ಬೆಂಗಳೂರು: ದಸರಾ ಮತ್ತು ದೀಪಾವಳಿ ಹಬ್ಬಗಳ ಶುಭ ಸಂದರ್ಭದಲ್ಲಿ ಗ್ರಾಹಕರಿಗೆ ಭರ್ಜರಿ ಕೊಡುಗೆ ನೀಡಲು ದೇಶದ ಎರಡನೇ ಅತಿದೊಡ್ಡ ಸರ್ಕಾರಿ ರಂಗದ ಬ್ಯಾಂಕ್ ಆದ ಪಂಜಾಬ್ ನ್ಯಾಷನಲ್ ಬ್ಯಾಂಕ್ (PNB) ಮಹತ್ವದ ಘೋಷಣೆ ಮಾಡಿದೆ. ಬ್ಯಾಂಕ್ ವಿಶೇಷ ‘ಉತ್ಸವ್-26’ ಹಬ್ಬದ ಆಫರ್ ಪ್ರಕಟಿಸಿದ್ದು, ಹೊಸ ಮನೆ ಮತ್ತು ವಾಹನ ಖರೀದಿಸಲು ಬಯಸುವವರಿಗೆ ಬಡ್ಡಿದರದಲ್ಲಿ ರಿಯಾಯಿತಿ ಸೇರಿ ಹಲವು ಆಕರ್ಷಕ ಆಫರ್ ಗಳನ್ನು ಘೋಷಿಸಿದೆ.
‘ಉತ್ಸವ್-26’ ಕೊಡುಗೆಯ ಪ್ರಮುಖ ಮುಖ್ಯಾಂಶಗಳು:
• ಶೇ. 100 ಪ್ರೊಸೆಸಿಂಗ್ ಫೀ ವಿನಾಯಿತಿ: ಹೊಸದಾಗಿ ಗೃಹ ಸಾಲ ಹಾಗೂ ವಾಹನ ಸಾಲ ಪಡೆಯುವ ಗ್ರಾಹಕರಿಗೆ ಪ್ರೊಸೆಸಿಂಗ್ ಶುಲ್ಕ ಮತ್ತು ಡಾಕ್ಯುಮೆಂಟೇಶನ್ ಚಾರ್ಜ್ ಗಳನ್ನು ಸಂಪೂರ್ಣವಾಗಿ ರದ್ದುಗೊಳಿಸಲಾಗಿದೆ.
• ಮುಂಗಡ ಪಾವತಿ ಶುಲ್ಕ ರದ್ದು: ಹೋಮ್ ಲೋನ್ ಮತ್ತು ಕಾರ್ ಲೋನ್ ಗಳ ಮೇಲೆ ಪ್ರಿ-ಪೇಮೆಂಟ್ ಚಾರ್ಜ್ ಗಳನ್ನು ವಜಾಗೊಳಿಸಲಾಗಿದೆ.
• ಬಡ್ಡಿದರದಲ್ಲಿ ರಿಯಾಯಿತಿ: ಗೃಹ ಸಾಲಗಳ ಮೇಲೆ ಬಡ್ಡಿದರದಲ್ಲಿ 5 ಬೇಸಿಸ್ ಪಾಯಿಂಟ್ಗಳ (0.05%) ರಿಯಾಯಿತಿ ಸಿಗಲಿದೆ. ಬ್ಯಾಂಕಿನ ಹಾಲಿ ಗೃಹ ಸಾಲ ಗ್ರಾಹಕರಿಗೆ ಮಾರ್ಟ್ ಗೇಜ್ ಮತ್ತು ಟಾಪ್-ಅಪ್ ಸಾಲಗಳ ಮೇಲೆ 10 ಬೇಸಿಸ್ ಪಾಯಿಂಟ್ಗಳ (0.10%) ಹೆಚ್ಚುವರಿ ವಿನಾಯಿತಿ ಲಭ್ಯವಿದೆ.
• ಸಿಬಿಲ್ ಸ್ಕೋರ್ ಆಧಾರಿತ ಲಾಭ: 750 ಕ್ಕಿಂತ ಹೆಚ್ಚು ಸಿಬಿಲ್ ಸ್ಕೋರ್ ಹೊಂದಿರುವ ಗ್ರಾಹಕರಿಗೆ ಅತ್ಯಂತ ಕಡಿಮೆ ಬಡ್ಡಿದರದಲ್ಲಿ ಸಾಲ ಮಂಜೂರಾಗಲಿದೆ.
ಅರ್ಜಿ ಸಲ್ಲಿಸುವುದು ಹೇಗೆ?
ಗ್ರಾಹಕರು ಪಿಎನ್ಬಿಯ ‘PNB ONE’ ಮೊಬೈಲ್ ಆ್ಯಪ್ ಅಥವಾ ಅಧಿಕೃತ ವೆಬ್ ಸೈಟ್ ಮೂಲಕ ಆನ್ ಲೈನ್ ನಲ್ಲಿ ಸುಲಭವಾಗಿ ಅರ್ಜಿ ಸಲ್ಲಿಸಬಹುದು. ಇಲ್ಲವೇ, ನೇರವಾಗಿ ಹತ್ತಿರದ ಪಂಜಾಬ್ ನ್ಯಾಷನಲ್ ಬ್ಯಾಂಕ್ ಶಾಖೆಗೆ ಭೇಟಿ ನೀಡಿ ಈ ಕೊಡುಗೆಯ ಲಾಭ ಪಡೆಯಬಹುದು.
ಇದನ್ನೂ ಓದಿ :IPL ಮತ್ತು PSL ನಡುವೆ ಮತ್ತೆ ಮುಖಾಮುಖಿ: 2027ರ ಪಾಕಿಸ್ತಾನ್ ಸೂಪರ್ ಲೀಗ್ ವೇಳಾಪಟ್ಟಿ ಪ್ರಕಟ!



















