ಬೆಂಗಳೂರು : ರಾಜ್ಯದ ವಾಹನ ಸವಾರರಿಗೆ ಮತ್ತೊಂದು ಆರ್ಥಿಕ ಹೊರೆ ಎದುರಾಗಿದ್ದು, ಏಪ್ರಿಲ್ 1ರಿಂದ ಟೋಲ್ ದರಗಳನ್ನು ಶೇ 3ರಿಂದ 5ರವರೆಗೆ ಹೆಚ್ಚಿಸಲು ತೀರ್ಮಾನಿಸಲಾಗಿದೆ.
ಬೆಂಗಳೂರು-ಮೈಸೂರು ಎಕ್ಸಪ್ರೆಸ್ ಸೇರಿದಂತೆ ಹಲವು ಪ್ರಮುಖ ಮಾರ್ಗಗಳ ಟೋಲ್ ಪ್ಲಾಜಾಗಳಲ್ಲಿ ಈ ದರ ಏರಿಕೆ ಅನ್ವಯವಾಗಲಿದೆ. ಮುಂದಿನ ವಾರದಿಂದಲೇ ಹೊಸ ದರಗಳು ಜಾರಿಗೆ ಬರಲಿದ್ದು, ಅಧಿಕೃತವಾಗಿ ಶೀಘ್ರದಲ್ಲೇ ಪ್ರಕಟವಾಗುವ ಸಾಧ್ಯತೆ ಇದೆ.
ದರ ಏರಿಕೆ ಅನ್ವಯವಾಗಲಿರುವ ಪ್ರಮುಖ ಟೋಲ್ ಪ್ಲಾಜಾಗಳು:
- ಕಣಿಮಿಣಿಕೆ ಮತ್ತು ಶೇಷಗಿರಿಹಳ್ಳಿ (ಬೆಂಗಳೂರು–ಮೈಸೂರು ಮಾರ್ಗ)
- ಬಾಗೇಪಲ್ಲಿ (ಬೆಂಗಳೂರು–ಹೈದರಾಬಾದ್ ಮಾರ್ಗ)
- ಸಾದಹಳ್ಳಿ (ವಿಮಾನ ನಿಲ್ದಾಣ ರಸ್ತೆ)
- ನಾಂಗ್ಲಿ (ಬೆಂಗಳೂರು–ತಿರುಪತಿ ಮಾರ್ಗ)
- ಹುಲಿಕುಂಟೆ ಮತ್ತು ನಲ್ಲೂರು-ದೇವನಹಳ್ಳಿ (ಸ್ಟಿಆರ್‌ಆರ್ ಮಾರ್ಗ)
ಈಗಾಗಲೇ ಬೆಂಗಳೂರುನಿಂದ ಕೇರಳಕ್ಕೆ ಪ್ರಯಾಣಿಸಲು ಸುಮಾರು 2000–3000 ರೂ.ವರೆಗೆ ವೆಚ್ಚವಾಗುತ್ತಿದೆ. ಇದೀಗ ಟೋಲ್ ದರ ಏರಿಕೆಯಿಂದ ಈ ವೆಚ್ಚ ಇನ್ನಷ್ಟು ಹೆಚ್ಚುವ ನಿರೀಕ್ಷೆಯಿದೆ.
ವಾಹನ ಸವಾರರು ಈ ದರ ಏರಿಕೆಯಿಂದ ಆರ್ಥಿಕವಾಗಿ ಒತ್ತಡಕ್ಕೆ ಒಳಗಾಗಲಿದ್ದು, ದಿನನಿತ್ಯ ಸಂಚರಿಸುವ ಪ್ರಯಾಣಿಕರಿಗೆ ಹೆಚ್ಚುವರಿ ಹೊರೆ ಆಗಲಿದೆ.
ಇದನ್ನೂ ಓದಿ : ಹೆಬ್ಬಾಳ ಕ್ಷೇತ್ರದ 2 ಇಂದಿರಾ ಕ್ಯಾಂಟೀನ್ ಸ್ಥಳಾಂತರಕ್ಕೆ ಜಿಬಿಎ ಚಿಂತನೆ



















