ಉಡುಪಿ : ಗ್ರಾಹಕರ ಸೋಗಿನಲ್ಲಿ ಬಂದ ಇಬ್ಬರು ಖದೀಮರು ಹೋಟೆಲ್ ಮಾಲೀಕನ ಮೊಬೈಲ್ ಎಗರಿಸಿರುವ ಘಟನೆ ಉಡುಪಿಯ ಕೊಡಂಕೂರು ಮಹಾಲಕ್ಷ್ಮೀ ಹೋಟೆಲ್‌ನಲ್ಲಿ ನಡೆದಿದೆ.
ಗ್ರಾಹಕರ ಸೋಗಿನಲ್ಲಿ ಬಂದಿದ್ದಇಬ್ವರು ಕಳ್ಳರು ಬಿಲ್ ಕೊಡುವ ಸಂದರ್ಭದಲ್ಲಿ ಮಾಲೀಕನ ಗಮನ ಬೇರೆಡೆಗೆ ಸೆಳೆದು ಕ್ಯಾಶ್ ಟೇಬಲ್ ಮೇಲಿದ್ದ ಮೊಬೈಲ್ ಕದ್ದು ಪರಾರಿಯಾಗಿದ್ದಾರೆ.
ಮೊಬೈಲ್ ಕಾಣದಿದ್ದಾಗ ಗಾಬರಿಗೊಂಡ ಮಾಲೀಕ ಹೋಟೆಲ್‌ನ ಸಿಸಿಟಿವಿಯನ್ನು ಪರಿಶೀಲನೆ ಮಾಡಿದ್ದಾರೆ. ಆಗ ಖದೀಮರ ಕೈಚಳಕ ಬೆಳಕಿಗೆ ಬಂದಿದೆ.
ಇದನ್ನೂ ಓದಿ : ಮಹಾನಗರ ಪಾಲಿಕೆಯಲ್ಲಿ 238 ಪೌರ ಕಾರ್ಮಿಕರ ನೇಮಕಾತಿ.. ಈ ಜಿಲ್ಲೆಯವರಿಗೆ ಗುಡ್ ನ್ಯೂಸ್!



















