ಮೈಸೂರು : ಜಿಲ್ಲೆಯ ತಲಕಾಡಿನ ನಿಸರ್ಗಧಾಮದಲ್ಲಿ ದುರ್ಘಟನೆ ಸಂಭವಿಸಿದೆ. ಕಾವೇರಿ ನದಿಯಲ್ಲಿ ಈಜಾಡುತ್ತಿದ್ದ ವೇಳೆ ಇಬ್ಬರು ವಿದ್ಯಾರ್ಥಿನಿಯರು ನೀರಲ್ಲಿ ಮುಳುಗಿ ದುರ್ಮರಣ ಹೊಂದಿದ್ದಾರೆ. ಮೃತರಾದ ವಿದ್ಯಾರ್ಥಿಗಳನ್ನು ಚಾರ್ವಿ (15) ಮತ್ತು ರಮ್ಯ (16) ಎಂದು ಗುರುತಿಸಲಾಗಿದೆ.
ಇವರು ಬೆಂಗಳೂರಿನಿಂದ ಶಾಲಾ ಪ್ರವಾಸಕ್ಕೆ ಬಂದಿದ್ದ ತಂಡದ ಭಾಗವಾಗಿದ್ದರು. ಒಟ್ಟು 72 ವಿದ್ಯಾರ್ಥಿಗಳು ತಲಕಾಡಿಗೆ ಭೇಟಿ ನೀಡಿದ್ದರು. ಕಾವೇರಿ ನದಿಯಲ್ಲಿ ಈಜುವ ವೇಳೆ ಅಕಸ್ಮಿಕವಾಗಿ ನೀರಿನ ಸೆಳೆತಕ್ಕೆ ಸಿಲುಕಿದ ವಿದ್ಯಾರ್ಥಿಗಳು ನಿಯಂತ್ರಣ ಕಳೆದುಕೊಂಡು ನೀರುಪಾಲಾಗಿದ್ದಾರೆ.
ಈ ಸಂದರ್ಭ ಮತ್ತೊಬ್ಬ ವಿದ್ಯಾರ್ಥಿನಿ ಸುಚಿತ್ರ ಗಂಭೀರ ಸ್ಥಿತಿಗೆ ತಲುಪಿದ್ದು, ಸ್ಥಳೀಯರು ತಕ್ಷಣ ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಇನ್ನೊಬ್ಬ ವಿದ್ಯಾರ್ಥಿಯನ್ನು ಕೂಡ ಮುಳುಗುತ್ತಿದ್ದ ವೇಳೆ ರಕ್ಷಿಸಲಾಗಿದ್ದು, ಹೆಚ್ಚಿನ ಅನಾಹುತ ತಪ್ಪಿದೆ. ಘಟನೆ ಬಳಿಕ ಸ್ಥಳದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದ್ದು, ಪ್ರವಾಸದ ವೇಳೆ ಸುರಕ್ಷತೆ ಕುರಿತು ಮತ್ತೆ ಪ್ರಶ್ನೆಗಳು ಎದ್ದಿವೆ.
ಇದನ್ನೂ ಓದಿ : ಪಂಜಾಬ್‌ನಲ್ಲಿ ಸ್ಫೋಟಗೊಂಡ IPL ಬೆಟ್ಟಿಂಗ್ ಹಗರಣ : 42 ಲಕ್ಷ ರೂ. ಜಪ್ತಿ, ಬಯಲಾಯ್ತು ದುಬೈ ನಂಟು!



















