ಕೊಪ್ಪಳ : ಜಿಲ್ಲೆಯ ಕಾರಟಗಿ ತಾಲೂಕಿನ ಕೃಷ್ಣಾಪುರ ಗ್ರಾಮದಲ್ಲಿ ಪಾಳು ಮನೆಯಲ್ಲಿ ನಿಧಿ ಶೋಧ ನಡೆಸಿರುವ ಶಂಕೆ ವ್ಯಕ್ತವಾಗಿದೆ. ಗ್ರಾಮ ಸಮೀಪದಲ್ಲಿರುವ ರಾಮಲಿಂಗೇಶ್ವರ ಮಂದಿರದ ಪಕ್ಕದ ಗುಡಿಸಲು ಮನೆಯಲ್ಲಿ ದುಷ್ಕರ್ಮಿಗಳು ಗುಂಡಿ ಅಗೆದಿರುವುದು ಬೆಳಕಿಗೆ ಬಂದಿದೆ.
ಶ್ರೀ ರಾಮಚಂದ್ರನಿಂದ ಮಂದಿರ ಸ್ಥಾಪನೆ ಎಂಬ ಐತಿಹ್ಯವಿರುವ ಈ ಪ್ರದೇಶದಲ್ಲಿ, ಆಂಜನೇಯ ಹಾಗೂ ರಾಮಲಿಂಗೇಶ್ವರ ಮಂದಿರಗಳ ಸಮೀಪದಲ್ಲೇ ಈ ಅಗೆತ ನಡೆದಿರುವುದು ಅನುಮಾನಗಳಿಗೆ ಕಾರಣವಾಗಿದೆ. ಪೂಜೆ ಸಲ್ಲಿಸಿ ನಂತರ ನಿಧಿ ಹುಡುಕುವ ಉದ್ದೇಶದಿಂದ ಗುಂಡಿ ಅಗೆದಿರಬಹುದೆಂದು ಶಂಕಿಸಲಾಗಿದೆ.
ಹಳೆಯ ಗುಡಿ ಪ್ರದೇಶವಾಗಿರುವುದರಿಂದ ಯಾರೂ ಇಲ್ಲದಿರುವುದನ್ನು ಸದುಪಯೋಗಪಡಿಸಿಕೊಂಡು ದುಷ್ಕರ್ಮಿಗಳು ಈ ಕೃತ್ಯ ಎಸಗಿರುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಜಾಗದ ಮಾಲೀಕ ಕಾರಟಗಿ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಘಟನೆಗೆ ಸಂಬಂಧಿಸಿದ ನಿಖರ ಮಾಹಿತಿ ತನಿಖೆಯ ನಂತರ ಹೊರಬೀಳಲಿದೆ.
ಇದನ್ನೂ ಓದಿ : ಮಧ್ಯಪ್ರಾಚ್ಯ ವಾರ್ ಎಫೆಕ್ಟ್.. ಹಾಸನದಲ್ಲಿ ಗ್ಯಾಸ್‌ಗಾಗಿ ಪರದಾಟ!



















