ಬೆಂಗಳೂರು : ರಾಜ್ಯಸಭಾ ಚುನಾವಣೆಯ ಘೋಷಣೆ ಬೆನ್ನಲ್ಲೇ ಕರ್ನಾಟಕದ ವಿಧಾನ ಪರಿಷತ್ ಎಲೆಕ್ಷನ್ಗೂ ದಿನಾಂಕ ಪ್ರಕಟಗೊಂಡಿದೆ. ಜೂನ್ 26ರಂದು ತೆರವಾಗಲಿರುವ ಪರಿಷತ್ನ 7 ಸ್ಥಾನಗಳಿಗೆ ಜೂನ್ 18ರಂದು ಚುನಾವಣೆ ನಡೆಯಲಿದೆ.
ಕಾಂಗ್ರೆಸ್ನ 3, ಬಿಜೆಪಿಯ 3 ಮತ್ತು ಜೆಡಿಎಸ್ನ ಒಂದು ಸದಸ್ಯರ ಅವಧಿ ಜೂನ್ನಲ್ಲಿ ಮುಕ್ತಾಯವಾಗಲಿದೆ. ಚುನಾವಣೆಗೆ ದಿನಾಂಕ ಘೋಷಣೆ ಬೆನ್ನಲ್ಲೇ ಆಕಾಂಕ್ಷಿಗಳು ಅಲರ್ಟ್ ಆಗಿದ್ದು, ಸ್ಥಾನ ಗಿಟ್ಟಿಸಲು ಕಾರ್ಯಕತಂತ್ರ ಶುರುಮಾಡಿದ್ದಾರೆ.
- ನಾಮಪತ್ರ ಪರಿಶೀಲನೆ : ಜೂನ್ 09
- ನಾಮಪತ್ರ ಹಿಂಪಡೆಯಲು ಕೊನೇ ದಿನ : ಜೂನ್ 11
- ಮತದಾನ : ಜೂನ್ 18
- ಫಲಿತಾಂಶ : ಜೂನ್ 18
ವಿಧಾನ ಪರಿಷತ್ತಿನ ಯಾವೆಲ್ಲ ಸದಸ್ಯರ ಅವಧಿ ಮುಕ್ತಾಯ?
ಬಿ.ಕೆ. ಹರಿಪ್ರಸಾದ್, ನಾಸೀರ್ ಅಹ್ಮದ್, ತಿಪ್ಪಣ್ಣ, ಪ್ರತಾಪ್ ಸಿಂಹ ನಾಯಕ್, ಎನ್. ನಾಗರಾಜು (ಎಂಟಿಬಿ), ಸುನಿಲ್ ವಲ್ಯಾಪುರ ಮತ್ತು ಗೋವಿಂದರಾಜು ಅವರ ಅಧಿಕಾರ ಅವಧಿಯು ಜೂನ್ನಲ್ಲಿ ಮುಕ್ತಾಯವಾಗಲಿದೆ. ಇನ್ನು ವಿಧಾನ ಸಭೆಯ ಹಾಲಿ ಬಲಾಬಲವನ್ನು ಗಮನಿಸಿದರೆ ತೆರವಾಗಲಿರುವ 7 ಸ್ಥಾನಗಳ ಪೈಕಿ 5 ಸ್ಥಾನಗಳು ಕಾಂಗ್ರೆಸ್ ಮತ್ತು 2 ಸ್ಥಾನಗಳು ಬಿಜೆಪಿ ಪಾಲಾಗುವ ಸಾಧ್ಯತೆ ಇದೆ. ಆ ಮೂಲಕ ಕಾಂಗ್ರೆಸ್ 2 ಸ್ಥಾನಗಳನ್ನು ಹೆಚ್ಚಿಸಿಕೊಂಡರೆ, ವಿಪಕ್ಷ ಬಿಜೆಪಿ ಮತ್ತು ಜೆಡಿಎಸ್ ತಲಾ 1 ಸ್ಥಾನಗಳನ್ನು ಕಳೆದುಕೊಳ್ಳುವ ಲೆಕ್ಕಾಚಾರ ಇದೆ.
ಇದನ್ನೂ ಓದಿ : ರೇಬಿಸ್ ಲಸಿಕೆ ನಿರ್ಲಕ್ಷಿಸಿದಕ್ಕೆ ಹೋಯಿತು ಯುವಕನ ಪ್ರಾಣ!



















