ಬೆಂಗಳೂರು : ಪ್ರತಿ ತಿಂಗಳು ಯುಟಿಲಿಟಿ ಬಿಲ್‌ಗಳನ್ನು ಪಾವತಿಸಲು, ನೆಟ್ ಫ್ಲಿಕ್ಸ್, ಅಮೆಜಾನ್ ಪ್ರೈಮ್‌ಗಳಂತಹ ಒಟಿಟಿ ವೇದಿಕೆಗಳ ಶುಲ್ಕವನ್ನು ಪಾವತಿಸಲು ಹೆಚ್ಚಿನ ಜನ ಆಟೋ-ಡೆಬಿಟ್ ಆಯ್ಕೆ ಮಾಡಿಕೊಂಡಿರುತ್ತಾರೆ. ಆದರೆ, ಪ್ರತಿ ಬಾರಿಯ ಪೇಮೆಂಟ್‌ಗೂ ಒಟಿಪಿ ನಮೂದಿಸುವ ಅಗತ್ಯವಿದೆ. ಆರ್‌ಬಿಐ ಈಗ ಹೊಸ ನಿಯಮವನ್ನು ರೂಪಿಸಿದ್ದು, ಆಟೋ ಡೆಬಿಟ್‌ಗೆ ಪ್ರತಿ ಬಾರಿಯೂ ಒಟಿಪಿ ನಮೂದಿಸುವ ಅವಶ್ಯಕತೆ ಇಲ್ಲ ಎಂದು ತಿಳಿಸಿದೆ.
ಹೌದು, 15 ಸಾವಿರ ರೂಪಾಯಿವರೆಗಿನ ಹಣದ ಕಡಿತಕ್ಕೆ ಪ್ರತಿ ಬಾರಿಯೂ ಒಟಿಪಿ ನಮೂದಿಸುವ ಅವಶ್ಯಕತೆ ಇಲ್ಲ ಎಂದು ಆರ್ ಬಿಐ ತಿಳಿಸಿದೆ. ಇ-ಮ್ಯಾಂಡೇಟ್ ನಿಯಮಗಳನ್ನು ಆರ್ ಬಿಐ ಸರಳೀಕರಿಸಿದೆ. ಅದರಂತೆ, ಗ್ರಾಹಕರು ಆಟೋ-ಡೆಬಿಟ್ ಸೆಟ್ ಮಾಡುವಾಗ ಮಾತ್ರ ಒಟಿಪಿಯನ್ನು ನಮೂದಿಸಬೇಕು. ಇದಾದ ಬಳಿಕ ಪ್ರತಿ ತಿಂಗಳು ಆಗುವ ಆಟೋ-ಡೆಬಿಟ್ ಗಳಿಗೆ ಗ್ರಾಹಕರು ಒಟಿಪಿಯನ್ನು ನಮೂದಿಸುವ ಅವಶ್ಯಕತೆಯೇ ಇರುವುದಿಲ್ಲ.
ಹೊಸ ನಿಯಮಗಳು ಜಿಮ್ ಮೆಂಬರ್ ಶಿಪ್, ಒಟಿಟಿ ಸಬ್ ಸ್ಕ್ರಿಪ್ಶನ್, ಯುಟಿಲಿಟಿ ಬಿಲ್ ಗಳು, ಸಣ್ಣ ಮೊತ್ತದ ಇಎಂಐ, ಎಸ್ಐಪಿ ಹೂಡಿಕೆ ಹಣದ ಕಡಿತಕ್ಕೆ ಈಗ ಪ್ರತಿ ಬಾರಿಯೂ ಒಟಿಪಿ ನಮೂದಿಸುವ ಅವಶ್ಯಕತೆಯೇ ಇರುವುದಿಲ್ಲ. ಹಾಗೆಯೇ, ಗ್ರಾಹಕರ ಖಾತೆಯಿಂದ ಆಟೋ ಡೆಬಿಟ್ ಆಗುವ ಮುನ್ನ ಅವರಿಗೆ 24 ಗಂಟೆ ಮೊದಲೇ ಮಾಹಿತಿ ನೀಡಬೇಕು ಎಂದು ಕೂಡ ಆರ್ ಬಿಐ ಸೂಚನೆ ನೀಡಿದೆ.
ಇದಿಷ್ಟು ಯುಟಿಲಿಟಿ ಬಿಲ್ ಪಾವತಿ ಸೇರಿ ಸಣ್ಣ ಮೊತ್ತದ ವಹಿವಾಟುಗಳಾದರೆ, ದೊಡ್ಡ ವಹಿವಾಟುಗಳಿಗೂ ಆರ್ ಬಿಐ ನಿಯಮ ಸರಳಗೊಳಿಸಿದೆ. ಮ್ಯೂಚುವಲ್ ಫಂಡ್ ಹೂಡಿಕೆ, ವಿಮೆಗಳ ಪ್ರೀಮಿಯಂ ಪಾವತಿ, ಕ್ರೆಡಿಟ್ ಕಾರ್ಡ್ ಬಿಲ್ ಗಳಿಗೂ 1 ಲಕ್ಷ ರೂಪಾಯಿವರೆಗಿನ ಪಾವತಿಗೆ ಒಟಿಪಿ ಬೇಕಾಗಿಲ್ಲ ಎಂದು ಆರ್ ಬಿಐ ತಿಳಿಸಿದೆ. 1 ಲಕ್ಷ ರೂ.ಗಿಂತ ಹೆಚ್ಚಿನ ಮೊತ್ತದ ಪಾವತಿ ಇದ್ದರೆ ಮಾತ್ರ ಪ್ರತಿ ಬಾರಿ ಒಟಿಪಿ ಬೇಕು ಎಂದು ಸೂಚಿಸಿದೆ.
ಇದನ್ನೂ ಓದಿ : ಸೌದಿಯಲ್ಲಿ ಉಕ್ರೇನ್‌ನ ‘ಸ್ಕೈ ಮ್ಯಾಪ್’ ಡ್ರೋನ್ ನಿಗ್ರಹ ತಂತ್ರಜ್ಞಾನ ನಿಯೋಜಿಸಿದ ಅಮೆರಿಕ!



















