ಬೆಂಗಳುರು : ಹಿಂದಿ ಹೇರಿಕೆ ಹಾಗೂ ದಬ್ಬಾಳಿಕೆಯಿಂದ ಕನ್ನಡ ಮಕ್ಕಳ ಭವಿಷ್ಯ ಹಾಳಾಗುತ್ತಿತ್ತು. ಕರ್ನಾಟಕ ಸರ್ಕಾರ ತೆಗೆದುಕೊಂಡ ತೀರ್ಮಾನದಿಂದ ಶಾಪ ಗ್ರಸ್ತವಾಗಿದ್ದ ಮಕ್ಕಳ ಭವಿಷ್ಯ ವಿಮೋಚನೆ ಆಗಿದೆ ಎಂದು ಕರವೇ ರಾಜ್ಯಾಧ್ಯಕ್ಷ ನಾರಾಯಣ ಗೌಡ ಹೇಳಿದ್ದಾರೆ.
ಸಚಿವ ಮಧು ಬಂಗಾರಪ್ಪ ಭೇಟಿಯಾದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ನಾರಾಯಣ ಗೌಡ ಅವರು, ಶಿಕ್ಷಣ ಸಚಿವರು ಕರ್ನಾಟಕ ಮಕ್ಕಳ ಭವಿಷ್ಯ ಗಮನದಲ್ಲಿಟ್ಟುಕೊಂಡು ಐತಿಹಾಸಿಕ ತೀರ್ಮಾನ ತೆಗೆದುಕೊಂಡಿದ್ದಾರೆ. ಮಧು ಬಂಗಾರಪ್ಪ ಅವರಿಗೆ ಕರ್ನಾಟಕ ಮಕ್ಕಳ ಪರವಾಗಿ ಅಭಿನಂದೆ ಸಲ್ಲಿಸುತ್ತೇನೆ ಎಂದಿದ್ದಾರೆ.
ಹಿಂದಿ ಭಾಷೆಯ ಹೇರಿಕೆಯಿಂದ ಪ್ರತಿ ವರ್ಷ ಲಕ್ಷಾಂತರ ಮಕ್ಕಳ ಭವಿಷ್ಯ ಹಾಳಾಗುತ್ತಿತ್ತು. ನಿನ್ನೆ ನಾನು ವಿಜಯೇಂದ್ರ ಹೇಳಿಕೆ ಗಮನಿಸಿದ್ದೇನೆ. ಹಿಂದೆ ಕಲಿಕೆ ಕೈ ಬಿಟ್ಟ ಕಾರಣಕ್ಕೆ ಮಕ್ಕಳ ಮೇಲೆ ಪರಿಣಾಮ ಬೀರಲಿದೆ ಅಂತ ಹೇಳಿದ್ದಾರೆ. ಹಿಂದಿಯಿಂದ ಮಕ್ಕಳ ಭವಿಷ್ಯ ಹಸನಾಗುವುದಿಲ್ಲ ಹಾಗೂ ಅವರ ಭವಿಷ್ಯವೂ ಉಜ್ವಲವಾಗುವುದಿಲ್ಲ, ಇದನ್ನು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅರ್ಥ ಮಾಡಿಕೊಳ್ಳಬೇಕು ಎಂದಿದ್ದಾರೆ.
ಮಹಾರಾಷ್ಟ್ರದಲ್ಲಿ ತ್ರಿಭಾಷ ಸೂತ್ರಗಳನ್ನು ಕೈ ಬಿಟ್ರಲ್ವಾ? ಅಲ್ಲಿ ಯಾವ ಸರ್ಕಾರ ಇತ್ತು? ಇದನ್ನು ಮಹಾರಾಷ್ಟ್ರದಲ್ಲಿ ಬದಲಾವಣೆ ಮಾಡಬಹುದಿತ್ತಲ್ವಾ? ಇದು ವಿಜಯೇಂದ್ರ ಅಜೆಂಡಾ ಅಲ್ಲ, ಇದು ಬಿಜೆಪಿ ಪಕ್ಷದ ಅಜೆಂಡಾ. ನೀವು ನಿಮ್ಮ ಪಕ್ಷದ ಅಜೆಂಡಾದಿಂದ ಕನ್ನಡ ಮಕ್ಕಳ ಭವಿಷ್ಯ ಹಾಳು ಮಾಡಬೇಡಿ ಎಂದು ಕಿಡಿಕಾರಿದ್ದಾರೆ.
ಇದನ್ನೂ ಓದಿ : ಏಪ್ರಿಲ್ ತಿಂಗಳಲ್ಲಿ ಬ್ಯಾಂಕ್‌ಗಳಿಗೆ ಎಷ್ಟು ದಿನ ರಜೆ? ಈ ಪಟ್ಟಿ ನೋಡಿ ಬ್ಯಾಂಕ್‌ಗಳಿಗೆ ತೆರಳಿ!



















