ಬೆಂಗಳೂರು: ಬೆಂಗಳೂರು ನೀರು ಸರಬರಾಜು ಒಳಚರಂಡಿ ಮಂಡಳಿ (BWSSB) ಈಗ ನೀರು ಪೋಲು ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಂಡಿದೆ. ಬೆಂಗಳೂರು ನಗರದಲ್ಲಿ ಕುಡಿಯುವ ನೀರಿನ ದುರುಪಯೋಗ ತಡೆಗಟ್ಟಲು ಜಲಮಂಡಳಿ ಹದ್ದಿನ ಕಣ್ಣಿಟ್ಟಿದೆ.
ಕುಡಿಯುವ ನೀರನ್ನು ಕುಡಿಯಲು ಮಾತ್ರ ಬಳಸಬೇಕು. ಕಾರು/ಬೈಕ್ ತೊಳೆಯಲು ಬಳಸಬಾರದು. ಗಿಡಗಳಿಗೆ ನೀರು ಹಾಕಲು,ಮನೆ ಮುಂದೆ ಸ್ವಚ್ಛತೆಗೆ,
ಕಟ್ಟಡ ನಿರ್ಮಾಣಕ್ಕೂ ಕುಡಿಯುವ ನೀರಿನ ಬಳಕೆ ನಿಷೇಧಿಸಲಾಗಿದೆ. ಒಂದು ವೇಳೆ ಕಾವೇರಿ ನೀರನ್ನು ಬೇರೆ ಉದ್ದೇಶಕ್ಕೆ ಬಳಸಿದರೆ ದಂಡ ವಿಧಿಸಲು ಜನಮಂಡಳಿ ಮುಂದಾಗಿದೆ.
ಎಷ್ಟು ದಂಡ..?
ಮೊದಲ ಬಾರಿ ತಪ್ಪು ಮಾಡಿದರೆ 5000 ದಂಡ. ಮರುಕಳಿಸಿದರೆ 5000 + ಹೆಚ್ಚುವರಿ 500 ರೂ. ದಂಡ ಕಟ್ಟದಿದ್ದರೆ ನೀರಿನ ಬಿಲ್ಲಿನಲ್ಲೇ ಸೇರಿಸಲಾಗುತ್ತದೆ ಎಂದು ಜಲಮಂಡಳಿ ಅಧ್ಯಕ್ಷ ರಾಮ್ ಪ್ರಸಾತ್ ಮನೋಹರ್ ಮಾಹಿತಿ ನೀಡಿದ್ದಾರೆ. ಇನ್ನೂ ಸರ್‌ಪ್ರೈಸ್ ವಿಸಿಟ್ ಮೂಲಕ ಅಧಿಕಾರಿಗಳು ತಪಾಸಣೆ ಮಾಡಿ, ಸ್ಥಳದಲ್ಲೇ ದಂಡದ ನೋಟಿಸ್ ನೀಡಿಲಾಗುತ್ತದೆ. ನಿಯಮ ಉಲ್ಲಂಘನೆ ಮಾಡಿದರೆ ನೀರಿನ ಸಂಪರ್ಕ ಕಟ್ ಮಾಡುವ ಎಚ್ಚರಿಕೆ ನೀಡಿದ್ದಾರೆ.
ಕಾವೇರಿ ನೀರನ್ನು ಅನಗತ್ಯವಾಗಿ ಬಳಸಿದ್ರೆ ಕಠಿಣ ಕ್ರಮಕ್ಕೆ ಮಂದಾಗಿದ್ದು, ವಾಹನ ತೊಳೆಯುವಂತಹ ಬಳಕೆಗಳಿಗೆ ಸಂಪೂರ್ಣ ನಿಷೇಧಿಸಲಾಗಿದ್ದು. ಕಾನೂನು ಆಧಾರ 1964ರ ಕಾಯ್ದೆಯ ಕಲಂ 109 ಪ್ರಕಾರ ನೀರು ಪೋಲು ಮಾಡಿದವರಿಗೆ ದಂಡ ವಿಧಿಸಲಾಗುತ್ತದೆ ಎಂದು ತಿಳಿಸಿದರು. ಕಾವೇರಿ ನೀರಿನ ಕೊರತೆಯ ಹಿನ್ನೆಲೆಯಲ್ಲಿ BWSSB ಈ ಕ್ರಮ ಕೈಗೊಂಡಿದ್ದು, ನಾಗರಿಕರು ಜಾಗರೂಕರಾಗಿರಬೇಕು ಎಂದು ಎಚ್ಚರಿಸಿದ್ದಾರೆ.
ಇದನ್ನೂ ಓದಿ : ಏಪ್ರಿಲ್‌ನಿಂದ ವಾಹನ ದರ ಏರಿಕೆ : ಮಧ್ಯಮ ವರ್ಗಕ್ಕೆ ಮತ್ತೊಂದು ಹೊಡೆತ..!



















