ಕರ್ನಾಟಕ ನ್ಯೂಸ್ ಬೀಟ್

ನಾಗರಾಜ್ ಅರೆಹೊಳೆ

ಪ್ರಧಾನ ಸಂಪಾದಕರು

newsbeatkarnataka@gmail.com

  • ಬ್ಲಾಗ್
  • ಜಿಲ್ಲಾ ಸುದ್ದಿ
    • ಬೆಂಗಳೂರು ನಗರ
    • ಬೆಂಗಳೂರು ಗ್ರಾಮಾಂತರ
    • ಬೆಳಗಾವಿ
    • ಬೀದರ್
    • ಬಾಗಲಕೋಟೆ
    • ಬಳ್ಳಾರಿ
    • ಚಾಮರಾಜನಗರ
    • ದಕ್ಷಿಣ ಕನ್ನಡ
    • ಚಿಕ್ಕಬಳ್ಳಾಪುರ
    • ಮಂಗಳೂರು
    • ಧಾರವಾಡ
    • ದಾವಣಗೆರೆ
    • ಚಿತ್ರದುರ್ಗ
    • ಗದಗ
    • ಹಾಸನ
    • ವಿಜಯಪುರ
    • ಹಾವೇರಿ
    • ಕಲಬುರ್ಗಿ
    • ಕೋಲಾರ
    • ರಾಯಚೂರು
    • ಕೊಡಗು
    • ರಾಯಚೂರು
    • ರಾಮನಗರ
    • ಕೊಪ್ಪಳ
    • ತುಮಕೂರು
    • ಮೈಸೂರು
    • ಮಂಡ್ಯ
    • ಉಡುಪಿ
    • ಚಿಕ್ಕಮಗಳೂರು
    • ಉತ್ತರ ಕನ್ನಡ
    • ವಿಜಯನಗರ
    • ಶಿವಮೊಗ್ಗ
    • ಯಾದಗಿರಿ
  • ರಾಜ್ಯ
  • ರಾಜಕೀಯ
  • ದೇಶ
  • ವಿದೇಶ
  • ಕ್ರೀಡೆ
  • ಸಿನಿಮಾ-ಮನರಂಜನೆ
  • ವಿಶೇಷ ಅಂಕಣ
  • ಧರ್ಮ-ಸನಾತನ
  • ಅಪರಾಧ
  • ಆರೋಗ್ಯ-ಆಹಾರ
  • ತಂತ್ರಜ್ಞಾನ
  • ಕೃಷಿ-ಪರಿಸರ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ವಾಣಿಜ್ಯ-ವ್ಯಾಪಾರ
  • ಜ್ಯೋತಿಷ್ಯ
  • ಪುರಾಣ
  • ಇತಿಹಾಸ
No Result
View All Result
Karnataka News Beat
  • ಬ್ಲಾಗ್
  • ಜಿಲ್ಲಾ ಸುದ್ದಿ
    • ಬೆಂಗಳೂರು ನಗರ
    • ಬೆಂಗಳೂರು ಗ್ರಾಮಾಂತರ
    • ಬೆಳಗಾವಿ
    • ಬೀದರ್
    • ಬಾಗಲಕೋಟೆ
    • ಬಳ್ಳಾರಿ
    • ಚಾಮರಾಜನಗರ
    • ದಕ್ಷಿಣ ಕನ್ನಡ
    • ಚಿಕ್ಕಬಳ್ಳಾಪುರ
    • ಮಂಗಳೂರು
    • ಧಾರವಾಡ
    • ದಾವಣಗೆರೆ
    • ಚಿತ್ರದುರ್ಗ
    • ಗದಗ
    • ಹಾಸನ
    • ವಿಜಯಪುರ
    • ಹಾವೇರಿ
    • ಕಲಬುರ್ಗಿ
    • ಕೋಲಾರ
    • ರಾಯಚೂರು
    • ಕೊಡಗು
    • ರಾಯಚೂರು
    • ರಾಮನಗರ
    • ಕೊಪ್ಪಳ
    • ತುಮಕೂರು
    • ಮೈಸೂರು
    • ಮಂಡ್ಯ
    • ಉಡುಪಿ
    • ಚಿಕ್ಕಮಗಳೂರು
    • ಉತ್ತರ ಕನ್ನಡ
    • ವಿಜಯನಗರ
    • ಶಿವಮೊಗ್ಗ
    • ಯಾದಗಿರಿ
  • ರಾಜ್ಯ
  • ರಾಜಕೀಯ
  • ದೇಶ
  • ವಿದೇಶ
  • ಕ್ರೀಡೆ
  • ಸಿನಿಮಾ-ಮನರಂಜನೆ
  • ವಿಶೇಷ ಅಂಕಣ
  • ಧರ್ಮ-ಸನಾತನ
  • ಅಪರಾಧ
  • ಆರೋಗ್ಯ-ಆಹಾರ
  • ತಂತ್ರಜ್ಞಾನ
  • ಕೃಷಿ-ಪರಿಸರ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ವಾಣಿಜ್ಯ-ವ್ಯಾಪಾರ
  • ಜ್ಯೋತಿಷ್ಯ
  • ಪುರಾಣ
  • ಇತಿಹಾಸ
No Result
View All Result
ಕರ್ನಾಟಕ ನ್ಯೂಸ್ ಬೀಟ್

ನಾಗರಾಜ್ ಅರೆಹೊಳೆ
ಪ್ರಧಾನ ಸಂಪಾದಕರು

No Result
View All Result
Home ದೇಶ

ಕೆನಡಾ ಪ್ರಧಾನಿ ಭಾರತ ಭೇಟಿಗೂ ಮುನ್ನ ಮಹತ್ವದ ಬೆಳವಣಿಗೆ | 26/11 ದಾಳಿ ರೂವಾರಿ ತಹವ್ವುರ್ ರಾಣಾ ಪೌರತ್ವ ರದ್ದು?

February 24, 2026
Share on WhatsappShare on FacebookShare on Twitter

ನವದೆಹಲಿ : 26/11ರ ಮುಂಬೈ ದಾಳಿಯ ರೂವಾರಿ ತಹಾವ್ವುರ್ ಹುಸೇನ್ ರಾಣಾನ ಕೆನಡಾ ಪೌರತ್ವವನ್ನು ರದ್ದುಗೊಳಿಸಲು ಕೆನಡಾ ಸರ್ಕಾರ ಮುಂದಾಗಿದೆ. ಹಿಂದಿನ ಜಸ್ಟಿನ್ ಟ್ರುಡೊ ಸರ್ಕಾರದ ಅವಧಿಯಲ್ಲಿ ತೀವ್ರವಾಗಿ ಹದಗೆಟ್ಟಿದ್ದ ಭಾರತ ಮತ್ತು ಕೆನಡಾ ನಡುವಿನ ದ್ವಿಪಕ್ಷೀಯ ಸಂಬಂಧವನ್ನು ಮರುಸ್ಥಾಪಿಸುವ ನಿಟ್ಟಿನಲ್ಲಿ, ಕೆನಡಾದ ನೂತನ ಪ್ರಧಾನಿ ಮಾರ್ಕ್ ಕಾರ್ನಿ ಅವರು ಫೆ.26ರಂದು ಭಾರತಕ್ಕೆ ಭೇಟಿ ನೀಡುತ್ತಿದ್ದಾರೆ.

ಈ ಮಹತ್ವದ ಭೇಟಿಗೂ ಮುನ್ನವೇ ಕೆನಡಾ ಸರ್ಕಾರ ಈ ನಿರ್ಧಾರ ಕೈಗೊಂಡಿರುವುದು ತೀವ್ರ ಕುತೂಹಲ ಕೆರಳಿಸಿದೆ. ಸದ್ಯ ಅಮೆರಿಕದಿಂದ ಗಡೀಪಾರಾಗಿರುವ ಪಾಕಿಸ್ತಾನ ಮೂಲದ ಉದ್ಯಮಿ ರಾಣಾ ಭಾರತದ ವಶದಲ್ಲಿದ್ದು, ವಿಚಾರಣೆ ಎದುರಿಸುತ್ತಿದ್ದಾನೆ. 2008ರಲ್ಲಿ ಲಷ್ಕರ್-ಎ-ತೊಯ್ಬಾ ಉಗ್ರರು ಮುಂಬೈನಲ್ಲಿ ನಡೆಸಿದ ಭೀಕರ ದಾಳಿಯಲ್ಲಿ 160ಕ್ಕೂ ಹೆಚ್ಚು ಮಂದಿ ಪ್ರಾಣ ಕಳೆದುಕೊಂಡಿದ್ದರು.

ಕೆನಡಾ ಸರ್ಕಾರ ರಾಣಾನ ಪೌರತ್ವವನ್ನು ರದ್ದುಗೊಳಿಸಲು ಆತನ ಮೇಲಿರುವ ಭಯೋತ್ಪಾದನೆ ಆರೋಪಗಳನ್ನು ನೇರ ಆಧಾರವಾಗಿಟ್ಟುಕೊಂಡಿಲ್ಲ. ಬದಲಾಗಿ, ಪೌರತ್ವ ಪಡೆಯುವಾಗ ಆತ ಸುಳ್ಳು ಮಾಹಿತಿ ನೀಡಿ ವ್ಯವಸ್ಥೆಯನ್ನು ವಂಚಿಸಿದ್ದಾನೆ ಎಂಬ ಕಾರಣಕ್ಕಾಗಿ ಈ ಕಠಿಣ ಕ್ರಮ ಕೈಗೊಳ್ಳಲಾಗುತ್ತಿದೆ.

‘ಕೆನಡಾದ ವಲಸೆ, ನಿರಾಶ್ರಿತರು ಮತ್ತು ಪೌರತ್ವ’ (IRCC) ಇಲಾಖೆಯು ರಾಣಾಗೆ ಈ ಕುರಿತು ಅಧಿಕೃತ ನೋಟಿಸ್ ಜಾರಿ ಮಾಡಿದ್ದು, 2001ರಲ್ಲಿ ಆತ ಪಡೆದಿದ್ದ ಕೆನಡಾ ಪೌರತ್ವವನ್ನು ಹಿಂಪಡೆಯುವ ಉದ್ದೇಶವನ್ನು ಸ್ಪಷ್ಟಪಡಿಸಿದೆ. 1997ರಲ್ಲಿ ಕೆನಡಾಗೆ ವಲಸೆ ಬಂದಿದ್ದ 65 ವರ್ಷದ ರಾಣಾ, 2000ನೇ ಇಸವಿಯಲ್ಲಿ ಪೌರತ್ವಕ್ಕಾಗಿ ಅರ್ಜಿ ಸಲ್ಲಿಸುವಾಗ ತನ್ನ ವಾಸ್ತವ್ಯದ ಬಗ್ಗೆ ಸುಳ್ಳು ಮಾಹಿತಿ ನೀಡಿದ್ದ ಎಂಬುದು ಇಲಾಖೆಯ ಪ್ರಮುಖ ಆರೋಪ.

ಪೌರತ್ವಕ್ಕೆ ಅರ್ಜಿ ಸಲ್ಲಿಸುವ ಮುನ್ನ ತಾನು ಒಟ್ಟಾವಾ ಮತ್ತು ಟೊರೊಂಟೊದಲ್ಲಿ ನಾಲ್ಕು ವರ್ಷಗಳ ಕಾಲ ನೆಲೆಸಿದ್ದಾಗಿ ಹಾಗೂ ಈ ಅವಧಿಯಲ್ಲಿ ಕೇವಲ 6 ದಿನ ಮಾತ್ರ ದೇಶದಿಂದ ಹೊರಗಿದ್ದೆ ಎಂದು ರಾಣಾ ಹೇಳಿಕೊಂಡಿದ್ದ. ಆದರೆ, ‘ರಾಯಲ್ ಕೆನಡಿಯನ್ ಮೌಂಟೆಡ್ ಪೊಲೀಸ್’ ನಡೆಸಿದ ತನಿಖೆಯಲ್ಲಿ ಆತನ ಬಣ್ಣ ಬಯಲಾಗಿತ್ತು. ಆತ ಕೆನಡಾದಲ್ಲಿರುವ ಬದಲು, ಹೆಚ್ಚಿನ ಸಮಯವನ್ನು ಅಮೆರಿಕದ ಷಿಕಾಗೋದಲ್ಲಿಯೇ ಕಳೆದಿದ್ದ. ಅಲ್ಲಿ ಆತ ಹಲವಾರು ಆಸ್ತಿಗಳನ್ನು ಹೊಂದಿದ್ದಲ್ಲದೆ, ವಲಸೆ ಸಲಹಾ ಕೇಂದ್ರ ಹಾಗೂ ದಿನಸಿ ಅಂಗಡಿಯಂತಹ ವ್ಯವಹಾರಗಳನ್ನು ನಡೆಸುತ್ತಿದ್ದ ಎಂಬುದು ತನಿಖೆಯಿಂದ ದೃಢಪಟ್ಟಿದೆ. ತನ್ನ ಸುದೀರ್ಘ ಗೈರುಹಾಜರಿಯನ್ನು ಉದ್ದೇಶಪೂರ್ವಕವಾಗಿ ಮುಚ್ಚಿಡುವ ಮೂಲಕ ಆತ ಅಧಿಕಾರಿಗಳ ದಾರಿ ತಪ್ಪಿಸಿದ್ದಾನೆ ಎಂದು ಐಆರ್‌ಸಿಸಿ ವರದಿಯಲ್ಲಿ ಗಂಭೀರ ಆರೋಪ ಮಾಡಲಾಗಿದೆ.

ಕಾನೂನು ಹೋರಾಟ

ಪ್ರಸ್ತುತ ಈ ಪ್ರಕರಣವನ್ನು ಕೆನಡಾದ ಫೆಡರಲ್ ನ್ಯಾಯಾಲಯಕ್ಕೆ ಹಸ್ತಾಂತರಿಸಲಾಗಿದೆ. ಸುಳ್ಳು ಮಾಹಿತಿ ಅಥವಾ ವಂಚನೆಯ ಮೂಲಕ ಪೌರತ್ವ ಪಡೆಯಲಾಗಿದೆಯೇ ಎಂಬುದನ್ನು ನಿರ್ಧರಿಸುವ ಅಂತಿಮ ಅಧಿಕಾರ ಇರುವುದು ಇದೇ ನ್ಯಾಯಾಲಯಕ್ಕೆ. ಆದರೆ, ಸರ್ಕಾರದ ಈ ನಡೆಯನ್ನು ಪ್ರಶ್ನಿಸಿರುವ ರಾಣಾನ ಕಾನೂನು ತಂಡ, ಇದೊಂದು ಅನ್ಯಾಯದ ನಿರ್ಧಾರ ಹಾಗೂ ಆತನ ಹಕ್ಕುಗಳ ಉಲ್ಲಂಘನೆ ಎಂದು ವಾದಿಸಿದೆ.

ಕಳೆದ ವಾರ ಈ ಪ್ರಕರಣದ ವಿಚಾರಣೆ ಫೆಡರಲ್ ನ್ಯಾಯಾಲಯದಲ್ಲಿ ನಡೆದಿದ್ದು, ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದ ಕೆಲವು ಸೂಕ್ಷ್ಮ ಮಾಹಿತಿಗಳನ್ನು ಬಹಿರಂಗಪಡಿಸದಿರಲು ಸರ್ಕಾರಿ ವಕೀಲರು ನ್ಯಾಯಾಲಯದ ಅನುಮತಿ ಕೋರಿದ್ದಾರೆ. ವಲಸೆ ಇಲಾಖೆಯ ವಕ್ತಾರರ ಪ್ರಕಾರ, ಕೆನಡಾದ ಪೌರತ್ವ ವ್ಯವಸ್ಥೆಯ ಸಮಗ್ರತೆಯನ್ನು ಕಾಪಾಡುವ ದೃಷ್ಟಿಯಿಂದ ಇಂತಹ ವಂಚನೆ ಪ್ರಕರಣಗಳಲ್ಲಿ ಪೌರತ್ವ ರದ್ದುಪಡಿಸುವುದು ಅನಿವಾರ್ಯವಾಗಿದೆ. ಕಳೆದ ಒಂದು ದಶಕದಲ್ಲಿ ಇಂತಹ ಪೌರತ್ವ ರದ್ದತಿ ಪ್ರಕರಣಗಳು ಬೆರಳೆಣಿಕೆಯಷ್ಟು ಮಾತ್ರ ವರದಿಯಾಗಿವೆ.

ಭಾರತದ ವಶದಲ್ಲಿ ಉಗ್ರ ರಾಣಾ

ಅಮೆರಿಕದಿಂದ ಗಡೀಪಾರುಗೊಂಡ ಬಳಿಕ ಲಾಸ್ ಏಂಜಲೀಸ್‌ನಿಂದ ವಿಶೇಷ ವಿಮಾನದ ಮೂಲಕ ನವದೆಹಲಿಗೆ ಕರೆತರಲಾದ ತಹಾವ್ವುರ್ ರಾಣಾನನ್ನು ಏ.10 ರಂದು ರಾಷ್ಟ್ರೀಯ ತನಿಖಾ ದಳ (NIA) ಅಧಿಕೃತವಾಗಿ ಬಂಧಿಸಿತ್ತು. ಮುಂಬೈ ದಾಳಿಗೆ ಸಂಬಂಧಿಸಿದಂತೆ ಪಾಕಿಸ್ತಾನಿ ಉಗ್ರರೊಂದಿಗೆ ಸೇರಿ ಸಂಚು ರೂಪಿಸಿದ ಪ್ರಮುಖ ಆರೋಪಿಗಳಲ್ಲಿ ಈತನೂ ಒಬ್ಬನಾಗಿದ್ದು, ಇದೀಗ ಈತನ ಕೆನಡಾ ಪೌರತ್ವವೂ ರದ್ದಾಗುವ ಭೀತಿ ಎದುರಾಗಿದೆ.

ಇದನ್ನೂ ಓದಿ : ಪಾಕಿಸ್ತಾನ, ಶ್ರೀಲಂಕಾಕ್ಕಾಗಿ ಟಿ20 ವಿಶ್ವಕಪ್ ನಿಯಮ ಸಡಿಲಿಸಿದ ಐಸಿಸಿ

Tags: Karnataka News beat
SendShareTweet
Previous Post

ಪಾಕಿಸ್ತಾನ, ಶ್ರೀಲಂಕಾಕ್ಕಾಗಿ ಟಿ20 ವಿಶ್ವಕಪ್ ನಿಯಮ ಸಡಿಲಿಸಿದ ಐಸಿಸಿ

Next Post

ಅತ್ಯಾಚಾರ ಕೇಸ​ಲ್ಲಿ ಜೈಲು ಸೇರಿದ್ದ ಮ್ಯೂಸಿಕ್ ಮೈಲಾರಿಗೆ ಬಿಗ್ ರಿಲೀಫ್

Related Posts

ಬಾಂಗ್ಲಾದಲ್ಲಿ ನಿವೃತ್ತ ಹಿಂದೂ ಶಿಕ್ಷಕ ಸೇರಿದಂತೆ ಒಂದೇ ಕುಟುಂಬದ ನಾಲ್ವರ ನಿಗೂಢ ಹತ್ಯೆ!
ದೇಶ

ಬಾಂಗ್ಲಾದಲ್ಲಿ ನಿವೃತ್ತ ಹಿಂದೂ ಶಿಕ್ಷಕ ಸೇರಿದಂತೆ ಒಂದೇ ಕುಟುಂಬದ ನಾಲ್ವರ ನಿಗೂಢ ಹತ್ಯೆ!

‘ಮೀಸಲಾತಿ ಯಾರೂ ಕೊಡುವ ದಾನವಲ್ಲ, ಯಾರೋ ಕೇಳಿದ್ರೆ ರದ್ದು ಮಾಡಲಾಗಲ್ಲ’ : ಚಿರಾಗ್ ಪಾಸ್ವಾನ್ ಖಡಕ್ ಮಾತು
ದೇಶ

‘ಮೀಸಲಾತಿ ಯಾರೂ ಕೊಡುವ ದಾನವಲ್ಲ, ಯಾರೋ ಕೇಳಿದ್ರೆ ರದ್ದು ಮಾಡಲಾಗಲ್ಲ’ : ಚಿರಾಗ್ ಪಾಸ್ವಾನ್ ಖಡಕ್ ಮಾತು

UPI ಮಾಡುವಾಗ ದುಡ್ಡು ಕಟ್ ಆಗಿ, ಪೇಮೆಂಟ್ ಫೇಲ್ ಆದರೆ ಹಣ ಪಡೆಯೋದು ಹೇಗೆ?
ದೇಶ

UPI ಮಾಡುವಾಗ ದುಡ್ಡು ಕಟ್ ಆಗಿ, ಪೇಮೆಂಟ್ ಫೇಲ್ ಆದರೆ ಹಣ ಪಡೆಯೋದು ಹೇಗೆ?

ಬಿಟ್ಟುಹೋದ ಪತ್ನಿ ಮರಳಿ ಬರಲೆಂದು ನೆರೆಮನೆಯ ವ್ಯಕ್ತಿಯ ತಲೆ ಕತ್ತರಿಸಿ ಪೂಜಾ ಕೋಣೆಯಲ್ಲಿ ಹೂತಿಟ್ಟ ಹಂತಕ!
ದೇಶ

ಬಿಟ್ಟುಹೋದ ಪತ್ನಿ ಮರಳಿ ಬರಲೆಂದು ನೆರೆಮನೆಯ ವ್ಯಕ್ತಿಯ ತಲೆ ಕತ್ತರಿಸಿ ಪೂಜಾ ಕೋಣೆಯಲ್ಲಿ ಹೂತಿಟ್ಟ ಹಂತಕ!

ವಿಶ್ವ ಛಾಯಾಗ್ರಹಣ ದಿನದಂದು ಕ್ಯಾಮೆರಾ ಹಿಡಿದು ಪತ್ರಕರ್ತರ ಫೋಟೋವನ್ನೇ ಕ್ಲಿಕ್ಕಿಸಿದ ತಮಿಳುನಾಡು ಸಿಎಂ ವಿಜಯ್
ದೇಶ

ವಿಶ್ವ ಛಾಯಾಗ್ರಹಣ ದಿನದಂದು ಕ್ಯಾಮೆರಾ ಹಿಡಿದು ಪತ್ರಕರ್ತರ ಫೋಟೋವನ್ನೇ ಕ್ಲಿಕ್ಕಿಸಿದ ತಮಿಳುನಾಡು ಸಿಎಂ ವಿಜಯ್

ಐಫೋನ್ ಇಎಂಐ ವಿಚಾರದಲ್ಲಿ ಮನೆಯಲ್ಲಿ ಗಲಾಟೆ: ಬೆಟ್ಟದಿಂದ ಜಿಗಿಯಲು ಯತ್ನಿಸಿದ ಪುತ್ರ, ರಕ್ಷಿಸಲು ಹೋದ ತಂದೆ-ತಾಯಿಯೂ ಸಾವು!
ದೇಶ

ಐಫೋನ್ ಇಎಂಐ ವಿಚಾರದಲ್ಲಿ ಮನೆಯಲ್ಲಿ ಗಲಾಟೆ: ಬೆಟ್ಟದಿಂದ ಜಿಗಿಯಲು ಯತ್ನಿಸಿದ ಪುತ್ರ, ರಕ್ಷಿಸಲು ಹೋದ ತಂದೆ-ತಾಯಿಯೂ ಸಾವು!

Next Post
ಅತ್ಯಾಚಾರ ಕೇಸ​ಲ್ಲಿ ಜೈಲು ಸೇರಿದ್ದ ಮ್ಯೂಸಿಕ್ ಮೈಲಾರಿಗೆ ಬಿಗ್ ರಿಲೀಫ್

ಅತ್ಯಾಚಾರ ಕೇಸ​ಲ್ಲಿ ಜೈಲು ಸೇರಿದ್ದ ಮ್ಯೂಸಿಕ್ ಮೈಲಾರಿಗೆ ಬಿಗ್ ರಿಲೀಫ್

  • Trending
  • Comments
  • Latest
ಗಮನಿಸಿ ; ಆಗಸ್ಟ್ 16ರೊಳಗೆ ಈ ಕೆಲಸ ಮಾಡದಿದ್ದರೆ ಮನೆಗೆ ಬರಲ್ಲ LPG ಸಿಲಿಂಡರ್!

ಗಮನಿಸಿ ; ಆಗಸ್ಟ್ 16ರೊಳಗೆ ಈ ಕೆಲಸ ಮಾಡದಿದ್ದರೆ ಮನೆಗೆ ಬರಲ್ಲ LPG ಸಿಲಿಂಡರ್!

ವಿಜಯ ಪತಾಕೆ ಹಾರಿಸಿದ ವಿಜಯ ಭಾರತಿ ವಿದ್ಯಾರ್ಥಿನಿ!

ವಿಜಯ ಪತಾಕೆ ಹಾರಿಸಿದ ವಿಜಯ ಭಾರತಿ ವಿದ್ಯಾರ್ಥಿನಿ!

ಸಾಲಗಾರರಿಗೆ ಗುಡ್ ನ್ಯೂಸ್ : ವಸೂಲಾತಿ ನಿಯಮ ಬಿಗಿಗೊಳಿಸಿದ RBI..ಇಲ್ಲಿದೆ ಡಿಟೇಲ್ಸ್

ಸಾಲಗಾರರಿಗೆ ಗುಡ್ ನ್ಯೂಸ್ : ವಸೂಲಾತಿ ನಿಯಮ ಬಿಗಿಗೊಳಿಸಿದ RBI..ಇಲ್ಲಿದೆ ಡಿಟೇಲ್ಸ್

ಉಡುಪಿ KMCಯಲ್ಲಿ ಬಡವರಿಗಿಲ್ಲ ಆಯುಷ್ಮಾನ್ ಸೌಲಭ್ಯ – ಕ್ರಮಕ್ಕೆ ಆಗ್ರಹಿಸಿದ ಬಿಜೆಪಿ ಯುವ ಮೋರ್ಚಾ!

ಉಡುಪಿ KMCಯಲ್ಲಿ ಬಡವರಿಗಿಲ್ಲ ಆಯುಷ್ಮಾನ್ ಸೌಲಭ್ಯ – ಕ್ರಮಕ್ಕೆ ಆಗ್ರಹಿಸಿದ ಬಿಜೆಪಿ ಯುವ ಮೋರ್ಚಾ!

ಕುಡಿದ ಮತ್ತಿನಲ್ಲಿ ಸಿಕ್ಕ ಸಿಕ್ಕವರನ್ನು ಕಚ್ಚಿದ ವ್ಯಕ್ತಿ!

ಕುಡಿದ ಮತ್ತಿನಲ್ಲಿ ಸಿಕ್ಕ ಸಿಕ್ಕವರನ್ನು ಕಚ್ಚಿದ ವ್ಯಕ್ತಿ!

ಹೃದಯಾಘಾತಕ್ಕೆ ಪತಿ ಬಲಿ; 7ನೇ ಮಹಡಿಯಿಂದ ಹಾರಿದ ಪತ್ನಿ!

ಹೃದಯಾಘಾತಕ್ಕೆ ಪತಿ ಬಲಿ; 7ನೇ ಮಹಡಿಯಿಂದ ಹಾರಿದ ಪತ್ನಿ!

ಕನ್ನಡದಲ್ಲಿ ಐಎಸ್ ಬರೆದ ಮೊದಲಿಗ ಹಾಗೂ ನಟ ಶಿವರಾಮ್ ಆರೋಗ್ಯ ಸ್ಥಿತಿ ಗಂಭೀರ!

ಕನ್ನಡದಲ್ಲಿ ಐಎಸ್ ಬರೆದ ಮೊದಲಿಗ ಹಾಗೂ ನಟ ಶಿವರಾಮ್ ಆರೋಗ್ಯ ಸ್ಥಿತಿ ಗಂಭೀರ!

ಪಿಎಂ ಕಿಸಾನ್ 16ನೇ ಕಂತಿನ ಹಣ ಬಿಡುಗಡೆ!

ಪಿಎಂ ಕಿಸಾನ್ 16ನೇ ಕಂತಿನ ಹಣ ಬಿಡುಗಡೆ!

ಬಾಂಗ್ಲಾದಲ್ಲಿ ನಿವೃತ್ತ ಹಿಂದೂ ಶಿಕ್ಷಕ ಸೇರಿದಂತೆ ಒಂದೇ ಕುಟುಂಬದ ನಾಲ್ವರ ನಿಗೂಢ ಹತ್ಯೆ!

ಬಾಂಗ್ಲಾದಲ್ಲಿ ನಿವೃತ್ತ ಹಿಂದೂ ಶಿಕ್ಷಕ ಸೇರಿದಂತೆ ಒಂದೇ ಕುಟುಂಬದ ನಾಲ್ವರ ನಿಗೂಢ ಹತ್ಯೆ!

33ನೇ ವಯಸ್ಸಿನಲ್ಲಿ ಭಾರತ ಟೆಸ್ಟ್‌ಗೆ ಪಾದಾರ್ಪಣೆ ಮಾಡಿದ ಸರಾಂಶ್ ಜೈನ್ ; ಕುಲದೀಪ್‌ಗೆ ವಿಶ್ರಾಂತಿ

33ನೇ ವಯಸ್ಸಿನಲ್ಲಿ ಭಾರತ ಟೆಸ್ಟ್‌ಗೆ ಪಾದಾರ್ಪಣೆ ಮಾಡಿದ ಸರಾಂಶ್ ಜೈನ್ ; ಕುಲದೀಪ್‌ಗೆ ವಿಶ್ರಾಂತಿ

‘ಮೀಸಲಾತಿ ಯಾರೂ ಕೊಡುವ ದಾನವಲ್ಲ, ಯಾರೋ ಕೇಳಿದ್ರೆ ರದ್ದು ಮಾಡಲಾಗಲ್ಲ’ : ಚಿರಾಗ್ ಪಾಸ್ವಾನ್ ಖಡಕ್ ಮಾತು

‘ಮೀಸಲಾತಿ ಯಾರೂ ಕೊಡುವ ದಾನವಲ್ಲ, ಯಾರೋ ಕೇಳಿದ್ರೆ ರದ್ದು ಮಾಡಲಾಗಲ್ಲ’ : ಚಿರಾಗ್ ಪಾಸ್ವಾನ್ ಖಡಕ್ ಮಾತು

ಇಸ್ರೋದ NSIL ಸಂಸ್ಥೆಯಲ್ಲಿ ನೇಮಕಾತಿ : ಬೆಂಗಳೂರಿನಲ್ಲೇ ಲಕ್ಷಾಂತರ ರೂ. ಸಂಬಳದ ಉದ್ಯೋಗ

ಇಸ್ರೋದ NSIL ಸಂಸ್ಥೆಯಲ್ಲಿ ನೇಮಕಾತಿ : ಬೆಂಗಳೂರಿನಲ್ಲೇ ಲಕ್ಷಾಂತರ ರೂ. ಸಂಬಳದ ಉದ್ಯೋಗ

Recent News

ಬಂಧು ಮಿತ್ರರೇ ನಮಸ್ತೇ,

ನಿಖರ, ಪ್ರಖರ, ಸ್ಪಷ್ಟ ಹಾಗೂ ವಸ್ತುನಿಷ್ಠ ಸುದ್ದಿ ನೀಡುವ ಭರವಸೆಯೊಂದಿಗೆ ನಮ್ಮ “ಕರ್ನಾಟಕ ನ್ಯೂಸ್ ಬೀಟ್” ಸುದ್ದಿ ಮಾಧ್ಯಮವನ್ನು ಚಾಲ್ತಿಗೆ ತಂದಿದ್ದೇವೆ. ಜಿಲ್ಲಾ ಸುದ್ದಿ, ಪ್ರಸ್ತುತ ಸುದ್ದಿ, ವಿಶೇಷ ಅಂಕಣ, ಧರ್ಮ, ಸನಾತನ, ರಾಜಕೀಯ, ಸಿನಿಮಾ, ಅಪರಾಧ, ಕ್ರೀಡೆ, ಆರೋಗ್ಯ, ಆಹಾರ, ತಂತ್ರಜ್ಞಾನ, ಕೃಷಿ, ಪರಿಸರ, ಸಾಹಿತ್ಯ, ವಾಣಿಜ್ಯ, ಜ್ಯೋತಿಷ್ಯ, ಪುರಾಣ, ಇತಿಹಾಸ ಸೇರಿದಂತೆ ಈ ಸಮಾಜದ ಪ್ರತಿ ವಿಭಾಗದಲ್ಲೂ ನಾವು ಕಣ್ಣಿಡುತ್ತಾ, ಅಲ್ಲಿನ ಆಗು-ಹೋಗುಗಳನ್ನು ನಿರಂತರವಾಗಿ ನಿಮ್ಮ ಮುಂದೆ ತೆರೆದಿಡುತ್ತಾ ಸಾಗುತ್ತೇವೆ. ಒಟ್ಟಿನಲ್ಲಿ, ಬರವಣಿಗೆಯಲ್ಲೇ ಭಗವಂತನನ್ನ ಕಾಣುತ್ತಿರುವ, ಸದೃಢ ತಂಡದೊಂದಿಗೆ, ಕರ್ನಾಟಕ ನ್ಯೂಸ್ ಬೀಟ್ ಸುದ್ದಿ ಮಾಧ್ಯಮವು, ವಿಶೇಷವಾಗಿ ಸುದ್ದಿ, ವರದಿ, ಅಂಕಣ, ಚಿತ್ರಣಗಳನ್ನು ಹೊತ್ತು ತರುತ್ತಾ, ಸದಾ ನಿಮ್ಮೊಂದಿಗೆ ಬೆಸೆದುಕೊಂಡಿರಲಿದೆ.

Follow Us

Join Our WhatsApp Channel

Browse by Category

  • national
  • News & Politics
  • state
  • Uncategorized
  • ಅಪರಾಧ
  • ಅಮರಾವತಿ
  • ಆರೋಗ್ಯ-ಆಹಾರ
  • ಇತರೆ ಸುದ್ದಿ
  • ಇತಿಹಾಸ
  • ಉಡುಪಿ
  • ಉತ್ತರ ಕನ್ನಡ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಕಲಬುರ್ಗಿ
  • ಕೃಷಿ-ಪರಿಸರ
  • ಕೊಡಗು
  • ಕೊಪ್ಪಳ
  • ಕೋಲಾರ
  • ಕ್ರೀಡೆ
  • ಗದಗ
  • ಚಾಮರಾಜನಗರ
  • ಚಿಕ್ಕಬಳ್ಳಾಫುರ
  • ಚಿಕ್ಕಮಗಳೂರು
  • ಚಿತ್ರದುರ್ಗ
  • ಜ್ಯೋತಿಷ್ಯ
  • ತಂತ್ರಜ್ಞಾನ
  • ತುಮಕೂರು
  • ದಕ್ಷಿಣ ಕನ್ನಡ
  • ದಾವಣಗೆರೆ
  • ದೇಶ
  • ಧರ್ಮ-ಸನಾತನ
  • ಧಾರವಾಡ
  • ಪುರಾಣ
  • ಬಳ್ಳಾರಿ
  • ಬಾಗಲಕೋಟೆ
  • ಬೀದರ್
  • ಬೆಂಗಳೂರು
  • ಬೆಂಗಳೂರು ಗ್ರಾಮಾಂತರ
  • ಬೆಂಗಳೂರು ನಗರ
  • ಬೆಳಗಾವಿ
  • ಮಂಗಳೂರು
  • ಮಂಡ್ಯ
  • ಮುಖ್ಯಾಂಶಗಳು
  • ಮೈಸೂರು
  • ಯಾದಗಿರಿ
  • ರಾಜಕೀಯ
  • ರಾಜ್ಯ
  • ರಾಮನಗರ
  • ರಾಯಚೂರು
  • ವಾಣಿಜ್ಯ-ವ್ಯಾಪಾರ
  • ವಿಜಯನಗರ
  • ವಿಜಯಪುರ
  • ವಿದೇಶ
  • ವಿಶೇಷ ಅಂಕಣ
  • ವೀಡಿಯೊ ಸುದ್ದಿ
  • ವ್ಯಾಪಾರ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ಶಿವಮೊಗ್ಗ
  • ಸಿನಿಮಾ
  • ಸಿನಿಮಾ-ಮನರಂಜನೆ
  • ಹಾವೇರಿ
  • ಹಾಸನ
  • ಹುಬ್ಬಳ್ಳಿ

Recent News

ಬಾಂಗ್ಲಾದಲ್ಲಿ ನಿವೃತ್ತ ಹಿಂದೂ ಶಿಕ್ಷಕ ಸೇರಿದಂತೆ ಒಂದೇ ಕುಟುಂಬದ ನಾಲ್ವರ ನಿಗೂಢ ಹತ್ಯೆ!

ಬಾಂಗ್ಲಾದಲ್ಲಿ ನಿವೃತ್ತ ಹಿಂದೂ ಶಿಕ್ಷಕ ಸೇರಿದಂತೆ ಒಂದೇ ಕುಟುಂಬದ ನಾಲ್ವರ ನಿಗೂಢ ಹತ್ಯೆ!

33ನೇ ವಯಸ್ಸಿನಲ್ಲಿ ಭಾರತ ಟೆಸ್ಟ್‌ಗೆ ಪಾದಾರ್ಪಣೆ ಮಾಡಿದ ಸರಾಂಶ್ ಜೈನ್ ; ಕುಲದೀಪ್‌ಗೆ ವಿಶ್ರಾಂತಿ

33ನೇ ವಯಸ್ಸಿನಲ್ಲಿ ಭಾರತ ಟೆಸ್ಟ್‌ಗೆ ಪಾದಾರ್ಪಣೆ ಮಾಡಿದ ಸರಾಂಶ್ ಜೈನ್ ; ಕುಲದೀಪ್‌ಗೆ ವಿಶ್ರಾಂತಿ

  • About
  • Advertise
  • Privacy & Policy
  • Contact Us

© 2025 Karnatakanewsbeat

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಬ್ಲಾಗ್
  • ಜಿಲ್ಲಾ ಸುದ್ದಿ
    • ಬೆಂಗಳೂರು ನಗರ
    • ಬೆಂಗಳೂರು ಗ್ರಾಮಾಂತರ
    • ಬೆಳಗಾವಿ
    • ಬೀದರ್
    • ಬಾಗಲಕೋಟೆ
    • ಬಳ್ಳಾರಿ
    • ಚಾಮರಾಜನಗರ
    • ದಕ್ಷಿಣ ಕನ್ನಡ
    • ಚಿಕ್ಕಬಳ್ಳಾಪುರ
    • ಮಂಗಳೂರು
    • ಧಾರವಾಡ
    • ದಾವಣಗೆರೆ
    • ಚಿತ್ರದುರ್ಗ
    • ಗದಗ
    • ಹಾಸನ
    • ವಿಜಯಪುರ
    • ಹಾವೇರಿ
    • ಕಲಬುರ್ಗಿ
    • ಕೋಲಾರ
    • ರಾಯಚೂರು
    • ಕೊಡಗು
    • ರಾಯಚೂರು
    • ರಾಮನಗರ
    • ಕೊಪ್ಪಳ
    • ತುಮಕೂರು
    • ಮೈಸೂರು
    • ಮಂಡ್ಯ
    • ಉಡುಪಿ
    • ಚಿಕ್ಕಮಗಳೂರು
    • ಉತ್ತರ ಕನ್ನಡ
    • ವಿಜಯನಗರ
    • ಶಿವಮೊಗ್ಗ
    • ಯಾದಗಿರಿ
  • ರಾಜ್ಯ
  • ರಾಜಕೀಯ
  • ದೇಶ
  • ವಿದೇಶ
  • ಕ್ರೀಡೆ
  • ಸಿನಿಮಾ-ಮನರಂಜನೆ
  • ವಿಶೇಷ ಅಂಕಣ
  • ಧರ್ಮ-ಸನಾತನ
  • ಅಪರಾಧ
  • ಆರೋಗ್ಯ-ಆಹಾರ
  • ತಂತ್ರಜ್ಞಾನ
  • ಕೃಷಿ-ಪರಿಸರ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ವಾಣಿಜ್ಯ-ವ್ಯಾಪಾರ
  • ಜ್ಯೋತಿಷ್ಯ
  • ಪುರಾಣ
  • ಇತಿಹಾಸ

© 2025 Karnatakanewsbeat