆಲ್ಲ ಲಾಭಗಳು?
ದೇಶ

3 ಹೊಸ ಯೋಜನೆ ಘೋಷಿಸಿದ LIC: ಗ್ರಾಹಕರಿಗೆ ಏನೆಲ್ಲ ಲಾಭಗಳು?

ಟಾಟಾ ಟ್ರಸ್ಟ್ಸ್‌ನಲ್ಲಿ ಆಂತರಿಕ ಕಲಹ ತೀವ್ರ : ಬಾಂಬೆ ಹೈಕೋರ್ಟ್ ಮೊರೆ ಹೋದ ನೊವೆಲ್, ನೆವಿಲ್ಲೆ ಟಾಟಾ
ದೇಶ

ಟಾಟಾ ಟ್ರಸ್ಟ್ಸ್‌ನಲ್ಲಿ ಆಂತರಿಕ ಕಲಹ ತೀವ್ರ : ಬಾಂಬೆ ಹೈಕೋರ್ಟ್ ಮೊರೆ ಹೋದ ನೊವೆಲ್, ನೆವಿಲ್ಲೆ ಟಾಟಾ

ಜೈಲುಪಾಲಾದ CJP ನಾಯಕರಿಗೆ ರಾಹುಲ್ ಗಾಂಧಿ ಬೆಂಬಲ, ಸರ್ಕಾರದ ವಿರುದ್ಧ ಆಕ್ರೋಶ
ದೇಶ

ಜೈಲುಪಾಲಾದ CJP ನಾಯಕರಿಗೆ ರಾಹುಲ್ ಗಾಂಧಿ ಬೆಂಬಲ, ಸರ್ಕಾರದ ವಿರುದ್ಧ ಆಕ್ರೋಶ

ಪ್ರಧಾನಿ ಮೋದಿ ವಿರುದ್ಧದ ಮಾನನಷ್ಟ ಮೊಕದ್ದಮೆ : ರಾಹುಲ್ ಗಾಂಧಿಗೆ ಸುಪ್ರೀಂ ಕೋರ್ಟ್‌ನಲ್ಲಿ ಬಿಗ್ ರಿಲೀಫ್!
ದೇಶ

ಪ್ರಧಾನಿ ಮೋದಿ ವಿರುದ್ಧದ ಮಾನನಷ್ಟ ಮೊಕದ್ದಮೆ : ರಾಹುಲ್ ಗಾಂಧಿಗೆ ಸುಪ್ರೀಂ ಕೋರ್ಟ್‌ನಲ್ಲಿ ಬಿಗ್ ರಿಲೀಫ್!

ರಾಹುಲ್ ಗಾಂಧಿ ತಮ್ಮನ್ನು ನೂಕಿದರು ಎಂದು ಗರ್ಭಿಣಿ ಪತ್ರಕರ್ತೆ ಆರೋಪ : ಬಿಜೆಪಿ-ಕಾಂಗ್ರೆಸ್ ವಾಕ್ಸಮರ!
ದೇಶ

ರಾಹುಲ್ ಗಾಂಧಿ ತಮ್ಮನ್ನು ನೂಕಿದರು ಎಂದು ಗರ್ಭಿಣಿ ಪತ್ರಕರ್ತೆ ಆರೋಪ : ಬಿಜೆಪಿ-ಕಾಂಗ್ರೆಸ್ ವಾಕ್ಸಮರ!

Next Post
ಕೇರಳಕ್ಕೆ ಮುಂಗಾರು ಪ್ರವೇಶ ಮತ್ತೆ ವಿಳಂಬ : ಅನ್ನದಾತರಿಗೆ ತೀವ್ರ ಆತಂಕ

ಕೇರಳಕ್ಕೆ ಮುಂಗಾರು ಪ್ರವೇಶ ಮತ್ತೆ ವಿಳಂಬ : ಅನ್ನದಾತರಿಗೆ ತೀವ್ರ ಆತಂಕ

  • Trending
  • Comments
  • Latest
ಗಮನಿಸಿ ; ಆಗಸ್ಟ್ 16ರೊಳಗೆ ಈ ಕೆಲಸ ಮಾಡದಿದ್ದರೆ ಮನೆಗೆ ಬರಲ್ಲ LPG ಸಿಲಿಂಡರ್!

ಗಮನಿಸಿ ; ಆಗಸ್ಟ್ 16ರೊಳಗೆ ಈ ಕೆಲಸ ಮಾಡದಿದ್ದರೆ ಮನೆಗೆ ಬರಲ್ಲ LPG ಸಿಲಿಂಡರ್!

ಭುವನೇಶ್ವರ್ ಕುಮಾರ್ ಆಯ್ಕೆ ವಿಳಂಬ: ಆಯ್ಕೆ ಸಮಿತಿ ಮುಖ್ಯಸ್ಥ ಅಜಿತ್ ಅಗರ್ಕರ್ ವಿರುದ್ಧ ಮೊಹಮ್ಮದ್ ಶಮಿ ಅಸಮಾಧಾನ

ಭುವನೇಶ್ವರ್ ಕುಮಾರ್ ಆಯ್ಕೆ ವಿಳಂಬ: ಆಯ್ಕೆ ಸಮಿತಿ ಮುಖ್ಯಸ್ಥ ಅಜಿತ್ ಅಗರ್ಕರ್ ವಿರುದ್ಧ ಮೊಹಮ್ಮದ್ ಶಮಿ ಅಸಮಾಧಾನ

ಭಾರತದಲ್ಲಿ ಬಿಡುಗಡೆಯಾಯ್ತು ಹೈಯರ್ Mini LED M70 ಸರಣಿ : ಬೆಲೆ ಹಾಗೂ ವೈಶಿಷ್ಟ್ಯಗಳ ವಿವರ

ಭಾರತದಲ್ಲಿ ಬಿಡುಗಡೆಯಾಯ್ತು ಹೈಯರ್ Mini LED M70 ಸರಣಿ : ಬೆಲೆ ಹಾಗೂ ವೈಶಿಷ್ಟ್ಯಗಳ ವಿವರ

ವಿಜಯ ಪತಾಕೆ ಹಾರಿಸಿದ ವಿಜಯ ಭಾರತಿ ವಿದ್ಯಾರ್ಥಿನಿ!

ವಿಜಯ ಪತಾಕೆ ಹಾರಿಸಿದ ವಿಜಯ ಭಾರತಿ ವಿದ್ಯಾರ್ಥಿನಿ!

ಕುಡಿದ ಮತ್ತಿನಲ್ಲಿ ಸಿಕ್ಕ ಸಿಕ್ಕವರನ್ನು ಕಚ್ಚಿದ ವ್ಯಕ್ತಿ!

ಕುಡಿದ ಮತ್ತಿನಲ್ಲಿ ಸಿಕ್ಕ ಸಿಕ್ಕವರನ್ನು ಕಚ್ಚಿದ ವ್ಯಕ್ತಿ!

ಹೃದಯಾಘಾತಕ್ಕೆ ಪತಿ ಬಲಿ; 7ನೇ ಮಹಡಿಯಿಂದ ಹಾರಿದ ಪತ್ನಿ!

ಹೃದಯಾಘಾತಕ್ಕೆ ಪತಿ ಬಲಿ; 7ನೇ ಮಹಡಿಯಿಂದ ಹಾರಿದ ಪತ್ನಿ!

ಕನ್ನಡದಲ್ಲಿ ಐಎಸ್ ಬರೆದ ಮೊದಲಿಗ ಹಾಗೂ ನಟ ಶಿವರಾಮ್ ಆರೋಗ್ಯ ಸ್ಥಿತಿ ಗಂಭೀರ!

ಕನ್ನಡದಲ್ಲಿ ಐಎಸ್ ಬರೆದ ಮೊದಲಿಗ ಹಾಗೂ ನಟ ಶಿವರಾಮ್ ಆರೋಗ್ಯ ಸ್ಥಿತಿ ಗಂಭೀರ!

ಪಿಎಂ ಕಿಸಾನ್ 16ನೇ ಕಂತಿನ ಹಣ ಬಿಡುಗಡೆ!

ಪಿಎಂ ಕಿಸಾನ್ 16ನೇ ಕಂತಿನ ಹಣ ಬಿಡುಗಡೆ!

ಕೇಂದ್ರ ಸರ್ಕಾರದ BEL ಸಂಸ್ಥೆಯಲ್ಲಿ ಎಂಜಿನಿಯರ್ ಹುದ್ದೆಗಳ ನೇಮಕಾತಿ!

ಕೇಂದ್ರ ಸರ್ಕಾರದ BEL ಸಂಸ್ಥೆಯಲ್ಲಿ ಎಂಜಿನಿಯರ್ ಹುದ್ದೆಗಳ ನೇಮಕಾತಿ!

ಕೇಂದ್ರ ಸರ್ಕಾರದ ECHS ಸಂಸ್ಥೆಯಲ್ಲಿ 35 ಹುದ್ದೆಗಳ ನೇಮಕಾತಿ: ಬೆಂಗಳೂರಿನಲ್ಲೇ ಉದ್ಯೋಗ

ಕೇಂದ್ರ ಸರ್ಕಾರದ ECHS ಸಂಸ್ಥೆಯಲ್ಲಿ 35 ಹುದ್ದೆಗಳ ನೇಮಕಾತಿ: ಬೆಂಗಳೂರಿನಲ್ಲೇ ಉದ್ಯೋಗ

ಕೇಂದ್ರ ಸರ್ಕಾರದ ESICಯಲ್ಲಿ 32 ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ : 1.42 ಲಕ್ಷ ರೂಪಾಯಿ ಸಂಬಳ!

ಕೇಂದ್ರ ಸರ್ಕಾರದ ESICಯಲ್ಲಿ 32 ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ : 1.42 ಲಕ್ಷ ರೂಪಾಯಿ ಸಂಬಳ!

ಆಯುಷ್ಮಾನ್ ಭಾರತ್ ಕಾರ್ಡ್: ಮನೆಯಲ್ಲೇ ಕುಳಿತು ಸುಲಭವಾಗಿ ಅರ್ಜಿ ಸಲ್ಲಿಸುವುದು ಹೇಗೆ?

ಆಯುಷ್ಮಾನ್ ಭಾರತ್ ಕಾರ್ಡ್: ಮನೆಯಲ್ಲೇ ಕುಳಿತು ಸುಲಭವಾಗಿ ಅರ್ಜಿ ಸಲ್ಲಿಸುವುದು ಹೇಗೆ?

Recent News

ಬಂಧು ಮಿತ್ರರೇ ನಮಸ್ತೇ,

ನಿಖರ, ಪ್ರಖರ, ಸ್ಪಷ್ಟ ಹಾಗೂ ವಸ್ತುನಿಷ್ಠ ಸುದ್ದಿ ನೀಡುವ ಭರವಸೆಯೊಂದಿಗೆ ನಮ್ಮ “ಕರ್ನಾಟಕ ನ್ಯೂಸ್ ಬೀಟ್” ಸುದ್ದಿ ಮಾಧ್ಯಮವನ್ನು ಚಾಲ್ತಿಗೆ ತಂದಿದ್ದೇವೆ. ಜಿಲ್ಲಾ ಸುದ್ದಿ, ಪ್ರಸ್ತುತ ಸುದ್ದಿ, ವಿಶೇಷ ಅಂಕಣ, ಧರ್ಮ, ಸನಾತನ, ರಾಜಕೀಯ, ಸಿನಿಮಾ, ಅಪರಾಧ, ಕ್ರೀಡೆ, ಆರೋಗ್ಯ, ಆಹಾರ, ತಂತ್ರಜ್ಞಾನ, ಕೃಷಿ, ಪರಿಸರ, ಸಾಹಿತ್ಯ, ವಾಣಿಜ್ಯ, ಜ್ಯೋತಿಷ್ಯ, ಪುರಾಣ, ಇತಿಹಾಸ ಸೇರಿದಂತೆ ಈ ಸಮಾಜದ ಪ್ರತಿ ವಿಭಾಗದಲ್ಲೂ ನಾವು ಕಣ್ಣಿಡುತ್ತಾ, ಅಲ್ಲಿನ ಆಗು-ಹೋಗುಗಳನ್ನು ನಿರಂತರವಾಗಿ ನಿಮ್ಮ ಮುಂದೆ ತೆರೆದಿಡುತ್ತಾ ಸಾಗುತ್ತೇವೆ. ಒಟ್ಟಿನಲ್ಲಿ, ಬರವಣಿಗೆಯಲ್ಲೇ ಭಗವಂತನನ್ನ ಕಾಣುತ್ತಿರುವ, ಸದೃಢ ತಂಡದೊಂದಿಗೆ, ಕರ್ನಾಟಕ ನ್ಯೂಸ್ ಬೀಟ್ ಸುದ್ದಿ ಮಾಧ್ಯಮವು, ವಿಶೇಷವಾಗಿ ಸುದ್ದಿ, ವರದಿ, ಅಂಕಣ, ಚಿತ್ರಣಗಳನ್ನು ಹೊತ್ತು ತರುತ್ತಾ, ಸದಾ ನಿಮ್ಮೊಂದಿಗೆ ಬೆಸೆದುಕೊಂಡಿರಲಿದೆ.

Follow Us

Join Our WhatsApp Channel

Browse by Category

  • national
  • News & Politics
  • state
  • Uncategorized
  • ಅಪರಾಧ
  • ಅಮರಾವತಿ
  • ಆರೋಗ್ಯ-ಆಹಾರ
  • ಇತರೆ ಸುದ್ದಿ
  • ಇತಿಹಾಸ
  • ಉಡುಪಿ
  • ಉತ್ತರ ಕನ್ನಡ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಕಲಬುರ್ಗಿ
  • ಕೃಷಿ-ಪರಿಸರ
  • ಕೊಡಗು
  • ಕೊಪ್ಪಳ
  • ಕೋಲಾರ
  • ಕ್ರೀಡೆ
  • ಗದಗ
  • ಚಾಮರಾಜನಗರ
  • ಚಿಕ್ಕಬಳ್ಳಾಫುರ
  • ಚಿಕ್ಕಮಗಳೂರು
  • ಚಿತ್ರದುರ್ಗ
  • ಜ್ಯೋತಿಷ್ಯ
  • ತಂತ್ರಜ್ಞಾನ
  • ತುಮಕೂರು
  • ತೆಲಂಗಾಣ
  • ದಕ್ಷಿಣ ಕನ್ನಡ
  • ದಾವಣಗೆರೆ
  • ದೇಶ
  • ಧರ್ಮ-ಸನಾತನ
  • ಧಾರವಾಡ
  • ಪುರಾಣ
  • ಬಳ್ಳಾರಿ
  • ಬಾಗಲಕೋಟೆ
  • ಬೀದರ್
  • ಬೆಂಗಳೂರು
  • ಬೆಂಗಳೂರು ಗ್ರಾಮಾಂತರ
  • ಬೆಂಗಳೂರು ನಗರ
  • ಬೆಳಗಾವಿ
  • ಮಂಗಳೂರು
  • ಮಂಡ್ಯ
  • ಮುಖ್ಯಾಂಶಗಳು
  • ಮೈಸೂರು
  • ಯಾದಗಿರಿ
  • ರಾಜಕೀಯ
  • ರಾಜ್ಯ
  • ರಾಮನಗರ
  • ರಾಯಚೂರು
  • ವಾಣಿಜ್ಯ-ವ್ಯಾಪಾರ
  • ವಿಜಯನಗರ
  • ವಿಜಯಪುರ
  • ವಿದೇಶ
  • ವಿಶೇಷ ಅಂಕಣ
  • ವೀಡಿಯೊ ಸುದ್ದಿ
  • ವ್ಯಾಪಾರ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ಶಿವಮೊಗ್ಗ
  • ಸಿನಿಮಾ
  • ಸಿನಿಮಾ-ಮನರಂಜನೆ
  • ಹಾವೇರಿ
  • ಹಾಸನ
  • ಹುಬ್ಬಳ್ಳಿ

Recent News

ಕೇಂದ್ರ ಸರ್ಕಾರದ BEL ಸಂಸ್ಥೆಯಲ್ಲಿ ಎಂಜಿನಿಯರ್ ಹುದ್ದೆಗಳ ನೇಮಕಾತಿ!

ಕೇಂದ್ರ ಸರ್ಕಾರದ BEL ಸಂಸ್ಥೆಯಲ್ಲಿ ಎಂಜಿನಿಯರ್ ಹುದ್ದೆಗಳ ನೇಮಕಾತಿ!

ಕೇಂದ್ರ ಸರ್ಕಾರದ ECHS ಸಂಸ್ಥೆಯಲ್ಲಿ 35 ಹುದ್ದೆಗಳ ನೇಮಕಾತಿ: ಬೆಂಗಳೂರಿನಲ್ಲೇ ಉದ್ಯೋಗ

ಕೇಂದ್ರ ಸರ್ಕಾರದ ECHS ಸಂಸ್ಥೆಯಲ್ಲಿ 35 ಹುದ್ದೆಗಳ ನೇಮಕಾತಿ: ಬೆಂಗಳೂರಿನಲ್ಲೇ ಉದ್ಯೋಗ

  • About
  • Advertise
  • Privacy & Policy
  • Contact Us

© 2025 News beat

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಬ್ಲಾಗ್
  • ಜಿಲ್ಲಾ ಸುದ್ದಿ
    • ಬೆಂಗಳೂರು ನಗರ
    • ಬೆಂಗಳೂರು ಗ್ರಾಮಾಂತರ
    • ಬೆಳಗಾವಿ
    • ಬೀದರ್
    • ಬಾಗಲಕೋಟೆ
    • ಬಳ್ಳಾರಿ
    • ಚಾಮರಾಜನಗರ
    • ದಕ್ಷಿಣ ಕನ್ನಡ
    • ಚಿಕ್ಕಬಳ್ಳಾಪುರ
    • ಮಂಗಳೂರು
    • ಧಾರವಾಡ
    • ದಾವಣಗೆರೆ
    • ಚಿತ್ರದುರ್ಗ
    • ಗದಗ
    • ಹಾಸನ
    • ವಿಜಯಪುರ
    • ಹಾವೇರಿ
    • ಕಲಬುರ್ಗಿ
    • ಕೋಲಾರ
    • ರಾಯಚೂರು
    • ಕೊಡಗು
    • ರಾಯಚೂರು
    • ರಾಮನಗರ
    • ಕೊಪ್ಪಳ
    • ತುಮಕೂರು
    • ಮೈಸೂರು
    • ಮಂಡ್ಯ
    • ಉಡುಪಿ
    • ಚಿಕ್ಕಮಗಳೂರು
    • ಉತ್ತರ ಕನ್ನಡ
    • ವಿಜಯನಗರ
    • ಶಿವಮೊಗ್ಗ
    • ಯಾದಗಿರಿ
  • ರಾಜ್ಯ
  • ರಾಜಕೀಯ
  • ದೇಶ
  • ವಿದೇಶ
  • ಕ್ರೀಡೆ
  • ಸಿನಿಮಾ-ಮನರಂಜನೆ
  • ವಿಶೇಷ ಅಂಕಣ
  • ಧರ್ಮ-ಸನಾತನ
  • ಅಪರಾಧ
  • ಆರೋಗ್ಯ-ಆಹಾರ
  • ತಂತ್ರಜ್ಞಾನ
  • ಕೃಷಿ-ಪರಿಸರ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ವಾಣಿಜ್ಯ-ವ್ಯಾಪಾರ
  • ಜ್ಯೋತಿಷ್ಯ
  • ಪುರಾಣ
  • ಇತಿಹಾಸ

© 2025 News beat