ಬೆಂಗಳೂರು | ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿ, ಸ್ಟೋರಿ ಬ್ರೂಕ್ ಮಾಲೀಕನೂ ಆಗಿರುವ ವಿನಯ್‌ಗೆ ಕಪಾಳ ಮೋಕ್ಷ ಮಾಡಲಾಗಿದೆ. ತನ್ನ ಪರ ವಕೀಲ ನಟರಾಜ್ ಅವರನ್ನು ಬದಲಾಯಿಸಿ, ಬೇರೊಬ್ಬ ವಕೀಲರನ್ನು ನೇಮಿಸಿಕೊಳ್ಳಲು ವಿನಯ್ ಮುಂದಾಗಿದ್ದರು. ಈ ವಿಷಯವಾಗಿ ಆರೋಪಿ ವಿನಯ್ ಹಾಗೂ ವಕೀಲ ನಟರಾಜ್ ಮಧ್ಯೆ ಕೋರ್ಟ್ ಕಾರಿಡಾರ್‌ನಲ್ಲಿ ಇಂದು ಮಾತಿನ ಚಕಮಕಿ ನಡೆದಿದೆ ಎಂದು ತಿಳಿದುಬಂದಿದೆ.
ಈ ವೇಳೆ ವಕೀಲ ನಟರಾಜ್ ಮೇಲೆ ವಿನಯ್ ಕಿರುಚಾಡಿದ್ದಾನೆ. ಇದರಿಂದ ಕೋಪಗೊಂಡ ವಕೀಲ ನಟರಾಜ್, ಕೋರ್ಟ್ ಕಾರಿಡಾರ್‌ನಲ್ಲೇ ಆರೋಪಿ ವಿನಯ್ ಕೆನ್ನೆಗೆ ಬಾರಿಸಿದ್ದಾನೆ ಎಂದು ವರದಿಯಾಗಿದೆ.
ಇಂದು ವಿನಯ್ ಪರ ವಕಾಲತ್ತು ವಹಿಸಲು ಹೊಸ ವಕೀಲರೊಬ್ಬರು ಕೋರ್ಟ್‌ಗೆ ಬಂದಿದ್ದರು. ಇದು ವಕೀಲ ನಟರಾಜ್ ಅವರ ಕೋಪಕ್ಕೆ ಕಾರಣವಾಗಿತ್ತು. ವಕೀಲ ನಟರಾಜ್ ಅವರು ಎ 10 ಆರೋಪಿ ವಿನಯ್‌ಗೆ ಐದಾರು ಭಾರಿ ಕಪಾಳಕ್ಕೆ ಬಾರಿಸಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ : ಸರ್ಕಾರದ ರೈತ ವಿರೋಧಿ ನೀತಿ ಖಂಡಿಸಿ ತುಮಕೂರಲ್ಲಿ ಧರಣಿ ಸತ್ಯಾಗ್ರಹ


















