ಬೆಂಗಳೂರು : ದೊಡ್ಮನೆ ಕುಡಿ ವಿನಯ್ ರಾಜ್‌ಕುಮಾರ್ ಹುಟ್ಟುಹಬ್ಬದ ದಿನದಂದೇ ಹೊಸ ಚಿತ್ರ ಅನೌನ್ಸ್ ಮಾಡಲಾಗಿದೆ. ಮರ್ಫಿ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದ ಬಿ.ಎಸ್.ಪಿ.ವರ್ಮ ‘ಮಾಚಿಸ್’ ಚಿತ್ರ ನಿರ್ದೇಶನದ ಜವಬ್ದಾರಿ ಹೊತ್ತಿದ್ದಾರೆ. ಸುರೇಶ್ ಗೌಡ ಹೆಣ್ಣೂರು ಚಿತ್ರಕ್ಕೆ ಬಂಡವಾಳ ಹೂಡಿದ್ದು, ಕ್ರಿಯೇಟಿವ್ ಪ್ರೊಡ್ಯೂಸರ್ ಆಗಿ ಶಿವುಗೌಡ ಇದ್ದಾರೆ.

ಚಿತ್ರದ ಸಂಪೂರ್ಣ ತಾಂತ್ರಿಕ ವರ್ಗ ಹೀಗಿದೆ…
ಛಾಯಾಗ್ರಾಹಕರಾಗಿ ಆದರ್ಶ ಆರ್, ಸಂಕಲನಕಾರರಾಗಿ ಕಿರಣ್, ಕಲಾ ನಿರ್ದೇಶಕರಾಗಿ ಗುಣ, ಕಾರ್ಯಕಾರಿ ನಿರ್ಮಾಪಕರಾಗಿ ಮೋಹನ್ ಎನ್ ಮುನಿನಾರಾಯಣಪ್ಪ, ನಿರ್ವಹಣಾ ನಿರ್ಮಾಪಕರಾಗಿ ಸುರೇಶ್ ಮೈಸೂರು ಹಾಗೂ ಸಾಹಸ ಸಂಯೋಜನೆಯನ್ನ ಡಾ.ಕೆ.ರವಿವರ್ಮಾ ಮಾಡಲಿದ್ದಾರೆ.

ಜುಲೈನಿಂದ ಚಿತ್ರದ ಚಿತ್ರೀಕರಣ ಆರಂಭವಾಗಲಿದೆ. ಮಾಚಿಸ್ ಒಂದು ಬಿಗ್ ಬಜೆಟ್ ಸಿನಿಮಾವಾಗಿದ್ದು, ವಿನಯ್ ಇಲ್ಲಿ ಮಾಸ್ ಎಂಟ್ರಿ ಕೊಡ್ತಾರೆ ಎಂಬುದಂತೂ ಫಿಕ್ಸ್.
ಇದನ್ನೂ ಓದಿ : ಮಗನ ಸಮಾಧಿ ಮುಂದೆ ಕಣ್ಣೀರಿಟ್ಟ ಸೆಲಿನಾ ಜೇಟ್ಲಿ ; “ನನ್ನ ಮಕ್ಕಳನ್ನು ಭೇಟಿ ಮಾಡಲು ಬಿಡುತ್ತಿಲ್ಲ” ಎಂದು ಅಳಲು!



















