ಬೆಂಗಳೂರು : ಶೀತದ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಿಸಲಾಗಿದ್ದ 6 ತಿಂಗಳ ಮಗುವಿನ ಕಿರುಬೆರಳನ್ನೇ ವೈದ್ಯರು ಕಟ್ ಮಾಡಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಈ ಸಂಬಂಧ ಚಿನ್ಮಯಿ ಮಿಷನ್ ಆಸ್ಪತ್ರೆ ವಿರುದ್ಧ ಪ್ರಕರಣ ದಾಖಲಾಗಿದೆ.
ಬಾಲಕುಮಾರ 6 ತಿಂಗಳ ಮಗುವಾಗಿದ್ದು, ಇದೇ ತಿಂಗಳ 19ರಂದು ಅನಾರೋಗ್ಯದ ಹಿನ್ನೆಲೆಯಲ್ಲಿ ಪೋಷಕರು ಮಗುವನ್ನು ಆಸ್ಪತ್ರೆಗೆ ದಾಖಲಿಸಿದ್ದರು. ಚಿಕಿತ್ಸೆ ಬಳಿಕ ನಿನ್ನೆ ಡಿಸ್ಚಾರ್ಜ್ ಮಾಡುವ ವೇಳೆ ಮಗುವಿನ ಕೈಗೆ ಬ್ಯಾಂಡೇಜ್ ಹಾಕಲಾಗಿತ್ತು. ಮನೆಗೆ ಕರೆದುಕೊಂಡು ಹೋಗಿ ಬ್ಯಾಂಡೇಜ್ ತೆಗೆಯುವಾಗ ಮಗುವಿನ ಕಿರುಬೆರಳು ಕಟ್ ಆಗಿರುವುದು ಕಂಡುಬಂದಿದೆ ಎಂದು ಪೋಷಕರು ಆರೋಪಿಸಿದ್ದಾರೆ.
ಆ ಬಳಿಕ ಪೋಷಕರು ಪೊಲೀಸರಿಗೆ ದೂರು ನೀಡಿದ್ದು, ಆಸ್ಪತ್ರೆಯ ನರ್ಸ್‌ಗಳ ನಿರ್ಲಕ್ಷ್ಯದಿಂದ ಈ ಘಟನೆ ಸಂಭವಿಸಿದೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಆರಂಭಿಸಿದ್ಧಾರೆ. ಆದರೆ, ಆಸ್ಪತ್ರೆ ಆಡಳಿತದಿಂದ ಈವರೆಗೆ ಅಧಿಕೃತ ಪ್ರತಿಕ್ರಿಯೆ ಲಭ್ಯವಾಗಿಲ್ಲ. ಘಟನೆ ಕುರಿತು ಸಂಪೂರ್ಣ ಸತ್ಯಾಸತ್ಯತೆ ಪೊಲೀಸ್ ತನಿಖೆಯ ಬಳಿಕವೇ ಹೊರಬರಲಿದೆ.
ಇದನ್ನೂ ಓದಿ : ನಾಗರಹೊಳೆ-ಬಂಡೀಪುರದಲ್ಲಿ ಸಫಾರಿ ಪುನಾರಂಭಕ್ಕೆ ವಿರೋಧ | ರೈತರ ಅರೆಬೆತ್ತಲೆ ಪ್ರತಿಭಟನೆ


















