ಬೆಂಗಳೂರು : ನಗರದಲ್ಲಿ ಕಮರ್ಷಿಯಲ್ ಗ್ಯಾಸ್ ಕೊರತೆ ಮುಂದುವರಿದಿರುವ ಹಿನ್ನೆಲೆಯಲ್ಲಿ ಪಿಜಿ (ಪೇಯಿಂಗ್ ಗೇಸ್ಟ್) ವಸತಿ ಕೇಂದ್ರಗಳು ಸಂಕಷ್ಟಕ್ಕೆ ಸಿಲುಕಿವೆ. ಗ್ಯಾಸ್ ಸಿಲಿಂಡರ್ ಲಭ್ಯವಾಗದ ಕಾರಣ ಕೆಲ ಪಿಜಿಗಳಲ್ಲಿ ಸೌದೆ ಒಲೆಗಳನ್ನು ಬಳಸಿಕೊಂಡು ಅಡುಗೆ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ವೈಟ್‌ಫೀಲ್ಡ್ ಭಾಗದ ಹಲವು ಪಿಜಿಗಳಲ್ಲಿ ರಸ್ತೆ ಬದಿಯಲ್ಲೇ ಒಲೆ ಹಚ್ಚಿ ಆಹಾರ ತಯಾರಿಸಲಾಗುತ್ತಿದೆ. ಪಿಜಿ ನಿವಾಸಿಗಳಿಗೆ ಊಟ ನೀಡಲು ಸಿಬ್ಬಂದಿಗಳು ಪಿಜಿಗಳ ಮುಂದೆ ಮತ್ತು ರಸ್ತೆ ಬದಿಯಲ್ಲಿ ಸೌದೆ ಒಲೆ ಹಚ್ಚಿ ಅಡುಗೆ ಮಾಡುತ್ತಿರುವ ದೃಶ್ಯಗಳು ಕಂಡುಬರುತ್ತಿವೆ.
ವೈಟ್‌ಫೀಲ್ಡ್‌ನ ASR ಲೇಡೀಸ್ ಪಿಜಿಯಲ್ಲಿ ಗ್ಯಾಸ್ ಕೊರತೆಯಿಂದ ಸೌದೆ ಒಲೆಯಲ್ಲಿ ಅಡುಗೆ ಮಾಡಲಾಗುತ್ತಿದೆ. ಇದೇ ರೀತಿ ಅಕ್ಕಪಕ್ಕದಲ್ಲಿರುವ ಇನ್ನೂ ಹಲವು ಪಿಜಿಗಳಲ್ಲೂ ರಸ್ತೆ ಬದಿಯಲ್ಲೇ ಒಲೆ ಹಚ್ಚಿ ಆಹಾರ ತಯಾರಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಗ್ಯಾಸ್ ಸಿಲಿಂಡರ್ ಕೊರತೆಯಿಂದ ನಗರದಲ್ಲಿ ಹೋಟೆಲ್‌ಗಳು ಮಾತ್ರವಲ್ಲದೆ ಪಿಜಿ ವಸತಿ ಕೇಂದ್ರಗಳೂ ಸಂಕಷ್ಟಕ್ಕೆ ಸಿಲುಕಿರುವುದು ಸ್ಪಷ್ಟವಾಗಿದೆ.
ಇದನ್ನೂ ಓದಿ : ಹಾವೇರಿ | ಅಕ್ರಮ ಗಾಂಜಾ ಮಾರಾಟ : ಇಬ್ಬರು ಅರೆಸ್ಟ್!



















