ಬೆಂಗಳೂರು : ರೈಲು ಪ್ರಯಾಣಿಕರಿಗೆ ಬ್ಯಾಡ್ ನ್ಯೂಸ್ ದೊರೆತಿದೆ. ರೈಲು ಹೊರಡುವ 8 ಗಂಟೆಗೂ ಮೊದಲು ಟಿಕೆಟ್ ಕ್ಯಾನ್ಸಲ್ ಮಾಡಿದರೆ ಯಾವುದೇ ಹಣ ರಿಫಂಡ್ ಆಗುವುದಿಲ್ಲ ಎಂದು ರೈಲ್ವೆ ಇಲಾಖೆಯು ಆದೇಶ ಹೊರಡಿಸಿದೆ. ಇದರೊಂದಿಗೆ ಟಿಕೆಟ್ ಕ್ಯಾನ್ಸಲ್ ಮಾಡಿದರೆ ರಿಫಂಡ್ ಮಾಡಲಾಗುವ ಮೊತ್ತದ ನಿಯಮಗಳಲ್ಲಿ ಕೆಲವು ಬದಲಾವಣೆಗಳನ್ನು ಘೋಷಿಸಿದೆ.
ಇದರಿಂದ ರೈಲು ಪ್ರಯಾಣಿಕರಿಗೆ ಹೆಚ್ಚಿನ ಹೊರೆಯಾಗಲಿದೆ. ಹೊಸ ನಿಯಮಗಳು ಏಪ್ರಿಲ್ 1ರಿಂದ ಜಾರಿಗೆ ಬರಲಿವೆ. ಹಾಗಾದರೆ, ಹೊಸ ನಿಯಮಗಳು ಏನಿವೆ? ಎಷ್ಟು ಗಂಟೆ ಮೊದಲು ಕನ್ಫರ್ಮ್ ಆಗಿರುವ ಟಿಕೆಟ್ ಕ್ಯಾನ್ಸಲ್ ಮಾಡಿದರೆ ಅನುಕೂಲ ಎಂಬುದರ ಮಾಹಿತಿ ಇಲ್ಲಿದೆ.
ಹೀಗಿರಲಿವೆ ಹೊಸ ನಿಯಮಗಳು
• 72 ಗಂಟೆಗಳಿಗಿಂತ ಮುಂಚೆ : ಕೇವಲ ವರ್ಗವಾರು ನಿಗದಿತ ರದ್ದತಿ ಶುಲ್ಕವನ್ನು ಕಡಿತಗೊಳಿಸಿ, ಉಳಿದ ಗರಿಷ್ಠ ಹಣವನ್ನು ಮರುಪಾವತಿಸಲಾಗುತ್ತದೆ.
• 72 ಗಂಟೆಗಳಿಂದ 24 ಗಂಟೆಗಳ ಒಳಗೆ : ಟಿಕೆಟ್ ಮೂಲ ದರದ 25% ರಷ್ಟು ಹಣವನ್ನು ಕಡಿತಗೊಳಿಸಲಾಗುತ್ತದೆ.
• 24 ಗಂಟೆಗಳಿಂದ 8 ಗಂಟೆಗಳ ಒಳಗೆ : ಟಿಕೆಟ್ ಮೂಲ ದರದ 50% ರಷ್ಟು ಹಣವನ್ನು ಕಡಿತಗೊಳಿಸಲಾಗುತ್ತದೆ.
• 8 ಗಂಟೆಗಳಿಗಿಂತ ಕಡಿಮೆ ಸಮಯವಿದ್ದಾಗ : ಯಾವುದೇ ಮರುಪಾವತಿ ಸಿಗುವುದಿಲ್ಲ (ಹಣ ವಾಪಸ್ ಬರುವುದಿಲ್ಲ).
ವೇಟಿಂಗ್ ಲಿಸ್ಟ್ ಮತ್ತು ಆರ್ ಎಸಿ ಟಿಕೆಟ್ ಪಡೆದವರು ರೈಲು ಹೊರಡುವ ಕನಿಷ್ಠ 30 ನಿಮಿಷಗಳ ಮೊದಲು ಆನ್ ಲೈನ್ ನಲ್ಲಿ ಟಿಕೆಟ್ ರದ್ದು ಮಾಡಿದರೆ, ಕೇವಲ 60 ರೂಪಾಯಿ ಕಡಿತಗೊಳಿಸಿ ಉಳಿದ ಹಣವನ್ನು ವಾಪಸ್ ನೀಡಲಾಗುತ್ತದೆ. ಕನ್ಫರ್ಮ್ ಆದ ತತ್ಕಾಲ್ ಟಿಕೆಟ್ ರದ್ದು ಮಾಡಿದರೆ ಯಾವುದೇ ಹಣ ಮರುಪಾವತಿಯಾಗುವುದಿಲ್ಲ. ವೇಟ್ ಲಿಸ್ಟ್ ಇರುವ ತತ್ಕಾಲ್ ಟಿಕೆಟ್ ಗೆ ಸಾಮಾನ್ಯ ವೇಟ್ ಲಿಸ್ಟ್ ನಿಯಮಗಳೇ ಅನ್ವಯವಾಗುತ್ತವೆ.
ಇದನ್ನೂ ಓದಿ : ಪೆಟ್ರೋಲ್, ಡೀಸೆಲ್ ಖಾಲಿ.. ಬೀದರ್‌ನಲ್ಲಿ 7ಕ್ಕೂ ಹೆಚ್ಚು ಬಂಕ್‌ಗಳು ಬಂದ್!


















