ಬೆಂಗಳೂರು: ಗ್ಯಾಸ್ ಸಿಲಿಂಡರ್, ಎಲ್‌ಪಿಜಿ ಇಲ್ಲದೇ ಕರ್ನಾಟಕದಲ್ಲಿ ನಿತ್ಯ ಕಣ್ಣೀರಿನ ಕಥೆಯಾಗಿದೆ ಎಂದು ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಹೇಳಿದ್ದಾರೆ.
ರಾಜ್ಯದಲ್ಲಿ ಗ್ಯಾಸ್ ಸಿಲಿಂಡರ್ ಅಭಾವದ ಕುರಿತಾಗಿ ಇಂದು ಮಾದ್ಯಮ ವರದಿಗಾರರೊಂದಿಗೆ ಮಾತನಾಡಿದ ವಾಟಾಳ್, ರಿಕ್ಷಾ ಚಾಲಕರಿಗೆ ಗಂಭೀರ ಪರಿಸ್ಥಿತಿ ಎದುರಾಗಿದ್ದು, ಸುಮಾರು ಲಕ್ಷ್ಯಾಂತರ ಆಟೋ ಚಾಲಕರು ಜೀವನ ಮಾಡ್ತಿದ್ದಾರೆ. ಎರಡು ಹೊತ್ತು ದುಡಿದರೂ ಅವರ ಹೊಟ್ಟೆಗೆ ಸಾಕಾಗಲ್ಲ,ಇದರ ಮಧ್ಯೆ ಗ್ಯಾಸ್ ಸಮಸ್ಯೆಯಿಂದ ಅವರು ಉಪವಾಸದಲ್ಲಿದ್ದಾರೆ ಎಂದು ತಿಳಿಸಿದ್ದಾರೆ.
ಈಗಾಗಲೇ ಎಲ್‌ಪಿಜಿ ಗ್ಯಾಸ್ ಸಿಲಿಂಡರ್ ಬಗೆ ತೀವ್ರವಾದ ಹೋರಾಟ ಮಾಡಿದ್ದೇವೆ. ಇದೇ ಏ. 22 ರಂದು ಬುಧವಾರ ಹೊಸಕೋಟೆ ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಿ ಪ್ರತಿಭಟನೆ ಮಾಡಲಿದ್ದೇವೆ ಎಂದು ತಿಳಿಸಿದ್ದಾರೆ.
ಆಟೋ ಚಾಲಕರು ನಿಜವಾಗಲೂ ಕಣ್ಣೀರಲ್ಲಿ ದಿನ ಕಳೆಯುತ್ತಿದ್ದಾರೆ. ಹಾಗಾಗಿ ಎಲ್‌ಪಿಜಿ ಕೊಡಬೇಕು, ಇಲ್ಲ ಅವರ ಜೀವನಕ್ಕೆ 10ಸಾವಿರ ನೀಡಬೇಕು.ಇದಕ್ಕೊಂದು ಶೀಘ್ರವೇ ಕ್ರಮ ಆಗಬೇಕು ಎಂದು ಆಗ್ರಹಿಸಿದ್ದಾರೆ.
ಇರಾನ್ ಅಮೆರಿಕ, ಇಸ್ರೇಲ್ ಯುದ್ಧದಿಂದ ಎಲ್ಲ ದೇಶಗಳಿಗೂ ಸಮಸ್ಯೆ ಆಗಿದೆ. ಪ್ರಧಾನಿ ಮೋದಿ ಅವರು ಈ ಸಮಯದಲ್ಲಿ ಯುದ್ಧ ನಿಲ್ಲಿಸಬೇಕು ಅಂತಾ ಹೇಳೋ ಸಂದರ್ಭ ಬಂದಿದೆ. ಯುದ್ದ ಇದೇ ರೀತಿ ಮುಂದುವರೆದ್ರೆ ರಸ್ತೆಯಲ್ಲೆ ಪ್ರಾಣ ಬಿಡೋ ಪರಿಸ್ಥಿತಿ ಎದುರಾಗಲಿದೆ ಹೀಗಾಗಿ ಇದಕ್ಕೆ ಒಂದು ಪರಿಹಾರ ನೀಡಿ ಅಂತಾ ಸರ್ಕಾರಕ್ಕೆ ನಾವು ಮನವಿ ಮಾಡ್ತೇವೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಆದಷ್ಟು ಬೇಗ ಮಹಿಳಾ ಮೀಸಲಾತಿ ಜಾರಿ ಮಾಡಿ ಎನ್ನುವುದೇ ನಮ್ಮ ವಾದ : ದಿನೇಶ್ ಗುಂಡೂರಾವ್



















