ಬೆಂಗಳೂರು: ಮಹಿಳಾ ಮೀಸಲಾತಿ ಬಿಲ್ ತಂದ ದಿನವೇ ಜಾರಿ ಮಾಡಬೇಕಿತ್ತು. ಆದಷ್ಟು ಬೇಗ ಮಹಿಳಾ ಮೀಸಲಾತಿ ಜಾರಿ ಮಾಡಿ ಎನ್ನುವುದೇ ನಮ್ಮ ವಾದ ಎಂದು ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.
ಲೋಕಸಭೆಯಲ್ಲಿ ಕ್ಷೇತ್ರಗಳ ಹೆಚ್ಚಳ ಮಸೂದೆ ಮಂಡನೆ ವಿಚಾರವಾಗಿ ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ದಿನೇಶ್ ಗುಂಡೂರಾವ್, ಮರುವಿಂಗಡಣೆ ಪ್ರಕ್ರಿಯೆ ಬೇರೆ.. ಮಹಿಳಾ ಮೀಸಲಾತಿ ಪ್ರಕ್ರಿಯೆ ಬೇರೆ. ಮರುವಿಂಗಡಣೆ ಪ್ರಕ್ರಿಯೆ 50% ಹೆಚ್ಚಳ ಮಾಡ್ತಿವಿ ಎಂದಿದ್ದಾರೆ. ಜನಸಂಖ್ಯೆ ಮಾನದಂಡ ಅಲ್ಲ ಅನ್ನೋದನ್ನು ಹೇಳಿದ್ದಾರೆ. ಎಲ್ಲಾ ರಾಜ್ಯಗಳಲ್ಲೂ 50% ಏರಿಕೆ ಮಾಡುವುದರಿಂದ ಅನ್ಯಾಯ ಆಗುವುದಿಲ್ಲ. ಆದರೆ ಜನಸಂಖ್ಯೆ ಆಧಾರ ತಗೆದುಕೊಂಡರೆ ಅನ್ಯಾಯವಾಗುತ್ತಿತ್ತು ಎಂದಿದ್ದಾರೆ.
ಇನ್ನು, ಕಾಂಗ್ರೆಸ್‌ನಲ್ಲಿ ಅಲ್ಪಸಂಖ್ಯಾತರ ದಂಗಲ್ ವಿಚಾರವಾಗಿ ಮಾತನಾಡಿ, ಯಾವುದೇ ಪಕ್ಷ ಯಾರೋಬ್ಬರ ಮೇಲೆ ನಿಂತಿಲ್ಲ. ಪಕ್ಷ ಯಾರರೊಬ್ಬರನ್ನು ಓಲೈಸುವುದಿಲ್ಲ. ಜಮೀರ್ ಅಹಮದ್ ಒಳ್ಳೆ ನಾಯಕರು, ಜನಪ್ರಿಯ ನಾಯಕರು. ಗೊಂದಲ ದಾವಣಗೆರೆ ದಕ್ಷಿಣಕ್ಕೆ ಸೀಮಿತವಾದ ವಿಚಾರವಾಗಿದೆ. ಪಕ್ಷದಲ್ಲಿ ಶಿಸ್ತನ್ನು ಕಾಪಾಡಿಕೊಳ್ಳಬೇಕಾಗುತ್ತೆ, ಅದನ್ನು ಮಾಡಿದ್ದಾರೆ. ಪಕ್ಷದಲ್ಲಿ ಯಾರನ್ನು ತುಳಿಯುವುದಿಲ್ಲ. ಯಾವ ಧರ್ಮವನ್ನು ಓಲೈಸುವ ಕೆಲಸ ಮಾಡುತ್ತಿಲ್ಲ. ಜಾತಿ, ಧರ್ಮ ನೋಡಿ ಪರವಾಗಿ ನಿಲ್ಲುವುದಿಲ್ಲ. ಬಿಜೆಪಿಯವ್ರು ಒಬ್ಬರ ಪರವಾಗಿ ಮಾತ್ರ ಧ್ವನಿ ಎತ್ತುತ್ತಾರೆ, ನಾವು ಹಾಗಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
ಸಚಿವ ಸಂಪುಟ ಪುನಾರಚನೆ ಮಾಡಿ ಎನ್ನುವುದು ಸಹಜ. ಕಳೆದ ಸರ್ಕಾರದಲ್ಲಿ 3 ವರ್ಷದ ನಂತರ ನನ್ನನ್ನು ಕೈಬಿಟ್ಟಿದ್ರು. ಅದೇ ರೀತಿ ಬೇರೆಯವರಿಗೂ ಅವಕಾಶ ಸಿಗಬೇಕು. ವರಿಷ್ಠರನ್ನು ಕೇಳುವುದು ಕೂಡ ಹಕ್ಕು, ಪಕ್ಷದಲ್ಲಿ ಪ್ರಜಾಪ್ರಭುತ್ವವಿದೆ. ಸಚಿವ ಸ್ಥಾನ ಕೇಳುವುದರಲ್ಲಿ ತಪ್ಪಿಲ್ಲ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಮಾಲೂರಿನ ಜನರಿಗೆ ಭರ್ಜರಿ ಬಿರಿಯಾನಿ ಊಟ ಹಾಕಿಸಿದ ಶಾಸಕ ಕೆ.ವೈ.ನಂಜೇಗೌಡ



















