ಮಂಡ್ಯ: ಚಾಲಕನ ನಿಯಂತ್ರಣ ತಪ್ಪಿ ನಾಗಮಂಗಲದ ಜೆಡಿಎಸ್(JDS) ಮಾಜಿ ಶಾಸಕ ಸುರೇಶ್ ಗೌಡ ಕಾರು ಅಪಘಾತ..! ಮಾಜಿ ಶಾಸಕ ಸುರೇಶ್ ಗೌಡ ಅವರ ಕಾರು ಪಲ್ಟಿಯಾಗಿರುವ ಘಟನೆ ಮಂಡ್ಯದ ಬೊಂತೆಕೊಪ್ಪಲು ಸಮೀಪ ಶನಿವಾರ ರಾತ್ರಿ ನಡೆದಿದೆ.
ಕಾರ್ಯಕರ್ತರ ಮದುವೆಗೆ ಹೋಗುತ್ತಿದ್ದಾಗ ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿಯಾಗಿದೆ. ಅಪಘಾತದ ರಭಸಕ್ಕೆ ಕಾರು ಭಾಗಶಃ ಜಖಂಗೊಂಡಿದೆ. ಅಪಘಾತದಲ್ಲಿ ಸುರೇಶ್ ಗೌಡರ ಕೈಗೆ ಪೆಟ್ಟು ಬಿದ್ದಿದ್ದು, ಚಾಲಕನಿಗೂ ಗಾಯಗಳಾಗಿವೆ.
ಕಾರು ಪಲ್ಟಿಯಾದ ತಕ್ಷಣ ಸುರೇಶ್ ಗೌಡ ಅವರ ಗನ್‌ಮ್ಯಾನ್ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಸುರೇಶ್ ಗೌಡರನ್ನ ಆಸ್ಪತ್ರೆಗೆ ದಾಖಲಿಸಿದ್ದಾರೆ. ಇಬ್ಬರನ್ನೂ ಮೊದಲು ಮಂಡ್ಯದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಂತರ ಉನ್ನತ ಚಿಕಿತ್ಸೆಗಾಗಿ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ.
ಇದನ್ನೂ ಓದಿ: 16 ವರ್ಷದೊಳಗಿನ ವಿದ್ಯಾರ್ಥಿಗಳಿಗೆ ಮೊಬೈಲ್ ಬ್ಯಾನ್ | ಸರ್ಕಾರದಿಂದ ಮಹತ್ವದ ಚಿಂತನೆ



















