ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ಯೂಟ್ಯೂಬ್‌ನಲ್ಲಿ ವಿಶ್ವದಾಖಲೆ ಬರೆದಿದ್ದಾರೆ. ಹೌದು.. ಯೂಟ್ಯೂಬ್‌ನಲ್ಲಿ 3 ಕೋಟಿ ಚಂದದಾರರನ್ನು (ಸಬ್ಸ್ಕ್ರೈಬರ್) ಹೊಂದಿದ ವಿಶ್ವದ ಏಕೈಕ ನಾಯಕ ಎಂಬ ಕೀರ್ತಿಗೆ ಪಾತ್ರವಾಗಿದ್ದಾರೆ.
ಪ್ರಧಾನಿ ಮೋದಿ ಅವರ ಅಧಿಕೃತ ಯೂಟ್ಯೂಬ್ ಚಾನಲ್ 30 ಮಿಲಿಯನ್ (3 ಕೋಟಿ) ಸಬ್ಸ್ಕ್ರೈಬರ್ ಗಡಿಯನ್ನು ದಾಟಿದ್ದು, ಇತರ ಜಾಗತಿಕ ನಾಯಕರಿಗಿಂತ ಗಮನಾರ್ಹ ಮುನ್ನಡೆಯನ್ನು ತೋರಿಸಿದೆ. ಬ್ರೆಜಿಲ್‌ನ ಮಾಜಿ ಅಧ್ಯಕ್ಷ ಜೈರ್ ಬೋಲ್ಸನಾರೊ ಎರಡನೇ ಸ್ಥಾನದಲ್ಲಿದ್ದರೂ, ಅವರ ಚಂದಾದಾರರ ಸಂಖ್ಯೆ ಮೋದಿ ಅವರಿಗಿಂತ ಬಹಳ ಕಡಿಮೆಯಾಗಿದೆ.
ಪ್ರಧಾನಿ ಮೋದಿ ಯೂಟ್ಯೂಬ್‌ನಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ಗೆ ಹೋಲಿಸಿದರೆ ಏಳು ಪಟ್ಟು ಹೆಚ್ಚು ಚಂದಾದಾರರನ್ನು ಹೊಂದಿದ್ದಾರೆ. ಇದು ಮೋದಿ ಅವರ ಡಿಜಿಟಲ್ ಪ್ರಭಾವ ಮತ್ತು ಜಾಗತಿಕ ತೊಡಗಿಸುವಿಕೆ ಹೇಗಿದೆ ಎಂಬುದಕ್ಕೆ ನಿರ್ದಶನ ಎನ್ನುತ್ತಾರೆ ತಜ್ಞರು.
ಭಾರತೀಯ ರಾಜಕೀಯ ನಾಯಕರ ಪೈಕಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ಅವರಿಗಿಂತ ಮೂರು ಪಟ್ಟು ಹೆಚ್ಚು ಯೂಟ್ಯೂಬ್ ಚಂದಾದಾರರನ್ನು ಮೋದಿ ಹೊಂದಿದ್ದಾರೆ. ಇದೇ ವೇಳೆ ಆಮ್ ಆದ್ಮಿ ಪಕ್ಷ (AAP) ಹಾಗೂ ಕಾಂಗ್ರೆಸ್‌ನ ಅಧಿಕೃತ ಚಾನೆಲ್‌ಗಳಿಗಿಂತಲೂ ಮೋದಿ ಅವರ ಚಾನೆಲ್ ಹೆಚ್ಚು ಜನಪ್ರಿಯವಾಗಿದೆ. ಇನ್ನು ಕೆಲ ದಿನಗಳ ಹಿಂದೆಯಷ್ಟಯೇ ಇನ್‌ಸ್ಟಾಗ್ರಾಮ್‌ನಲ್ಲಿಯೂ 100 ಮಿಲಿಯನ್ ಫಾಲೋವರ್ಸ್ ಹೊಂದುವ ಮೂಲಕ ಪ್ರಧಾನಿ ಮೋದಿ ದಾಖಲೆ ನಿರ್ಮಿಸಿದ್ದರು.
ಇದನ್ನೂ ಓದಿ : ಅಸಭ್ಯ ವಿಡಿಯೋಗಳ ವಿರುದ್ಧ ಸಿಡಿದೆದ್ದ ನಟಿ ಸಪ್ತಮಿ ಗೌಡ!



















