ಗಾಂಧಿನಗರ : ಸ್ವಿಮಿಂಗ್ ಪೂಲ್‌ನಲ್ಲಿ ಮುಳುಗಿ 22 ವರ್ಷದ ಯುವಕ ಸಾವನಪ್ಪಿರುವ ಆಘಾತಕಾರಿ ಘಟನೆ ಗುಜರಾತ್‌ನ ಸೂರತ್‌ನಲ್ಲಿರುವ ಅಕ್ಷಯ್ ರೆಸಾರ್ಟ್‌ನಲ್ಲಿ ನಡೆದಿದೆ. ಸೂರತ್‌ನ ಪಾಂಡೇಸರ ನಿವಾಸಿ ಪುರುಷೋತ್ತಮ್ ಅಶೋಕಭಾಯ್ ಚೌಧರಿ ಮೃತಪಟ್ಟ ಯುವಕ.
ಈ ಘಟನೆ ಮಾರ್ಚ್ 23ರಂದು ನಡೆದಿದ್ದು, ವಿಡಿಯೋ ತಡವಾಗಿ ಬೆಳಕಿಗೆ ಬಂದಿದೆ. ಸೂರತ್‌ನ ಯುವಕರ ಗುಂಪೊಂದು ರಜೆಯ ದಿನವನ್ನು ಕಳೆಯಲು ರೆಸಾರ್ಟ್‌ಗೆ ಭೇಟಿ ನೀಡಿತ್ತು. ಆ ಪೈಕಿ 22 ವರ್ಷದ ಪುರುಷೋತ್ತಮ್ ಚೌಧರಿ ಕೂಡ ಇದ್ದ. ಆತ ಮಧ್ಯಾಹ್ನದ ಸುಮಾರಿಗೆ ತಮ್ಮ ಸ್ನೇಹಿತನ ಜತೆ ಈಜುಕೊಳಕ್ಕೆ ತೆರಳಿದ್ದ. ಈ ವೇಳೆ ದುರಂತ ಸಂಭವಿಸಿದೆ.
ಸಿಸಿಟಿವಿ ಕ್ಯಾಮರಾದಲ್ಲಿ ಈ ಭಯಾನಕ ದೃಶ್ಯ ರೆಕಾರ್ಡ್ ಆಗಿದ್ದು, ಈಜುಕೊಳದೊಳಗೆ ಪುರುಷೋತ್ತಮ್ ಚೌಧರಿ ಸಂಕಷ್ಟದಲ್ಲಿ ಸಿಲುಕಿರುವುದು ಕಂಡುಬಂದಿದೆ. ಆತ ನೀರಿನಲ್ಲಿ ತನ್ನ ಪ್ರಾಣ ಉಳಿಸಿಕೊಳ್ಳಲು ಹೋರಾಡಿದ್ದಾನೆ. ಆದರೆ, ಅಲ್ಲಿದ್ದ ಆತನ ಸ್ನೇಹಿತರು ಇದನ್ನು ಗಮನಿಸರಲಿಲ್ಲ. ಆತ ನೀರಿನೊಳಗೆ ಪ್ರಜ್ಞೆ ತಪ್ಪಿ ಬಿದ್ದ ನಂತರವಷ್ಟೇ ಈ ವಿಚಾರ ಬೆಳಕಿಗೆ ಬಂದಿದೆ. ನಂತರ ಆತನ ಸ್ನೇಹಿತರು ಇದನ್ನು ಗಮನಿಸಿ, ನೀರಿನಿಂದ ಹೊರ ತೆಗೆದು ವೈದ್ಯಕೀಯ ಚಿಕಿತ್ಸೆಗೆ ಕರೆದೊಯ್ದಿದ್ದಾರೆ.
ಪುರುಷೋತ್ತಮ್‌ನನ್ನು ಉಳಿಸಲು ಪ್ರಯತ್ನಿಸಿದರೂ ಆಸ್ಪತ್ರೆಗೆ ತಲುಪಿದಾಗ ಮೃತಪಟ್ಟಿದ್ದಾನೆ ಎಂದು ವೈದ್ಯರು ತಿಳಿಸಿದ್ದಾರೆ. ಅಧಿಕಾರಿಗಳು ಈ ಸಾವು ನೀರಿನಲ್ಲಿ ಮುಳುಗಿ ಸಂಭವಿಸಿದೆ ಎಂದು ದೃಢ ಪಡಿಸಿದ್ದಾರೆ. ಓಲ್ಪಾಡ್ ಪೊಲೀಸರು ಈ ಸಾವಿನ ಪ್ರಕರಣವನ್ನು ದಾಖಲಿಸಿದ್ದು, ಅಧಿಕಾರಿಗಳು ಸಿಸಿಟಿವಿ ರೆಕಾರ್ಡಿಂಗ್‌ಗಳನ್ನು ಪರಿಶೀಲನೆ ನಡೆಸಿದ್ದಾರೆ.
ಇದನ್ನೂ ಓದಿ : ನಡುರಸ್ತೆಯಲ್ಲೇ ಧಗಧಗನೆ ಹೊತ್ತಿ ಉರಿದ ಲಾರಿ!



















