ಬೆಂಗಳೂರು : ಸಿಲಿಕಾನ್ ಸಿಟಿಯ ಕಸ ವಿಲೇವಾರಿ ಘಟಕ ಬೆಳ್ಳಳ್ಳಿಯಲ್ಲಿ ಇಂದಿನಿಂದ ಕಸ ವಿಲೇವಾರಿ ಸ್ಥಗಿತಗೊಂಡಿದೆ. ಸ್ಥಳೀಯ ಜನ ಪ್ರತಿನಿಧಿಯಿಂದ ಇಂದಿನಿಂದ ಕಸ ವಿಲೇವಾರಿ ಬಂದ್ ಮಾಡಲಾಗಿದೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.
ಕಳೆದ ಎರಡು ವರ್ಷಗಳಿಂದ ಬೆಳ್ಳಳ್ಳಿಗೆ ಬರಬೇಕಿದ್ದ ವಿಲೇಜ್ ಡೆವಲಪ್ಮೆಂಟ್ ಹಣ ಇದುವರೆಗೆ ಬಿಡುಗಡೆ ಮಾಡಿಲ್ಲ. ಕಸ ವಿಲೇವಾರಿಗೆ ಕೆಲ ನಿಯಮಗಳು. ಒಡಂಬಡಿಕೆಗಳು ಆಗಿದ್ದವು. ಕಸ ವಿಲೇವಾರಿಯಿಂದ ಸ್ಥಳೀಯ ಪ್ರದೇಶದಲ್ಲಿ ಸಾಂಕ್ರಾಮಿಕ ರೋಗಗಳು ಸಾಮಾನ್ಯವಾಗಿ ಬರುತ್ತದೆ. ರಸ್ತೆಗಳು ಹಾಳಗುತ್ತವೆ. ಇವುಗಳ ನಿರ್ವಹಣೆಗೆ ಎಂದು ಘನತ್ಯಾಜ್ಯ ಘಟಕದಿಂದ ಸ್ಥಳೀಯ ಪ್ರದೇಶಕ್ಕೆ ಹೆಚ್ಚುವರಿ ಆಗಿ ಹಣ ಬಿಡುಗಡೆ ಮಾಡಬೇಕಿತ್ತು. ಆದರೆ ಇದುವರೆಗೆ ಹಣ ಬಿಡುಗಡೆ ಮಾಡಿಲ್ಲ. ಹಣ ಬಿಡುಗಡೆ ಮಾಡುವವರೆಗೆ ನಗರದ ಕಸ ಡಂಪ್ ಮಾಡಲು ಬಿಡುವುದಿಲ್ಲ ಎಂದು ಸ್ಥಳೀಯರು ತಿಳಿಸಿದ್ದಾರೆ.
ಇಂದು ಕಸ ವಿಲೇವಾರಿಗೆ ಹೋಗಿದ ಸುಮಾರು 150ಕ್ಕೂ ಹೆಚ್ಚು ಕಸದ ಲಾರಿಗಳು ಸ್ಥಳದಲ್ಲೇ ಬಿಡುಬಿಟ್ಟಿದೆ. ಸ್ಥಳೀಯ ಜನ ಪ್ರತಿನಿಧಿ ಕಸ ಹಾಕಲು ಬಿಡುತ್ತಿಲ್ಲ ಎಂದು ಕಸ ವಿಲೇವಾರಿಗೆ ಹೋಗಿದ್ದ ಲಾರಿ ಡ್ರೈವರ್‌ಗಳು ಮಾಹಿತಿ ನೀಡಿದ್ದಾರೆ. ಇತ್ತ ಘನತ್ಯಾಜ್ಯ ಘಟಕದ ಅಧಿಕಾರಿಗಳ ಮಾಹಿತಿ ಪ್ರಕಾರ ಕಳೆದ ಎರಡು ವರ್ಷಗಳಿಂದ ಸ್ಥಳೀಯ ಪ್ರದೇಶ ಅಭಿವೃದ್ಧಿ ಹಣ ಬಿಡುಗಡೆ ಮಾಡಿಲ್ಲ. ಈ ಹಿನ್ನೆಲೆಯಲ್ಲಿ ಕಸ ವಿಲೇವಾರಿಗೆ ಸ್ಥಳೀಯರು ವಿರೋಧ ವ್ಯಕ್ತಪಡಿಸಿದ್ದಾರೆ. ಇಂದು ಸಂಜೆ ಅಥವಾ ನಾಳೆಯೊಳಗೆ ಸ್ಥಳೀಯರ ಜೊತೆ ಮಾತುಕತೆ ನಡೆಸಿ ಇತ್ಯರ್ಥ ಮಾಡ್ತೀವಿ ಎಂದು ತಿಳಿಸಿದ್ದಾರೆ. ಅದರೆ ಸ್ಥಳೀಯರು ನಮ್ಮ ಪ್ರದೇಶ ಅಭಿವೃದ್ಧಿ ಹಣ ಬಿಡುಗಡೆ ಆಗುವವರೆಗೆ ಯಾವುದೇ ಕಾರಣಕ್ಕೂ ಕಸ ಸುರಿಯಲು ಬಿಡುವುದಿಲ್ಲ ಎಂದು ಹೇಳಿದ್ದಾರೆ.
ಇನ್ನೂ ಘನತ್ಯಾಜ್ಯ ಘಟಕದ ಅಧಿಕಾರಿಗಳು ಕಸದ ಲಾರಿಗಳು ವಾಪಸು ಬರುವವರೆಗೂ ನಗರದಲ್ಲಿ ಕಸ ವಿಲೇವಾರಿಗೆ ಸಾಧ್ಯವಿಲ್ಲ. ಕಸ ವಿಲೇವಾರಿ ಮಾಡಬೇಕಾದರೆ ಬೆಳ್ಳಳ್ಳಿಗೆ ಹೋಗಿರುವ ಕಸದ ಲಾರಿಗಳು ವಾಪಸ್ಸು ಬರಬೇಕು. ಅಲ್ಲಿಯವರೆಗೆ ಕಸ ಸಂಗ್ರಹಿಸಿ ಇಡುವುದಕ್ಕೆ ಜಾಗ ಇಲ್ಲ. ಸರ್ಕಾರದ ಜೊತೆ ಮಾತುಕತೆ ನಡೆಸಿ ಬೇಗ ಇತ್ಯರ್ಥ ಮಾಡುತತ್ತೀವಿ ಎಂದು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ : ಬಡವರಿಗೆ ಮನೆ, ಭೂಮಿ ಕೊಡದೆ ಸರ್ಕಾರವೇ ಕಬಳಿಸುತ್ತಿದೆ | ಛಲವಾದಿ ನಾರಾಯಣಸ್ವಾಮಿ


















