ಬೀದರ್ : ಶಾಸಕ ಶರಣು ಸಲಗಾರ್ ಅವರ ಮತ ಕ್ಷೇತ್ರ ಕರ್ಮಕಾಂಡ ಇದೀಗ ಬಯಲಾಗಿದೆ. ಬೀದರ್ ಜಿಲ್ಲೆಯ ಬಸವಕಲ್ಯಾಣ ನಗರದ ವಾರ್ಡ್ ನಂ. 11 ಮತ್ತು 13ರ ಓಣಿಯನ್ನು ಸುಂದರ ನಗರವನ್ನಾಗಿ ಮಾಡಲಾಗುವುದು ಎಂದು ಉಪಚುನಾವಣೆಯಲ್ಲಿ ಘೋಷಣೆ ಮಾಡಿದ್ದರು.
ಅದಾದನಂತರ ನಡೆದ ಚುನಾವಣೆಯಲ್ಲಿಯೂ ಕೂಡ ಮನೆ ಮನೆಗೆ ಶೌಚಾಲಯ, ಸಿ ಸಿ ರಸ್ತೆ, ಬೋರ್ವೆಲ್‌ಗಳು ಕೂಡ ರಿಪೇರಿ ಮಾಡಿಸಿಕೊಡುತ್ತೇನೆ ಎಂದು ಆಶ್ವಾಸನೆ ನೀಡಿದ್ದರು. ಆದರೆ ಶಾಸಕ ಶರಣು ಸಲಗಾರ್ ಯಾವುದೇ ರೀತಿಯಲ್ಲಿ ಅಭಿವೃದ್ಧಿ ಮಾಡಿಲ್ಲಾ ಎಂದು ಅಲ್ಲಿಯ ಜನರು ಆರೋಪಿಸಿದ್ದಾರೆ..
ಈ ಪ್ರದೇಶದಲ್ಲಿ ಹೆಣ್ಣುಮಕ್ಕಳಿಗೆ ಸರಿಯಾಗಿ ಶೌಚಾಲಯ ಕೂಡ ಇಲ್ಲಾ, ಓಣಿಯಲ್ಲಿ ಇರೋದೇ ಒಂದೇ ಒಂದು ಶೌಚಾಲಯ ಅದು ಕೂಡ ಫುಲ್ ಗಲೀಜು ತುಂಬಿಕೊಂಡಿದೆ. ನಾಲೇಗಳಲ್ಲಿ ಎಲ್ಲೆಂದರಲ್ಲಿ ಹಾಗೆ ತಾಜ್ಯಗಳು ತುಂಬಿ ತುಳಿಕ್ತಿವೆ ಹಾಗೂ ಎಲ್ಲೆಂದರಲ್ಲಿ ಹಾಗೆ ಕಸ ಬಿದ್ದಿದೆ ಎಂದು ಗ್ರಾಮಸ್ಥರು ತಮ್ಮ ಅಳಲು ತೋಡಿಕೊಂಡಿದ್ದಾರೆ.
7 ವರ್ಷದಿಂದ ಇದೇ ರೀತಿ ಇದ್ದು, ಜಿಲ್ಲಾಧಿಕಾರಿಗಳು ಬಂದು ಹೇಳಿದ್ರು ಸಹ ಕೆಲಸ ಮಾಡ್ತಿಲ್ಲ, ಸಿಎಂಸಿ ಅಧಿಕಾರಿಗೆ ಹೇಳಿದ್ದರು ಸಹ ಕೆಲಸ ಮಾಡ್ತಿಲ್ಲ.
ಹೀಗಾದ್ರೆ ನಾವು ಬದುಕೋದು ಹೇಗೆ ಓಡಾಡೋಕ್ಕೆ, ಬದುಕೋದಕ್ಕೆ ತುಂಬಾ ಕಷ್ಟ ವಾಗ್ತಿದೆ. ಹಾವು, ಚೇಳು, ಹಂದಿಗಳು ಎಲ್ಲೆಂದರಲ್ಲಿ ಓಡಾಡ್ತೀವೆ ಭಯದಿಂದ ಬದುಕ್ತಿದ್ದೇವೆ ಎಂದು ಗ್ರಾಮದ ಜನರು ತಮ್ಮ ನೋವನ್ನು ನಮ್ಮ ಕರ್ನಾಟಕ ನ್ಯೂಸ್ ಬೀಟ್ ಬಳಿ ಹೇಳಿಕೊಂಡಿದ್ದಾರೆ.
ಇದನ್ನೂ ಓದಿ : ಕಲಬುರಗಿಯಲ್ಲಿ ನೀರಿಗಾಗಿ ಹಾಹಾಕಾರ.. ಬೇಸಿಗೆಗೂ ಮುನ್ನವೇ ಬತ್ತಿದ ಜಲಮೂಲ



















