ಬೆಂಗಳೂರು : ವ್ಯಕ್ತಿಗಿಂತ ಪಕ್ಷ ಮುಖ್ಯ. ಪಕ್ಷ ಒಂದು ಸಲ ಘೋಷಣೆ ಮಾಡಿದ ಮೇಲೆ ಆ ತೀರ್ಮಾನ ನಾವು ಒಪ್ಪಿಕೊಳ್ಳಬೇಕು ಎಂದು ಮಾಜಿ ಸಚಿವ ಎಂ ಪಿ ರೇಣುಕಾಚಾರ್ಯ ಹೇಳಿದ್ದಾರೆ.
ದಾವಣಗೆರೆ ದಕ್ಷಿಣ ಕೇತ್ರಕ್ಕೆ ಬಿಜೆಪಿ ಅಭ್ಯರ್ಥಿ ಘೋಷಣೆ ವಿಚಾರವಾಗಿ ಇಂದು ಬೆಂಗಳೂರಿನಲ್ಲಿ ಮಾಧ್ಯಮ ವರದಿಗಾರರೊಂದಿಗೆ ಮಾತನಾಡಿದ ರೇಣುಕಾಚಾರ್ಯ, ಅಭ್ಯರ್ಥಿ ಘೋಷಣೆಗೂ ಮೊದಲೇ ನಾವು ಬಿ.ಜೆ.ಅಜಯ್ ಕುಮಾರ್ ಗೆ ಟಿಕೆಟ್ ಕೊಡಿ ಅಂದಿದ್ವಿ. ಅವರು ಮಾಜಿ ಮೇಯರ್ , ಯುವಕ, ಹಾಗೂ 2023 ರಲ್ಲಿ ಟಿಕೆಟ್ ಕೊಟ್ಟಿದ್ರು, ಸೋಲಾಯ್ತು. ಅಜಯ್ ಕುಮಾರ್ ನಮ್ಮವರು, ಲಿಂಗಾಯತರು ಅಂತ ನಾವು ಟಿಕೆಟ್ ಕೇಳಿರಲಿಲ್ಲ. ಸೋತಿರುವ ಅಭ್ಯರ್ಥಿಗೆ ಟಿಕೆಟ್ ಕೊಡಿ ಅಂತ ಕೋರ್ ಕಮಿಟಿಯಲ್ಲೂ ಬೇಡಿಕೆ ಇಟ್ಟಿದ್ವಿ ಎಂದಿದ್ದಾರೆ.
ದೆಹಲಿಗೆ ಹೋಗಿ ರಾಧಾಮೋಹನ ದಾಸ್ ಅಗರವಾಲ್, ಜೋಷಿ, ಬೊಮ್ಮಾಯಿ, ಶೆಟ್ಟರ್ ಗೆ ಮನವಿ ಸಲ್ಲಿಸಿದ್ವಿ ಬಿ ಜೆ ಅಜಯ್ ಕುಮಾರ್ ಗೆ ಟಿಕೆಟ್ ಕೊಡಿ ಅಂತ ನಾವು ಕೇಳಿದ್ದು ಸತ್ಯ. ಮಾನವೀಯತೆ ಆಧಾರದಲ್ಲಿ ಅಜಯ್ ಕುಮಾರ್ ಗೆ ಟಿಕೆಟ್ ಕೊಡಿ ಅಂದಿದ್ವಿ ಆದರೆ ಹೈಕಮಾಂಡ್ ಈಗ ಶ್ರೀನಿವಾಸ್ ದಾಸ್ ಕರಿಯಪ್ಪಗೆ ಟಿಕೆಟ್ ಕೊಟ್ಟಿದೆ. ಹೈಕಮಾಂಡ್ ತೀರ್ಮಾನಕ್ಕೆ ನಾವು ಬದ್ಧವಾಗಿರ್ತೀವಿ. ಎಲ್ಲರೂ ಒಗ್ಗಟ್ಟಾಗಿ ನಾವು ಪಕ್ಷದ ಅಭ್ಯರ್ಥಿ ಗೆಲ್ಲಿಸಲು ಶ್ರಮಿಸ್ತೇವೆ ಎಂದು ತಿಳಿಸಿದ್ದಾರೆ.
ಅಜಯ್ ಕುಮಾರ್ ನಮ್ ಹುಡ್ಗ,ಅಜಯ್ ಕುಮಾರ್ ಇದರಿಂದ ಬೇಸರವಾಗಿಲ್ಲ.ಟಿಕೆಟ್ ಘೋಷಣೆ ಬಳಿಕ ನಮಗೇ ಅಜಯ್ ಕುಮಾರ್ ಅವರೇ ಧೈರ್ಯ ಹೇಳಿದ್ರು.ಶ್ರೀನಿವಾಸ ದಾಸ ಕರಿಯಪ್ಪ ಕೂಡಾ ನಮ್ ಹುಡ್ಗ. ಎಲ್ರೂ ಶ್ರಮಿಸಿ ಗೆಲ್ಲಿಸ್ತೇವೆ, ಎರಡೂ ಕಡೆಯೂ ಬಿಜೆಪಿ ಅಭ್ಯರ್ಥಿ ಗೆಲ್ತಾರೆ ಎಂದು ಹೇಳಿದ್ದಾರೆ.
ಇದನ್ನೂ ಓದಿ : ಕರ್ನಾಟಕ ಹೈಕೋರ್ಟ್‌ನಲ್ಲಿ 70 ಹುದ್ದೆಗಳ ನೇಮಕಾತಿ.. 1.42 ಲಕ್ಷ ರೂ. ಭರ್ಜರಿ ಸಂಬಳ!



















