ಮಂಡ್ಯ : ಒಂದು ಹೆಣ್ಣು ಮತ್ತು ಎರಡು ಗಂಡು ಮಗುವಿಗೆ ಮುಸ್ಲಿಂ ದಂಪತಿ ಜನ್ಮ ನೀಡಿರುವ ಘಟನೆ ಮಂಡ್ಯದ ಕೆ.ಆರ್ ಪೇಟೆ ತಾಲ್ಲೂಕು ಅಕ್ಕಿಹೆಬ್ಬಾಳು ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಆರೀಫಾ ಭಾನು ತ್ರಿವಳಿ ಮಕ್ಕಳಿಗೆ ಜನ್ಮ ನೀಡಿದ್ದಾರೆ. ಸದ್ಯ ತಾಯಿ ಹಾಗೂ ಮೂವರು ಮಕ್ಕಳು ಆರೋಗ್ಯವಾಗಿದ್ದಾರೆ ಎನ್ನಲಾಗಿದೆ.
ಮೈಸೂರು ನಗರದ ಖಾಸಗಿ ಆಸ್ಪತ್ರೆಯಲ್ಲಿ ಮೂರು ಮಕ್ಕಳ ಜನನವಾಗಿದ್ದು, ತ್ರಿವಳಿ ಮಕ್ಕಳ ಜನನದ ಸುದ್ದಿ ಗ್ರಾಮದಲ್ಲಿ ಸಂತಸದ ವಾತಾವರಣ ನಿರ್ಮಿಸಿದೆ.
ಇದನ್ನೂ ಓದಿ : ಅಹಮದಾಬಾದ್‌ನ ‘ಬ್ಲಾಕ್ ಸಾಯಿಲ್’ ಭಾರತಕ್ಕೆ ಶಾಪವೇ? ಸೂರ್ಯಕುಮಾರ್ಗೂ ತಟ್ಟಿತೇ?



















