ಚಿಕ್ಕಬಳ್ಳಾಪುರ : ಶಿಡ್ಲಘಟ್ಟದ ವರದನಾಯಕನಹಳ್ಳಿಯಲ್ಲಿ ವೀರಸೊಣ್ಣಮ್ಮ, ಪಟಾಲಮ್ಮ ದೇವಿಯರ ಅದ್ದೂರಿ ರಥೋತ್ಸವವನ್ನು ಮಹಿಳೆಯರೇ ನೆರವೇರಿಸುವ ಅಪರೂಪದ ಕ್ಷಣಕ್ಕೆ ಈ ಗ್ರಾಮ ಸಾಕ್ಷಿಯಾಗಿದೆ.
ಹೆಣ್ಣು ದೇವತೆಗಳ ಸನ್ನಿಧಿಯಲ್ಲಿ ಇದೊಂದು ಅದ್ಭುತ ಸಂಪ್ರದಾಯವಾಗಿದ್ದು, ಈ ರಥೋತ್ಸವದಲ್ಲಿ ಸುತ್ತಮುತ್ತಲಿನ ಸಾವಿರಾರು ಭಕ್ತರು ಪಾಲ್ಗೊಂಡಿದ್ದರು. ಹರ್ಷೋದ್ಗಾರಗಳ ನಡುವೆ ಸಾಗಿದ ದೇವಿಯರ ಮೆರವಣಿಗೆಯಲ್ಲಿ ಭಕ್ತರು ಹೂವು, ಬಾಳೆಹಣ್ಣು ಹಾಗೂ ಹರಕೆಗಳನ್ನು ಅರ್ಪಿಸಿ ದೇವಿಯರ ಕೃಪೆಗೆ ಪಾತ್ರರಾದರು.
ಮಹಿಳೆಯರೇ ರಥ ಎಳೆಯುವ ಈ ವಿಶೇಷ ಜಾತ್ರೆಗೆ ಜಿಲ್ಲೆಯಾದ್ಯಂತ ಭಾರಿ ಮೆಚ್ಚುಗೆ ವ್ಯಕ್ತವಾಗಿದ್ದು, ಇಷ್ಟಾರ್ಥಗಳ ಹರಕೆ ತೀರಿಸಲು ಭಕ್ತರು ಮುಗಿಬಿದ್ದಿದ್ದರು. ಮಹಿಳೆರಿಗೆ ರಥ ಎಳೆಯುವಾಗ ಪುರುಷರು ಸಹ ಸಾಥ್ ನೀಡಿದ್ದಾರೆ.
ಇದನ್ನೂ ಓದಿ : 6 ಲಕ್ಷ ಲಂಚ ಪಡೆಯುತ್ತಿದ್ದಾಗಲೇ ‘ಲೋಕಾ’ ಬಲೆಗೆ ಬಿದ್ದ ಕಮರ್ಷಿಯಲ್ ಟ್ಯಾಕ್ಸ್ ಡಿಸಿ!



















