ಮಂಡ್ಯ : 2028ಕ್ಕೆ ಚುನಾವಣೆ ಇದೆ. ಹೊಸಬರಿಗೆ ಅವಕಾಶ ಕೊಡಬೇಕು. ನಂಗೆ ಮಂತ್ರಿಗಿರಿ ಬೇಡ ಬೇರೆವರಿಗೆ ಕೊಡಿ. ಯಾರು ಸಾಮರ್ಥ್ಯ ಇದ್ದಾರೆ ಅವರಿಗೆ ಕೊಡಿ ಎಂದು ಶಾಸಕ ರವಿ ಗಣಿಗ ಹೇಳಿದ್ದಾರೆ.
ವರದಿಗಾರರೊಂದಿಗೆ ಮಾತನಾಡಿದ ರವಿ ಗಣಿಗ, 5 ಜನರಿಗೆ ಅವಕಾಶ ಕೊಡಿ ಬೇರೆ ರಾಜ್ಯದಲ್ಲಿ ತಕ್ಷಣ ಅವಕಾಶ ಸಿಕ್ತಿದೆ. ಅಶೋಕ್ ರೈ, ಶಿವಗಂಗಾ, ಭರತ್ ರೆಡ್ಡಿ, ಪ್ರದೀಪ್ ಈಶ್ವರ್ ವೈರಿ ಟ್ಯಾಲೆಂಟೆಡ್ ಒಂದಷ್ಟು ವೋಟ್ ತರೋ ಕ್ಯಾಪಸಿಟಿ ಇದೆ. ಎಂದಿದ್ದಾರೆ.
ನಂಗೆ ಸಚಿವ ಸ್ಥಾನ ಬೇಕು ಅಂತಾ ಹೇಳಿಲ್ಲ. ನಾನು ಕ್ಷೇತ್ರದ ಕೆಲಸ ಮಾಡಿದರೆ ಸಾಕು. ಬರೀ ಪತ್ರ ಮಾತ್ರ ಅಲ್ಲ, ನೇರವಾಗಿ ಭೇಟಿ ಆಗ್ತೇವೆ. ಸುರ್ಜೇವಾಲ, ಕೆ.ಸಿ ವೇಣುಗೋಪಾಲ್, ರಾಹುಲ್ ಗಾಂಧಿ ಎಲ್ಲರನ್ನ ಕೂಡ ಭೇಟಿ ಆಗ್ತೇವೆ ಡಿಸಿಎಂ ಡಿಕೆಶಿ ಭೇಟಿ ಮಾಡೋದು ಸಾಮಾನ್ಯ. ಅಪ್ಪ ಮಗ ತರಹ ,ನಾನು ದಿನ ಬರ್ತೇನೆ ರಾಜಕೀಯ ಏನು ನಾನು ಮಾತಾನಾಡಿಲ್ಲಎಂದು ಹೇಳಿದ್ದಾರೆ.
ಇದನ್ನೂ ಓದಿ ; ವಜ್ರಮಲೆ ವಸತಿ ಗೃಹದ ಪೀಠೋಪಕರಣಕ್ಕೆ ಕಳಪೆ ಗುಣಮಟ್ಟದ ಮರ ಬಳಕೆ | ಕಾಮಗಾರಿ ಸ್ಥಗಿತಕ್ಕೆ ಸಚಿವ ಕೆ.ವೆಂಕಟೇಶ್ ಸೂಚನೆ



















