ಬೆಂಗಳೂರು: ಸ್ಯಾಂಡಲ್‌ವುಡ್‌ನಲ್ಲಿ ಭಾರೀ ವಿವಾದಕ್ಕಿಡಾದ “ಸರ್ಸೆ ಸೆರಗ ಸರ್ಸೆ” ಹಾಡಿನ ಬಜೆಟ್ ಕೇಳಿದರೆ ಶಾಕ್ ಆಗೋದು ಗ್ಯಾರಂಟಿ. ನಿರ್ದೇಶಕ ಜೋಗಿ ಪ್ರೇಮ್ ಈ ಹಾಡನ್ನು ಹೈ ಬಜೆಟ್‌ನಲ್ಲಿ ನಿರ್ಮಿಸಿದ್ದಾಗಿ ಮಾಹಿತಿ ಹೊರಬಂದಿದೆ.
ಸುಮಾರು 13 ಕೋಟಿ ರೂಪಾಯಿ ವೆಚ್ಚದಲ್ಲಿ ಈ ಹಾಡಿನ ಚಿತ್ರೀಕರಣ ನಡೆಸಲಾಗಿದ್ದು, ಬಾಲಿವುಡ್ ನಟಿ ನೋರಾ ಫತೇಹಿ ಅವರಿಗೆ ಬರೋಬ್ಬರಿ 3.5 ಕೋಟಿ ರೂಪಾಯಿ ಸಂಭಾವನೆ ನೀಡಿ ಸ್ಯಾಂಡಲ್‌ವುಡ್‌ಗೆ ಕರೆತರಲಾಗಿತ್ತು. ಹಾಡಿನ ಚಿತ್ರೀಕರಣಕ್ಕಾಗಿ ತಾವರೆಕೆರೆಯ ಭತ್ ಬಂಗ್ಲಾ ಪ್ರದೇಶದಲ್ಲಿ ಭವ್ಯ ಸೆಟ್ ನಿರ್ಮಿಸಲಾಗಿತ್ತು.
ಹಾಡಿನ ಶೂಟಿಂಗ್ ಸುಮಾರು ಎಂಟು ದಿನಗಳ ಕಾಲ ನಡೆದಿದ್ದು, ಪ್ರಸಿದ್ಧ ನೃತ್ಯ ನಿರ್ದೇಶಕ ರಾಜು ಸುಂದರಂ ಕೋರಿಯೋಗ್ರಫಿ ಮಾಡಿದ್ದಾರೆ. ವಿಶೇಷವೆಂದರೆ, ಪ್ರತಿದಿನವೂ ಸುಮಾರು ಎರಡು ಸಾವಿರ ಡ್ಯಾನ್ಸರ್‌ಗಳು ಈ ಹಾಡಿನಲ್ಲಿ ಭಾಗವಹಿಸಿದ್ದರೆಂದು ತಿಳಿದುಬಂದಿದೆ.
ಆದರೆ ಹಾಡಿನ ಸಾಹಿತ್ಯದ ವಿರುದ್ಧ ಉದ್ಭವಿಸಿದ ವಿವಾದದ ಹಿನ್ನೆಲೆ, ಈ ಸಾಂಗ್ ಅನ್ನು ಯೂಟ್ಯೂಬ್‌ನಿಂದ ತೆಗೆದುಹಾಕಲಾಗಿತ್ತು. ಇದೀಗ ಹೊಸ ಸಾಹಿತ್ಯದೊಂದಿಗೆ ಹಾಡನ್ನು ಮರುಬಿಡುಗಡೆ ಮಾಡುವ ಯೋಜನೆಗಳನ್ನು ಜೋಗಿ ಪ್ರೇಮ್ ಕೈಗೊಂಡಿದ್ದಾರೆ ಎನ್ನಲಾಗಿದೆ. ಈ ಹೈ ಬಜೆಟ್ ಸಾಂಗ್ ಮತ್ತೆ ಯಾವ ರೂಪದಲ್ಲಿ ತೆರೆಗೆ ಬರುತ್ತದೆ ಎಂಬುದನ್ನು ಕಾದುನೋಡಬೇಕಾಗಿದೆ.



















