ಬೆಂಗಳೂರು : ಅಮೆರಿಕ-ಇರಾನ್ ಸಂಘರ್ಷದಿಂದಾಗಿ ದೇಶದಲ್ಲಿ ಅಡುಗೆ ಅನಿಲ ಸಿಲಿಂಡರ್ ಕೊರತೆ ಉಂಟಾಗಿದೆ ಎಂಬ ವದಂತಿಗಳು ಹರಡಿದ ಕಾರಣ (New LPG Cylinder Rules From May 1) ಬುಕ್ಕಿಂಗ್ ಭರಾಟೆ ಜೋರಾಗಿದೆ. ಯಾರೂ ಪ್ಯಾನಿಕ್ ಆಗಿ ಸಿಲಿಂಡರ್ ಬುಕ್ ಮಾಡಬೇಕು ಎಂದು ಸರ್ಕಾರ ಮನವಿ ಮಾಡಿದರೂ ಜನ ಬುಕ್ ಮಾಡುತ್ತಿದ್ದಾರೆ. ಇನ್ನು ಕಾಳಸಂತೆಯಲ್ಲಿ ಬೇಕಾಬಿಟ್ಟಿ ಬೆಲೆಗೆ ಮಾರಾಟ ಮಾಡುವುದೂ ಹೆಚ್ಚಾಗಿದೆ. ಹಾಗಾಗಿ, ಮೇ 1ರಿಂದ ಎಲ್ ಪಿಜಿ ಅಡುಗೆ ಅನಿಲ ಸಿಲಿಂಡರ್ ಬುಕ್ಕಿಂಗ್ ನಿಯಮಗಳಲ್ಲಿ ಬದಲಾವಣೆ ತರಲು ಎಲ್ ಪಿಜಿ ಪೂರೈಕೆ ಕಂಪನಿಗಳು ಮುಂದಾಗಿದೆ.
ಕಾಳಸಂತೆಯಲ್ಲಿ ಸಿಲಿಂಡರ್ ಮಾರಾಟವನ್ನು ತಡೆಯಲು ಕೇಂದ್ರ ಸರ್ಕಾರವು ಈಗಾಗಲೇ ಎಲ್ ಪಿಜಿ ಬುಕ್ ಮಾಡುವ ಗ್ಯಾಪ್ ದಿನಗಳನ್ನು 21ರಿಂದ 25 ದಿನಗಳಿಗೆ ಏರಿಕೆ ಮಾಡಲಾಗಿದೆ. ಗ್ರಾಮೀಣ ಪ್ರದೇಶಗಳಲ್ಲೂ ಅಂತರವನ್ನು 45 ದಿನಗಳಿಗೆ ಏರಿಕೆ ಮಾಡಿದೆ. ಇದರಿಂದಾಗಿ ಜನ ಪ್ಯಾನಿಕ್ ಆಗಿ ಬುಕ್ ಮಾಡುವುದನ್ನು ತಡೆಯಲಾಗಿದೆ.
ಇದಿಷ್ಟೇ ಅಲ್ಲ, ಮೇ 1ರಿಂದ ಅಡುಗೆ ಅನಿಲ ಸಿಲಿಂಡರ್ ಪಡೆಯುವವರು ಒಟಿಪಿ ನೀಡುವುದು ಕಡ್ಡಾಯವಾಗಿದೆ. ಗ್ರಾಹಕರು ಇದುವರೆಗೆ ಗ್ಯಾಸ್ ಕಂಪನಿ ನೀಡಿದ ಪುಸ್ತಕ ನೀಡಿ ಸಿಲಿಂಡರ್ ಗಳನ್ನು ಪಡೆಯುತ್ತಿದ್ದರು. ಆದರೆ, ಹೆಚ್ಚಿನ ಸಿಲಿಂಡರ್ ಬುಕ್ಕಿಂಗ್ ತಡೆಯುವ ದಿಸೆಯಲ್ಲಿ ಈಗ ಗ್ರಾಹಕರು ಬುಕ್ ಮಾಡಿದ ಬಳಿಕ ಒಟಿಪಿ ನೀಡುವುದು ಕಡ್ಡಾಯವಾಗಿದೆ.
ಹಾಗೆಯೇ, ಪ್ರಧಾನಮಂತ್ರಿ ಉಜ್ವಲ ಯೋಜನೆ ಅಡಿಯಲ್ಲಿ ಅಡುಗೆ ಅನಿಲ ಸಿಲಿಂಡರ್ ಪಡೆಯುವವರಿಗೆ ಬಯೋಮೆಟ್ರಿಕ್ ದೃಢೀಕರಣ ಕಡ್ಡಾಯವಾಗಿದೆ. ಇ-ಕೆವೈಸಿ ಮಾಡಿಸದವರು ಕೂಡಲೇ ಪ್ರಕ್ರಿಯೆ ಮುಗಿಸಬೇಕು ಎಂದು ಕೂಡ ಸರ್ಕಾರ ತಿಳಿಸಿದೆ. ಆದಾಗ್ಯೂ, ಮೇ 1ರಂದು ಗೃಹಬಳಕೆ ಹಾಗೂ ವಾಣಿಜ್ಯ ಬಳಕೆ ಸಿಲಿಂಡರ್ ಬೆಲೆಯಲ್ಲಿ ಏರಿಕೆಯಾಗುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ : ಬೆಂಗಳೂರಿಗೆ ರೆಡ್ ಅಲರ್ಟ್ : 40°C ದಾಟಿದ ತಾಪಮಾನ.. ಹೀಟ್ ವೇವ್ ಅಬ್ಬರಕ್ಕೆ ಸಿಲಿಕಾನ್ ಸಿಟಿ ಕಂಗಾಲು!



















