ರಾಯಚೂರು : ಜಿಲ್ಲೆಯ ಸಿಂಧನೂರು ನಗರದ ಹೋಲಿಫ್ಯಾಮಿಲಿ ಶಾಲೆಯಲ್ಲಿ ಕ್ಷುಲ್ಲಕ ಕಾರಣಕ್ಕೆ ವಿದ್ಯಾರ್ಥಿಯೊಬ್ಬನ ತಲೆ ಕೂದಲನ್ನು ಕೆಟ್ಟದಾಗಿ ಕತ್ತರಿಸಿ ಅವಮಾನವೀಯವಾಗಿ ನಡೆದುಕೊಂಡ ಆರೋಪ ಸಂಬಂಧ ಶಾಲೆಯ ಮೂವರು ಶಿಕ್ಷಕರ ವಿರುದ್ಧ ಸಿಂಧನೂರು ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಹೋಲಿಫ್ಯಾಮಿಲಿ ಶಾಲೆಯ ಫಾದರ್ ಗ್ಯಾನ್ ಪ್ರಕಾಶ್ ಹಾಗೂ ಅದೇ ಶಾಲೆಯ ಸಹ ಶಿಕ್ಷಕಿಯರಾದ ವಿಶಾಲಾಕ್ಷಿ ಮತ್ತು ಸ್ವಾತಿ ಎನ್ನುವರು ತನ್ನ ಮಗನ ತಲೆ ಕೂದಲನ್ನು ಕೆಟ್ಟದಾಗಿ ಕತ್ತರಿಸಿ ಅವಮಾನವೀಯವಾಗಿ ನಡೆದುಕೊಂಡಿದ್ದು, ಶಾಲೆಯ ಶಿಕ್ಷಕರು ಹಾಗೂ ಫಾದರ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ವಿದ್ಯಾರ್ಥಿಯ ತಂದೆ ದೂರು ನೀಡಿದ್ದಾರೆ.
ತಮ್ಮ ಪುತ್ರನ ತಲೆ ಕೂದಲು ಕತ್ತರಿಸಿದ್ದಾರೆ ಎಂಬ ವಿಚಾರ ತಿಳಿದು ಈ ಕುರಿತು ಮಾಹಿತಿ ಪಡೆಯಲು ಹೋಲಿ ಫ್ಯಾಮಿಲಿ ಶಾಲೆಯ ಫಾದರ್ ಗ್ಯಾನ್ ಪ್ರಕಾಶ್ ಅವರ ಮೊಬೈಲ್ಗೆ ಕರೆ ಮಾಡಿದ್ದರೂ, ಕರೆಗೆ ಸ್ಪಂದಿಸಿಲ್ಲ. ವಿಚಾರಿಸಲೆಂದು ಶಾಲೆಗೆ ಹೋದಾಗ ಫಾದರ್ ಗ್ಯಾನ್ ಪ್ರಕಾಶ್ ಅವರು ತಮ್ಮೊಂದಿಗೆ ಸರಿಯಾಗಿ ವರ್ತಿಸಿಲ್ಲ ಎಂದು ವಿದ್ಯಾರ್ಥಿಯ ಪೋಷಕರು ದೂರಿನಲ್ಲಿ ಬೇಸರ ಹೊರಹಾಕಿದ್ದಾರೆ.
ಇದನ್ನೂ ಓದಿ : ಅಳಿಯ ಶಾಹೀನ್ ಅಫ್ರಿದಿಯನ್ನು ತಂಡದಿಂದ ಹೊರಗಿಟ್ಟ ಮಾವ ಶಾಹಿದ್ ಅಫ್ರಿದಿ



















