ಕರ್ನಾಟಕ ನ್ಯೂಸ್ ಬೀಟ್

ನಾಗರಾಜ್ ಅರೆಹೊಳೆ

ಪ್ರಧಾನ ಸಂಪಾದಕರು

newsbeatkarnataka@gmail.com

  • ಬ್ಲಾಗ್
  • ಜಿಲ್ಲಾ ಸುದ್ದಿ
    • ಬೆಂಗಳೂರು ನಗರ
    • ಬೆಂಗಳೂರು ಗ್ರಾಮಾಂತರ
    • ಬೆಳಗಾವಿ
    • ಬೀದರ್
    • ಬಾಗಲಕೋಟೆ
    • ಬಳ್ಳಾರಿ
    • ಚಾಮರಾಜನಗರ
    • ದಕ್ಷಿಣ ಕನ್ನಡ
    • ಚಿಕ್ಕಬಳ್ಳಾಪುರ
    • ಮಂಗಳೂರು
    • ಧಾರವಾಡ
    • ದಾವಣಗೆರೆ
    • ಚಿತ್ರದುರ್ಗ
    • ಗದಗ
    • ಹಾಸನ
    • ವಿಜಯಪುರ
    • ಹಾವೇರಿ
    • ಕಲಬುರ್ಗಿ
    • ಕೋಲಾರ
    • ರಾಯಚೂರು
    • ಕೊಡಗು
    • ರಾಯಚೂರು
    • ರಾಮನಗರ
    • ಕೊಪ್ಪಳ
    • ತುಮಕೂರು
    • ಮೈಸೂರು
    • ಮಂಡ್ಯ
    • ಉಡುಪಿ
    • ಚಿಕ್ಕಮಗಳೂರು
    • ಉತ್ತರ ಕನ್ನಡ
    • ವಿಜಯನಗರ
    • ಶಿವಮೊಗ್ಗ
    • ಯಾದಗಿರಿ
  • ರಾಜ್ಯ
  • ರಾಜಕೀಯ
  • ದೇಶ
  • ವಿದೇಶ
  • ಕ್ರೀಡೆ
  • ಸಿನಿಮಾ-ಮನರಂಜನೆ
  • ವಿಶೇಷ ಅಂಕಣ
  • ಧರ್ಮ-ಸನಾತನ
  • ಅಪರಾಧ
  • ಆರೋಗ್ಯ-ಆಹಾರ
  • ತಂತ್ರಜ್ಞಾನ
  • ಕೃಷಿ-ಪರಿಸರ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ವಾಣಿಜ್ಯ-ವ್ಯಾಪಾರ
  • ಜ್ಯೋತಿಷ್ಯ
  • ಪುರಾಣ
  • ಇತಿಹಾಸ
No Result
View All Result
Karnataka News Beat
  • ಬ್ಲಾಗ್
  • ಜಿಲ್ಲಾ ಸುದ್ದಿ
    • ಬೆಂಗಳೂರು ನಗರ
    • ಬೆಂಗಳೂರು ಗ್ರಾಮಾಂತರ
    • ಬೆಳಗಾವಿ
    • ಬೀದರ್
    • ಬಾಗಲಕೋಟೆ
    • ಬಳ್ಳಾರಿ
    • ಚಾಮರಾಜನಗರ
    • ದಕ್ಷಿಣ ಕನ್ನಡ
    • ಚಿಕ್ಕಬಳ್ಳಾಪುರ
    • ಮಂಗಳೂರು
    • ಧಾರವಾಡ
    • ದಾವಣಗೆರೆ
    • ಚಿತ್ರದುರ್ಗ
    • ಗದಗ
    • ಹಾಸನ
    • ವಿಜಯಪುರ
    • ಹಾವೇರಿ
    • ಕಲಬುರ್ಗಿ
    • ಕೋಲಾರ
    • ರಾಯಚೂರು
    • ಕೊಡಗು
    • ರಾಯಚೂರು
    • ರಾಮನಗರ
    • ಕೊಪ್ಪಳ
    • ತುಮಕೂರು
    • ಮೈಸೂರು
    • ಮಂಡ್ಯ
    • ಉಡುಪಿ
    • ಚಿಕ್ಕಮಗಳೂರು
    • ಉತ್ತರ ಕನ್ನಡ
    • ವಿಜಯನಗರ
    • ಶಿವಮೊಗ್ಗ
    • ಯಾದಗಿರಿ
  • ರಾಜ್ಯ
  • ರಾಜಕೀಯ
  • ದೇಶ
  • ವಿದೇಶ
  • ಕ್ರೀಡೆ
  • ಸಿನಿಮಾ-ಮನರಂಜನೆ
  • ವಿಶೇಷ ಅಂಕಣ
  • ಧರ್ಮ-ಸನಾತನ
  • ಅಪರಾಧ
  • ಆರೋಗ್ಯ-ಆಹಾರ
  • ತಂತ್ರಜ್ಞಾನ
  • ಕೃಷಿ-ಪರಿಸರ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ವಾಣಿಜ್ಯ-ವ್ಯಾಪಾರ
  • ಜ್ಯೋತಿಷ್ಯ
  • ಪುರಾಣ
  • ಇತಿಹಾಸ
No Result
View All Result
ಕರ್ನಾಟಕ ನ್ಯೂಸ್ ಬೀಟ್

ನಾಗರಾಜ್ ಅರೆಹೊಳೆ
ಪ್ರಧಾನ ಸಂಪಾದಕರು

No Result
View All Result
Home ದೇಶ

ಇಂದಿನಿಂದ ಹೊಸ ಸೋಲಾರ್ ನಿಯಮ ಜಾರಿ : ಗ್ರಾಹಕರು, ಸಣ್ಣ ಉದ್ಯಮಿಗಳಿಗೆ ದರ ಏರಿಕೆ ಬಿಸಿ!

June 1, 2026
Share on WhatsappShare on FacebookShare on Twitter

ನವದೆಹಲಿ : ಚೀನಾ ಮೇಲಿನ ಅವಲಂಬನೆಯನ್ನು ತಗ್ಗಿಸಿ, ದೇಶೀಯ ಉತ್ಪಾದನೆಗೆ ಉತ್ತೇಜನ ನೀಡುವ ಉದ್ದೇಶದಿಂದ ಕೇಂದ್ರ ಸರ್ಕಾರವು ಭಾರತದ ಸೌರಶಕ್ತಿ ವಲಯದಲ್ಲಿ ಇಂದಿನಿಂದ (ಜೂನ್ 1) ಅತ್ಯಂತ ಪ್ರಮುಖ ಬದಲಾವಣೆಯೊಂದನ್ನು ಜಾರಿಗೆ ತಂದಿದೆ. ಅದರಂತೆ ಸರ್ಕಾರವು ಸೌರ ನಿಯಮಗಳನ್ನು ಮತ್ತಷ್ಟು ಕಠಿಣಗೊಳಿಸಿದೆ.

ಸರ್ಕಾರದ ಈ ನಿರ್ಧಾರದಿಂದಾಗಿ ಇನ್ನು ಮುಂದೆ ನೆಟ್-ಮೀಟರಿಂಗ್ ಮತ್ತು ಓಪನ್-ಆಕ್ಸೆಸ್ ವ್ಯವಸ್ಥೆಯಡಿ ಬರುವ ಸೌರ ವ್ಯವಸ್ಥೆಗಳಲ್ಲಿ ಕಡ್ಡಾಯವಾಗಿ ಭಾರತದಲ್ಲೇ ತಯಾರಾದ ಸೋಲಾರ್ ಸೆಲ್‌ಗಳನ್ನು (ಸೌರ ಕೋಶಗಳನ್ನು) ಬಳಸಬೇಕಾಗುತ್ತದೆ. ಆದರೆ, ಸರ್ಕಾರದ ಈ ನಿರ್ಧಾರವು ಸೌರಶಕ್ತಿ ಉದ್ಯಮಿಗಳು ಹಾಗೂ ಗ್ರಾಹಕರಲ್ಲಿ ಮಿಶ್ರ ಪ್ರತಿಕ್ರಿಯೆಗೆ ಕಾರಣವಾಗಿದ್ದು, ಕೆಲವರು ಇದರ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಏನಿದು ಹೊಸ ನಿಯಮ?

ಇಲ್ಲಿಯವರೆಗೆ ಭಾರತದಲ್ಲಿ ಸೌರ ಫಲಕಗಳನ್ನು (ಸೋಲಾರ್ ಮಾಡ್ಯೂಲ್) ಜೋಡಿಸಲು ಮಾತ್ರ ದೇಶೀಯ ಉತ್ಪನ್ನಗಳನ್ನು ಬಳಸಲಾಗುತ್ತಿತ್ತು. ಆದರೆ, ಇಂದಿನಿಂದ ಜಾರಿಗೆ ಬಂದಿರುವ ನಿಯಮದ ಪ್ರಕಾರ, ಆ ಫಲಕಗಳ ಒಳಗಿನ ಪ್ರಮುಖ ಬಿಡಿಭಾಗವಾದ ‘ಸೋಲಾರ್ ಸೆಲ್’ ಕೂಡ ಕಡ್ಡಾಯವಾಗಿ ಸರ್ಕಾರ ಅನುಮೋದಿಸಿದ ಭಾರತೀಯ ಕಂಪನಿಗಳದ್ದೇ (ALMM ಪಟ್ಟಿ-II ರ ಪ್ರಕಾರ) ಆಗಿರಬೇಕು. ಪ್ರಧಾನಮಂತ್ರಿ ಸೂರ್ಯ ಘರ್ ಮುಫ್ತ್ ಬಿಜ್ಲಿ ಯೋಜನೆ ಸೇರಿದಂತೆ ಮನೆಗಳ ಮೇಲ್ಛಾವಣಿ (ರೂಫ್‌ಟಾಪ್) ಸೋಲಾರ್ ಯೋಜನೆಗಳು ಹಾಗೂ ವಾಣಿಜ್ಯ ಬಳಕೆಯ ಓಪನ್-ಆಕ್ಸೆಸ್ ಯೋಜನೆಗಳಿಗೆ ಈ ಹೊಸ ನಿಯಮ ಅನ್ವಯವಾಗಲಿದೆ. ಈ ನಿಯಮ ಜಾರಿಗೆ ಮತ್ತಷ್ಟು ಕಾಲಾವಕಾಶ ನೀಡಬೇಕೆಂಬ ಉದ್ಯಮಿಗಳ ಬೇಡಿಕೆಯನ್ನು ಸರ್ಕಾರ ಸ್ಪಷ್ಟವಾಗಿ ತಿರಸ್ಕರಿಸಿದೆ.

ಗ್ರಾಹಕರ ಜೇಬಿಗೆ ಕತ್ತರಿ

ಈ ಹೊಸ ನಿಯಮದ ನೇರ ಪರಿಣಾಮ ಗ್ರಾಹಕರ ಜೇಬಿನ ಮೇಲೆ ಬೀರಲಿದೆ. ಚೀನಾದಿಂದ ಆಮದು ಮಾಡಿಕೊಳ್ಳುವ ಸೋಲಾರ್ ಸೆಲ್‌ಗಳಿಗೆ ಹೋಲಿಸಿದರೆ ಭಾರತದಲ್ಲಿ ತಯಾರಾಗುವ ಸೆಲ್‌ಗಳ ಬೆಲೆ ಗಣನೀಯವಾಗಿ ಹೆಚ್ಚಿದೆ. ಮಾರುಕಟ್ಟೆಯ ಅಂದಾಜಿನ ಪ್ರಕಾರ, ಪ್ರತಿ ಕಿಲೋವ್ಯಾಟ್ (kW) ಸೋಲಾರ್ ಅಳವಡಿಕೆಗೆ ಸುಮಾರು 3,000 ರೂ.ಗಳಷ್ಟು ವೆಚ್ಚ ಹೆಚ್ಚಾಗಬಹುದು.

ಉದಾಹರಣೆಗೆ, ಸಾಮಾನ್ಯ ಮನೆಯೊಂದಕ್ಕೆ 5 ಕಿಲೋವ್ಯಾಟ್ ಸಾಮರ್ಥ್ಯದ ರೂಫ್‌ಟಾಪ್ ಸಿಸ್ಟಮ್ ಅಳವಡಿಸಬೇಕಾದರೆ, ಗ್ರಾಹಕರು ಈಗ ಹೆಚ್ಚುವರಿಯಾಗಿ ಸರಿಸುಮಾರು 15,000 ರೂ.ಗಳನ್ನು ಪಾವತಿಸಬೇಕಾಗುತ್ತದೆ. ಪಿಎಂ ಸೂರ್ಯ ಘರ್ ಯೋಜನೆ ಅಡಿ ಸಿಗುವ ಸರ್ಕಾರಿ ಸಬ್ಸಿಡಿ ಮುಂದುವರಿಯಲಿದೆಯಾದರೂ, ನಿಯಮಗಳ ಪಾಲನೆ ಮತ್ತು ದಾಖಲೆಗಳ ಪರಿಶೀಲನೆ ಇನ್ನು ಮುಂದೆ ಮತ್ತಷ್ಟು ಕಠಿಣವಾಗಲಿದೆ.

ಬೇಡಿಕೆ ಮತ್ತು ಪೂರೈಕೆ ನಡುವೆ ಭಾರಿ ಕಂದಕ

ಈ ಹೊಸ ನಿಯಮವು ದೇಶದ ಸಣ್ಣ ಸೌರ ಫಲಕ ತಯಾರಕರನ್ನು ತೀವ್ರ ಆತಂಕಕ್ಕೆ ತಳ್ಳಿದೆ. ಸದ್ಯ ಭಾರತದಲ್ಲಿ ವಾರ್ಷಿಕವಾಗಿ ಸುಮಾರು 50 ಗಿಗಾವ್ಯಾಟ್ (GW) ಸೋಲಾರ್ ಸೆಲ್‌ಗಳ ಬೇಡಿಕೆಯಿದೆ. ಆದರೆ ಭಾರತದ ಸದ್ಯದ ದೇಶೀಯ ಉತ್ಪಾದನಾ ಸಾಮರ್ಥ್ಯ ಕೇವಲ 25 ರಿಂದ 30 ಗಿಗಾವ್ಯಾಟ್‌ಗಳಷ್ಟೇ ಆಗಿದೆ. ಅಂದರೆ ಬೇಡಿಕೆಯ ಅರ್ಧದಷ್ಟು ಮಾತ್ರ ಭಾರತದಲ್ಲಿ ಉತ್ಪತ್ತಿಯಾಗುತ್ತಿದ್ದು, ಇನ್ನುಳಿದ 90 ಪ್ರತಿಶತಕ್ಕೂ ಹೆಚ್ಚಿನ ಭಾಗಕ್ಕೆ ಭಾರತ ಚೀನಾವನ್ನೇ ನೆಚ್ಚಿಕೊಂಡಿತ್ತು. ಈಗ ದಿಢೀರನೆ ಆಮದಿಗೆ ಬ್ರೇಕ್ ಬಿದ್ದಿರುವುದರಿಂದ ಮಾರುಕಟ್ಟೆಯಲ್ಲಿ ತೀವ್ರ ಅಭಾವ ಸೃಷ್ಟಿಯಾಗುವ ಭೀತಿ ಎದುರಾಗಿದೆ.

ಸಣ್ಣ ಉದ್ದಿಮೆದಾರರ ಅಳಿವು-ಉಳಿವಿನ ಹೋರಾಟ

ಸ್ವಂತವಾಗಿ ಸೋಲಾರ್ ಸೆಲ್ ಉತ್ಪಾದಿಸದೆ, ಕೇವಲ ಮಾಡ್ಯೂಲ್ (ಫಲಕ) ಜೋಡಣೆ ಮಾಡುವ 125ಕ್ಕೂ ಹೆಚ್ಚು ಸಣ್ಣ ಪ್ರಮಾಣದ ಉದ್ದಿಮೆಗಳು ಈಗ ಬಿಕ್ಕಟ್ಟಿಗೆ ಸಿಲುಕಿವೆ. ಅವರು ಈಗ ದೇಶದ ದೊಡ್ಡ ಸಮಗ್ರ ಕಂಪನಿಗಳಿಂದಲೇ ದುಬಾರಿ ಬೆಲೆಗೆ ಸೆಲ್‌ಗಳನ್ನು ಖರೀದಿಸಬೇಕಾದ ಅನಿವಾರ್ಯತೆ ಎದುರಾಗಿದೆ. ಪ್ರಸ್ತುತ ದೇಶೀಯ ಸೆಲ್ ತಯಾರಕರು ಸೀಮಿತ ಪೂರೈಕೆಯ ಕಾರಣದಿಂದಾಗಿ ಶೇ.20ರಿಂದ 30ರಷ್ಟು ಲಾಭಾಂಶವನ್ನೂ ಗಳಿಸುತ್ತಿದ್ದರು. ಇಂತಹ ಪರಿಸ್ಥಿತಿಯಲ್ಲಿ ಸಣ್ಣ ಕಂಪನಿಗಳ ಉತ್ಪಾದನಾ ಸಾಮರ್ಥ್ಯವು ಶೇ. 30-40 ಕ್ಕೆ ಕುಸಿದಿದ್ದು, ಮಾರುಕಟ್ಟೆಯಲ್ಲಿ ದೊಡ್ಡ ಕಂಪನಿಗಳ ಏಕಸ್ವಾಮ್ಯ ಸ್ಥಾಪನೆಯಾಗುವ ಹಾಗೂ ಸಣ್ಣ ಉದ್ದಿಮೆಗಳು ಮುಚ್ಚಿಹೋಗುವ ಆತಂಕ ಎದುರಾಗಿದೆ.

ಸರ್ಕಾರದ ಕ್ರಮಕ್ಕೆ ಸಮರ್ಥನೆ

ಮತ್ತೊಂದೆಡೆ, ಸರ್ಕಾರದ ಈ ಹೆಜ್ಜೆಯನ್ನು ಪ್ರಮುಖ ಮತ್ತು ಪ್ರಭಾವಿ ಸೌರಶಕ್ತಿ ಉತ್ಪಾದಕರು ಮುಕ್ತವಾಗಿ ಸ್ವಾಗತಿಸಿದ್ದಾರೆ. ಆಗಸ್ಟ್ 31, 2025ರ ಮೊದಲು ಬಿಡ್ ಮಾಡಲಾದ ದೊಡ್ಡ ಪ್ರಮಾಣದ ಯೋಜನೆಗಳಿಗೆ ಈ ನಿಯಮದಿಂದ ವಿನಾಯಿತಿ ನೀಡಿರುವುದರಿಂದ ಸದ್ಯಕ್ಕೆ ಮಾರುಕಟ್ಟೆಯಲ್ಲಿ ತೀವ್ರ ಹಾಹಾಕಾರವೇನೂ ಸೃಷ್ಟಿಯಾಗುವುದಿಲ್ಲ ಎಂಬುದು ಇವರ ವಾದವಾಗಿದೆ. ಭಾರತೀಯ ಸೌರಶಕ್ತಿ ವಲಯದಲ್ಲಿ ಕೋಟ್ಯಂತರ ರೂಪಾಯಿ ಹೂಡಿಕೆ ಮಾಡಲು ಇಂತಹ ಕಠಿಣ ನೀತಿಗಳು ಅತ್ಯಗತ್ಯವಾಗಿದ್ದು, ಸ್ವಾವಲಂಬನೆಯ ಹಾದಿಯಲ್ಲಿ ಎದುರಾಗುವ ಇಂತಹ ತಾತ್ಕಾಲಿಕ ಹಿನ್ನಡೆಗಳು ಅನಿವಾರ್ಯ ಎನ್ನುತ್ತಾರೆ ದೊಡ್ಡ ದೊಡ್ಡ ಉದ್ಯಮಿಗಳು. ಒಟ್ಟಾರೆಯಾಗಿ, ಚೀನಾದ ಮೇಲಿನ ಅವಲಂಬನೆ ತಗ್ಗಿಸಿ ದೇಶವನ್ನು ಸೌರಶಕ್ತಿ ವಲಯದಲ್ಲಿ ಸ್ವಾವಲಂಬಿಯನ್ನಾಗಿ ಮಾಡುವ ಸರ್ಕಾರದ ಈ ಮಹತ್ವಾಕಾಂಕ್ಷಿ ಹೆಜ್ಜೆಯು, ಗ್ರಾಹಕರಿಗೆ ಹಾಗೂ ಸಣ್ಣ ಉದ್ಯಮಿಗಳಿಗೆ ದರ ಏರಿಕೆಯ ಬಿಸಿ ಮುಟ್ಟಿಸಿರುವುದಂತೂ ಸತ್ಯ.

ಇದನ್ನೂ ಓದಿ : ಮೊಬೈಲ್‌ನಲ್ಲಿ CBSE ಉತ್ತರಪತ್ರಿಕೆ ಸ್ಕ್ಯಾನ್ : ಕೇಂದ್ರದ ವಿರುದ್ಧ ರಾಹುಲ್ ಗಾಂಧಿ ಆಕ್ರೋಶ!

Tags: IndiaKarnataka News beat
SendShareTweet
Previous Post

BIS ಸಂಸ್ಥೆಯಲ್ಲಿ ನೇಮಕಾತಿ : ಡಿಗ್ರಿ, ಮಾಸ್ಟರ್ ಡಿಗ್ರಿ ಮುಗಿಸಿದವರಿಗೆ ಚಾನ್ಸ್

Next Post

ಶ್ರೀಲಂಕಾ ತ್ರಿಕೋನ ಸರಣಿ : ಪರಾಗ್ ಔಟ್, ಇಂಡಿಯಾ ‘ಎ’ ಉಪನಾಯಕನಾಗಿ ಗಾಯಕ್ವಾಡ್ ನೇಮಕ

Related Posts

ವಿದೇಶಿ ಪ್ರವಾಸ, ಚಿನ್ನ ಖರೀದಿ, ವಿದೇಶಿ ವಿವಾಹ ಬೇಡ : GDP ದರ ಏರಿಕೆ ಬೆನ್ನಲ್ಲೇ ದೇಶವಾಸಿಗಳಿಗೆ ಪ್ರಧಾನಿ ಮೋದಿ ಕರೆ!
ದೇಶ

ವಿದೇಶಿ ಪ್ರವಾಸ, ಚಿನ್ನ ಖರೀದಿ, ವಿದೇಶಿ ವಿವಾಹ ಬೇಡ : GDP ದರ ಏರಿಕೆ ಬೆನ್ನಲ್ಲೇ ದೇಶವಾಸಿಗಳಿಗೆ ಪ್ರಧಾನಿ ಮೋದಿ ಕರೆ!

ನೇಪಾಳ ಜಲಪ್ರಳಯ ಆಯ್ತು, ಬಂಗಾಳಕ್ಕೂ ಎದುರಾಗಲಿದೆಯೇ ಹಿಮಪಾತದ ಸರಣಿ ಆಪತ್ತು?
ದೇಶ

ನೇಪಾಳ ಜಲಪ್ರಳಯ ಆಯ್ತು, ಬಂಗಾಳಕ್ಕೂ ಎದುರಾಗಲಿದೆಯೇ ಹಿಮಪಾತದ ಸರಣಿ ಆಪತ್ತು?

ಕಡಲಾಳದ ಕಾರ್ಯಾಚರಣೆಗೆ ಬಲ : ಭಾರತೀಯ ನೌಕಾಪಡೆಗೆ ಇಂದು ಸ್ವದೇಶಿ ‘ಡಿಎಸ್‌ವಿ ನಿಪುಣ್’ ನೌಕೆ ಸೇರ್ಪಡೆ!
ದೇಶ

ಕಡಲಾಳದ ಕಾರ್ಯಾಚರಣೆಗೆ ಬಲ : ಭಾರತೀಯ ನೌಕಾಪಡೆಗೆ ಇಂದು ಸ್ವದೇಶಿ ‘ಡಿಎಸ್‌ವಿ ನಿಪುಣ್’ ನೌಕೆ ಸೇರ್ಪಡೆ!

“ಮಹಿಳೆಯರು ಮನೆಯೊಳಗೇ ಇರಬೇಕು” : ಸ್ತ್ರೀಯರನ್ನು ಆಭರಣಕ್ಕೆ ಹೋಲಿಸಿ ಮುಸ್ಲಿಂ ಧರ್ಮಗುರು ವಿವಾದಾತ್ಮಕ ಹೇಳಿಕೆ!
ದೇಶ

“ಮಹಿಳೆಯರು ಮನೆಯೊಳಗೇ ಇರಬೇಕು” : ಸ್ತ್ರೀಯರನ್ನು ಆಭರಣಕ್ಕೆ ಹೋಲಿಸಿ ಮುಸ್ಲಿಂ ಧರ್ಮಗುರು ವಿವಾದಾತ್ಮಕ ಹೇಳಿಕೆ!

ದೆಹಲಿಯಲ್ಲಿ ಮತ್ತೆ ನಿರ್ಭಯಾ ಮಾದರಿ ಭೀಕರ ಕೃತ್ಯ : ಚಲಿಸುವ ಸ್ಲೀಪರ್ ಬಸ್‌ನಲ್ಲಿ ವಿದ್ಯಾರ್ಥಿನಿ ಮೇಲೆ ಗ್ಯಾಂಗ್‌ರೇಪ್!
ದೇಶ

ದೆಹಲಿಯಲ್ಲಿ ಮತ್ತೆ ನಿರ್ಭಯಾ ಮಾದರಿ ಭೀಕರ ಕೃತ್ಯ : ಚಲಿಸುವ ಸ್ಲೀಪರ್ ಬಸ್‌ನಲ್ಲಿ ವಿದ್ಯಾರ್ಥಿನಿ ಮೇಲೆ ಗ್ಯಾಂಗ್‌ರೇಪ್!

ಮುಷ್ಕರ, ಹಬ್ಬಗಳು : ಸೆಪ್ಟೆಂಬರ್‌ನಲ್ಲಿ 14 ದಿನ ಬ್ಯಾಂಕ್ ಗಳಿಗೆ ರಜೆ.. ಇಲ್ಲಿದೆ ನೋಡಿ ಪಟ್ಟಿ!
ದೇಶ

ಮುಷ್ಕರ, ಹಬ್ಬಗಳು : ಸೆಪ್ಟೆಂಬರ್‌ನಲ್ಲಿ 14 ದಿನ ಬ್ಯಾಂಕ್ ಗಳಿಗೆ ರಜೆ.. ಇಲ್ಲಿದೆ ನೋಡಿ ಪಟ್ಟಿ!

Next Post
ಶ್ರೀಲಂಕಾ ತ್ರಿಕೋನ ಸರಣಿ : ಪರಾಗ್ ಔಟ್, ಇಂಡಿಯಾ ‘ಎ’ ಉಪನಾಯಕನಾಗಿ ಗಾಯಕ್ವಾಡ್ ನೇಮಕ

ಶ್ರೀಲಂಕಾ ತ್ರಿಕೋನ ಸರಣಿ : ಪರಾಗ್ ಔಟ್, ಇಂಡಿಯಾ 'ಎ' ಉಪನಾಯಕನಾಗಿ ಗಾಯಕ್ವಾಡ್ ನೇಮಕ

  • Trending
  • Comments
  • Latest
ಗಮನಿಸಿ ; ಆಗಸ್ಟ್ 16ರೊಳಗೆ ಈ ಕೆಲಸ ಮಾಡದಿದ್ದರೆ ಮನೆಗೆ ಬರಲ್ಲ LPG ಸಿಲಿಂಡರ್!

ಗಮನಿಸಿ ; ಆಗಸ್ಟ್ 16ರೊಳಗೆ ಈ ಕೆಲಸ ಮಾಡದಿದ್ದರೆ ಮನೆಗೆ ಬರಲ್ಲ LPG ಸಿಲಿಂಡರ್!

ಭಾರತದಲ್ಲಿ ಬಿಡುಗಡೆಯಾಯ್ತು ಹೈಯರ್ Mini LED M70 ಸರಣಿ : ಬೆಲೆ ಹಾಗೂ ವೈಶಿಷ್ಟ್ಯಗಳ ವಿವರ

ಭಾರತದಲ್ಲಿ ಬಿಡುಗಡೆಯಾಯ್ತು ಹೈಯರ್ Mini LED M70 ಸರಣಿ : ಬೆಲೆ ಹಾಗೂ ವೈಶಿಷ್ಟ್ಯಗಳ ವಿವರ

ವಿಜಯ ಪತಾಕೆ ಹಾರಿಸಿದ ವಿಜಯ ಭಾರತಿ ವಿದ್ಯಾರ್ಥಿನಿ!

ವಿಜಯ ಪತಾಕೆ ಹಾರಿಸಿದ ವಿಜಯ ಭಾರತಿ ವಿದ್ಯಾರ್ಥಿನಿ!

ಸಾಲಗಾರರಿಗೆ ಗುಡ್ ನ್ಯೂಸ್ : ವಸೂಲಾತಿ ನಿಯಮ ಬಿಗಿಗೊಳಿಸಿದ RBI..ಇಲ್ಲಿದೆ ಡಿಟೇಲ್ಸ್

ಸಾಲಗಾರರಿಗೆ ಗುಡ್ ನ್ಯೂಸ್ : ವಸೂಲಾತಿ ನಿಯಮ ಬಿಗಿಗೊಳಿಸಿದ RBI..ಇಲ್ಲಿದೆ ಡಿಟೇಲ್ಸ್

ಕುಡಿದ ಮತ್ತಿನಲ್ಲಿ ಸಿಕ್ಕ ಸಿಕ್ಕವರನ್ನು ಕಚ್ಚಿದ ವ್ಯಕ್ತಿ!

ಕುಡಿದ ಮತ್ತಿನಲ್ಲಿ ಸಿಕ್ಕ ಸಿಕ್ಕವರನ್ನು ಕಚ್ಚಿದ ವ್ಯಕ್ತಿ!

ಹೃದಯಾಘಾತಕ್ಕೆ ಪತಿ ಬಲಿ; 7ನೇ ಮಹಡಿಯಿಂದ ಹಾರಿದ ಪತ್ನಿ!

ಹೃದಯಾಘಾತಕ್ಕೆ ಪತಿ ಬಲಿ; 7ನೇ ಮಹಡಿಯಿಂದ ಹಾರಿದ ಪತ್ನಿ!

ಕನ್ನಡದಲ್ಲಿ ಐಎಸ್ ಬರೆದ ಮೊದಲಿಗ ಹಾಗೂ ನಟ ಶಿವರಾಮ್ ಆರೋಗ್ಯ ಸ್ಥಿತಿ ಗಂಭೀರ!

ಕನ್ನಡದಲ್ಲಿ ಐಎಸ್ ಬರೆದ ಮೊದಲಿಗ ಹಾಗೂ ನಟ ಶಿವರಾಮ್ ಆರೋಗ್ಯ ಸ್ಥಿತಿ ಗಂಭೀರ!

ಪಿಎಂ ಕಿಸಾನ್ 16ನೇ ಕಂತಿನ ಹಣ ಬಿಡುಗಡೆ!

ಪಿಎಂ ಕಿಸಾನ್ 16ನೇ ಕಂತಿನ ಹಣ ಬಿಡುಗಡೆ!

ರಾಜ್ಯ ಸರ್ಕಾರದ KSRLPS ಸಂಸ್ಥೆಯಲ್ಲಿ 34 ಹುದ್ದೆಗಳ ನೇಮಕ : ಕೂಡಲೇ ಅರ್ಜಿ ಸಲ್ಲಿಸಿ

ರಾಜ್ಯ ಸರ್ಕಾರದ KSRLPS ಸಂಸ್ಥೆಯಲ್ಲಿ 34 ಹುದ್ದೆಗಳ ನೇಮಕ : ಕೂಡಲೇ ಅರ್ಜಿ ಸಲ್ಲಿಸಿ

ವಿದೇಶಿ ಪ್ರವಾಸ, ಚಿನ್ನ ಖರೀದಿ, ವಿದೇಶಿ ವಿವಾಹ ಬೇಡ : GDP ದರ ಏರಿಕೆ ಬೆನ್ನಲ್ಲೇ ದೇಶವಾಸಿಗಳಿಗೆ ಪ್ರಧಾನಿ ಮೋದಿ ಕರೆ!

ವಿದೇಶಿ ಪ್ರವಾಸ, ಚಿನ್ನ ಖರೀದಿ, ವಿದೇಶಿ ವಿವಾಹ ಬೇಡ : GDP ದರ ಏರಿಕೆ ಬೆನ್ನಲ್ಲೇ ದೇಶವಾಸಿಗಳಿಗೆ ಪ್ರಧಾನಿ ಮೋದಿ ಕರೆ!

ಗೃಹಲಕ್ಷ್ಮಿ ಯೋಜನೆಯ ಮರುಪರಿಶೀಲನೆ ಆರಂಭ : ಮನೆ ಯಜಮಾನಿಯರು ಈ ದಾಖಲೆ ನೀಡಲೇಬೇಕು!

ಗೃಹಲಕ್ಷ್ಮಿ ಯೋಜನೆಯ ಮರುಪರಿಶೀಲನೆ ಆರಂಭ : ಮನೆ ಯಜಮಾನಿಯರು ಈ ದಾಖಲೆ ನೀಡಲೇಬೇಕು!

ಪಾಕಿಸ್ತಾನದಲ್ಲಿ 100 ವರ್ಷ ಹಳೆಯ ಹಿಂದೂ ದೇವಾಲಯ ಧ್ವಂಸ : ಮದರಸಾ ವಿಸ್ತರಣೆಗೆ ಜಾಗ ಒತ್ತುವರಿ ಆರೋಪ

ಪಾಕಿಸ್ತಾನದಲ್ಲಿ 100 ವರ್ಷ ಹಳೆಯ ಹಿಂದೂ ದೇವಾಲಯ ಧ್ವಂಸ : ಮದರಸಾ ವಿಸ್ತರಣೆಗೆ ಜಾಗ ಒತ್ತುವರಿ ಆರೋಪ

Recent News

ಬಂಧು ಮಿತ್ರರೇ ನಮಸ್ತೇ,

ನಿಖರ, ಪ್ರಖರ, ಸ್ಪಷ್ಟ ಹಾಗೂ ವಸ್ತುನಿಷ್ಠ ಸುದ್ದಿ ನೀಡುವ ಭರವಸೆಯೊಂದಿಗೆ ನಮ್ಮ “ಕರ್ನಾಟಕ ನ್ಯೂಸ್ ಬೀಟ್” ಸುದ್ದಿ ಮಾಧ್ಯಮವನ್ನು ಚಾಲ್ತಿಗೆ ತಂದಿದ್ದೇವೆ. ಜಿಲ್ಲಾ ಸುದ್ದಿ, ಪ್ರಸ್ತುತ ಸುದ್ದಿ, ವಿಶೇಷ ಅಂಕಣ, ಧರ್ಮ, ಸನಾತನ, ರಾಜಕೀಯ, ಸಿನಿಮಾ, ಅಪರಾಧ, ಕ್ರೀಡೆ, ಆರೋಗ್ಯ, ಆಹಾರ, ತಂತ್ರಜ್ಞಾನ, ಕೃಷಿ, ಪರಿಸರ, ಸಾಹಿತ್ಯ, ವಾಣಿಜ್ಯ, ಜ್ಯೋತಿಷ್ಯ, ಪುರಾಣ, ಇತಿಹಾಸ ಸೇರಿದಂತೆ ಈ ಸಮಾಜದ ಪ್ರತಿ ವಿಭಾಗದಲ್ಲೂ ನಾವು ಕಣ್ಣಿಡುತ್ತಾ, ಅಲ್ಲಿನ ಆಗು-ಹೋಗುಗಳನ್ನು ನಿರಂತರವಾಗಿ ನಿಮ್ಮ ಮುಂದೆ ತೆರೆದಿಡುತ್ತಾ ಸಾಗುತ್ತೇವೆ. ಒಟ್ಟಿನಲ್ಲಿ, ಬರವಣಿಗೆಯಲ್ಲೇ ಭಗವಂತನನ್ನ ಕಾಣುತ್ತಿರುವ, ಸದೃಢ ತಂಡದೊಂದಿಗೆ, ಕರ್ನಾಟಕ ನ್ಯೂಸ್ ಬೀಟ್ ಸುದ್ದಿ ಮಾಧ್ಯಮವು, ವಿಶೇಷವಾಗಿ ಸುದ್ದಿ, ವರದಿ, ಅಂಕಣ, ಚಿತ್ರಣಗಳನ್ನು ಹೊತ್ತು ತರುತ್ತಾ, ಸದಾ ನಿಮ್ಮೊಂದಿಗೆ ಬೆಸೆದುಕೊಂಡಿರಲಿದೆ.

Follow Us

Join Our WhatsApp Channel

Browse by Category

  • national
  • News & Politics
  • state
  • Uncategorized
  • ಅಪರಾಧ
  • ಅಮರಾವತಿ
  • ಆರೋಗ್ಯ-ಆಹಾರ
  • ಇತರೆ ಸುದ್ದಿ
  • ಇತಿಹಾಸ
  • ಉಡುಪಿ
  • ಉತ್ತರ ಕನ್ನಡ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಕಲಬುರ್ಗಿ
  • ಕೃಷಿ-ಪರಿಸರ
  • ಕೊಡಗು
  • ಕೊಪ್ಪಳ
  • ಕೋಲಾರ
  • ಕ್ರೀಡೆ
  • ಗದಗ
  • ಚಾಮರಾಜನಗರ
  • ಚಿಕ್ಕಬಳ್ಳಾಫುರ
  • ಚಿಕ್ಕಮಗಳೂರು
  • ಚಿತ್ರದುರ್ಗ
  • ಜ್ಯೋತಿಷ್ಯ
  • ತಂತ್ರಜ್ಞಾನ
  • ತುಮಕೂರು
  • ದಕ್ಷಿಣ ಕನ್ನಡ
  • ದಾವಣಗೆರೆ
  • ದೇಶ
  • ಧರ್ಮ-ಸನಾತನ
  • ಧಾರವಾಡ
  • ಪುರಾಣ
  • ಬಳ್ಳಾರಿ
  • ಬಾಗಲಕೋಟೆ
  • ಬೀದರ್
  • ಬೆಂಗಳೂರು
  • ಬೆಂಗಳೂರು ಗ್ರಾಮಾಂತರ
  • ಬೆಂಗಳೂರು ನಗರ
  • ಬೆಳಗಾವಿ
  • ಮಂಗಳೂರು
  • ಮಂಡ್ಯ
  • ಮುಖ್ಯಾಂಶಗಳು
  • ಮೈಸೂರು
  • ಯಾದಗಿರಿ
  • ರಾಜಕೀಯ
  • ರಾಜ್ಯ
  • ರಾಮನಗರ
  • ರಾಯಚೂರು
  • ವಾಣಿಜ್ಯ-ವ್ಯಾಪಾರ
  • ವಿಜಯನಗರ
  • ವಿಜಯಪುರ
  • ವಿದೇಶ
  • ವಿಶೇಷ ಅಂಕಣ
  • ವೀಡಿಯೊ ಸುದ್ದಿ
  • ವ್ಯಾಪಾರ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ಶಿವಮೊಗ್ಗ
  • ಸಿನಿಮಾ
  • ಸಿನಿಮಾ-ಮನರಂಜನೆ
  • ಹಾವೇರಿ
  • ಹಾಸನ
  • ಹುಬ್ಬಳ್ಳಿ

Recent News

ರಾಜ್ಯ ಸರ್ಕಾರದ KSRLPS ಸಂಸ್ಥೆಯಲ್ಲಿ 34 ಹುದ್ದೆಗಳ ನೇಮಕ : ಕೂಡಲೇ ಅರ್ಜಿ ಸಲ್ಲಿಸಿ

ರಾಜ್ಯ ಸರ್ಕಾರದ KSRLPS ಸಂಸ್ಥೆಯಲ್ಲಿ 34 ಹುದ್ದೆಗಳ ನೇಮಕ : ಕೂಡಲೇ ಅರ್ಜಿ ಸಲ್ಲಿಸಿ

ವಿದೇಶಿ ಪ್ರವಾಸ, ಚಿನ್ನ ಖರೀದಿ, ವಿದೇಶಿ ವಿವಾಹ ಬೇಡ : GDP ದರ ಏರಿಕೆ ಬೆನ್ನಲ್ಲೇ ದೇಶವಾಸಿಗಳಿಗೆ ಪ್ರಧಾನಿ ಮೋದಿ ಕರೆ!

ವಿದೇಶಿ ಪ್ರವಾಸ, ಚಿನ್ನ ಖರೀದಿ, ವಿದೇಶಿ ವಿವಾಹ ಬೇಡ : GDP ದರ ಏರಿಕೆ ಬೆನ್ನಲ್ಲೇ ದೇಶವಾಸಿಗಳಿಗೆ ಪ್ರಧಾನಿ ಮೋದಿ ಕರೆ!

  • About
  • Advertise
  • Privacy & Policy
  • Contact Us

© 2025 Karnatakanewsbeat

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಬ್ಲಾಗ್
  • ಜಿಲ್ಲಾ ಸುದ್ದಿ
    • ಬೆಂಗಳೂರು ನಗರ
    • ಬೆಂಗಳೂರು ಗ್ರಾಮಾಂತರ
    • ಬೆಳಗಾವಿ
    • ಬೀದರ್
    • ಬಾಗಲಕೋಟೆ
    • ಬಳ್ಳಾರಿ
    • ಚಾಮರಾಜನಗರ
    • ದಕ್ಷಿಣ ಕನ್ನಡ
    • ಚಿಕ್ಕಬಳ್ಳಾಪುರ
    • ಮಂಗಳೂರು
    • ಧಾರವಾಡ
    • ದಾವಣಗೆರೆ
    • ಚಿತ್ರದುರ್ಗ
    • ಗದಗ
    • ಹಾಸನ
    • ವಿಜಯಪುರ
    • ಹಾವೇರಿ
    • ಕಲಬುರ್ಗಿ
    • ಕೋಲಾರ
    • ರಾಯಚೂರು
    • ಕೊಡಗು
    • ರಾಯಚೂರು
    • ರಾಮನಗರ
    • ಕೊಪ್ಪಳ
    • ತುಮಕೂರು
    • ಮೈಸೂರು
    • ಮಂಡ್ಯ
    • ಉಡುಪಿ
    • ಚಿಕ್ಕಮಗಳೂರು
    • ಉತ್ತರ ಕನ್ನಡ
    • ವಿಜಯನಗರ
    • ಶಿವಮೊಗ್ಗ
    • ಯಾದಗಿರಿ
  • ರಾಜ್ಯ
  • ರಾಜಕೀಯ
  • ದೇಶ
  • ವಿದೇಶ
  • ಕ್ರೀಡೆ
  • ಸಿನಿಮಾ-ಮನರಂಜನೆ
  • ವಿಶೇಷ ಅಂಕಣ
  • ಧರ್ಮ-ಸನಾತನ
  • ಅಪರಾಧ
  • ಆರೋಗ್ಯ-ಆಹಾರ
  • ತಂತ್ರಜ್ಞಾನ
  • ಕೃಷಿ-ಪರಿಸರ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ವಾಣಿಜ್ಯ-ವ್ಯಾಪಾರ
  • ಜ್ಯೋತಿಷ್ಯ
  • ಪುರಾಣ
  • ಇತಿಹಾಸ

© 2025 Karnatakanewsbeat