ಕೊಪ್ಪಳ : ರಾಜ್ಯದಲ್ಲಿ ಮತ್ತೊಂದು ಮರ್ಯಾದಾ ಹ*ತ್ಯೆಗೆ ಯತ್ನಿಸಿರುವ ಪ್ರಕರಣ ಬೆಳಕಿಗೆ ಬಂದಿದೆ. ಗರ್ಭಿಣಿ ತಂಗಿಯನ್ನು ಅಣ್ಣನೇ ಕೊಡಲಿಯಿಂದ ಕೊಚ್ಚಿ ಜೀವ ತೆಗೆಯಲು ಯತ್ನಿಸಿರುವ ಘಟನೆ ಕೊಪ್ಪಳ ತಾಲ್ಲೂಕಿನ ಹಂದ್ರಾಳದಲ್ಲಿ ನಡೆದಿದೆ.
4 ತಿಂಗಳ ಗರ್ಭಿಣಿಯಾಗಿದ್ದ ಮೀನಾಕ್ಷಿ ಎಂಬಾಕೆಯನ್ನು ಕೊಡಲಿಯಿಂದ ಕೊಚ್ಚಿ ಕೊಲೆಗೈಯಲು ಅಣ್ಣ ಮಂಜುನಾಥ್ ಯತ್ನಿಸಿದ್ದಾನೆ. ಮೀನಾಕ್ಷಿಯ ಪತಿ ಉದಯನ ಸಹೋದರನ ಮದುವೆಗೆ ದಂಪತಿ ಬಂದಾಗ ಈ ಕೃತ್ಯ ಎಸಗಲಾಗಿದೆ.
ಕೊಪ್ಪಳ ಜಿಲ್ಲೆಯ ಕುಕನೂರು ತಾಲ್ಲೂಕಿನ ಚಿತ್ತಾಪೂರ ನಿವಾಸಿ ಮೀನಾಕ್ಷಿ ಹಾಗೂ ಹಂದ್ರಾಳ ಗ್ರಾಮದ ಉದಯ್ ಪ್ರೀತಿಸಿ 2 ವರ್ಷದ ಹಿಂದೆ ಮದುವೆಯಾಗಿದ್ದರು. ಉದಯ ಎಸ್‌ಟಿ ಸಮುದಾಯದವನಾಗಿದ್ದು, ಕುರುಬರ ಸಮುದಾಯದ ಮೀನಾಕ್ಷಿ ಮನೆಯವರಲ್ಲಿ ಈ ಬಗ್ಗೆ ಸಿಟ್ಟಿತ್ತು.
ನಿನ್ನೆ ಉದಯ್ ಸಹೋದರನ ಮದುವೆಗೆ ಆಗಮಿಸಿದ್ದಾಗ, ಇವರಿಗಾಗಿ ಕಾದು ಕುಳಿತಿದ್ದ ಮೀನಾಕ್ಷಿಯ ಅಣ್ಣ ಮಂಜುನಾಥ್ ಕೊಡಲಿಯಿಂದ ಕೊಚ್ಚಿ ಕೊಲೆಗೈಯ್ಯೋದಕ್ಕೆ ಯತ್ನಿಸಿದ್ದಾನೆ. ಅದೃಷ್ಟವಶಾತ್ ಮೀನಾಕ್ಷಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕೂಡಲೇ ಮಂಜುನಾಥ್‌ನನ್ನು ಅಳವಂಡಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಇದನ್ನೂ ಓದಿ : ಬರೋ ಚುನಾವಣೆಯಲ್ಲಿ ಈ ಭ್ರಷ್ಟ ಸರ್ಕಾರವನ್ನು ಕಿತ್ತೊಗೆಯಬೇಕು | ಯಡಿಯೂರಪ್ಪ



















