ಬೆಂಗಳೂರು: ರಾಜ್ಯ ಕಾಂಗ್ರೆಸ್‌ನಲ್ಲಿ ನಾಯಕತ್ವ ಬದಲಾವಣೆ ವಿಚಾರ ದೊಡ್ಡ ಮಟ್ಟದಲ್ಲಿ ಚರ್ಚೆ ಆಗುತ್ತಿದೆ. ಯತೀಂದ್ರ ಹೇಳಿಕೆ, ಡಿಕೆಶಿ ದೆಹಲಿ ಪ್ರವಾಸದ ಬಳಿಕ ಕುರ್ಚಿ ಸಂಘರ್ಷ ಮತ್ತಷ್ಟು ಮಹತ್ವ ಪಡೆದುಕೊಂಡಿದೆ.
ಈ ಬೆನ್ನಲ್ಲೇ ಶಾಸಕರ ಫಾರಿನ್ ಟೂರ್ ಸಂಚಲನ ಸೃಷ್ಟಿಸಿದೆ. ಕಾಂಗ್ರೆಸ್ ವರಿಷ್ಠರಿಂದಲೂ ಶಾಸಕರ ವಿದೇಶಿ ಪ್ರವಾಸಕ್ಕೆ ಗ್ರೀನ್ ಸಿಗ್ನಲ್ ಸಿಕ್ಕಿರುವ ಹಿನ್ನೆಲೆ ಕೈ ಶಾಸಕರು ವಿದೇಶಿ ಪ್ರವಾಸಕ್ಕೆ ಮುಂದಾಗಿದ್ದಾರೆ. ಶಾಸಕರು ಹಾಗೂ ವಿಧಾನ ಪರಿಷತ್ ಸದಸ್ಯರು ಸೇರಿ ಸುಮಾರು 30 ಜನ ಸದಸ್ಯರು ಆಸ್ಟ್ರೇಲಿಯಾ ಹಾಗೂ ನ್ಯೂಜಿಲೆಂಡ್‌ಗೆ ಪ್ರವಾಸಕ್ಕೆ ತೆರಳುವ ಸಿದ್ಧತೆ ಮಾಡಿಕೊಂಡಿದ್ದಾರೆ.
ಫಾರಿನ್ ಟೂರ್ ಟೀಂನಲ್ಲಿ ಯಾರಿದ್ದಾರೆ?
ಶಾಸಕರಾದ ಪುಟ್ಟರಂಗಶೆಟ್ಟಿ, ರಾಘವೇಂದ್ರ ಹಿಟ್ನಾಳ್, ಬಿ.ಎಂ ನಾಗರಾಜು, ಯಶವಂತರಾಯಗೌಡ ಪಾಟೀಲ್, ಅನಿಲ್ ಚಿಕ್ಕಮಾಧು, ಜೆ.ಟಿ ಪಾಟೀಲ್, ಅಲ್ಲಮಪ್ರಭು ಪಾಟೀಲ್, ಬನವನಗೌಡ ದದ್ದಲ್, ಎ.ಆರ್ ಕೃಷ್ಣಮೂರ್ತಿ, ತುರವೀಹಾಳ್, ಬಿ.ಬಿ ಚಿಮ್ಮನಕಟ್ಟಿ, ಬಿ.ಆರ್ ಪಾಟೀಲ್, ರಘು ಮೂರ್ತಿ ಹಾಗೂ ಪರಿಷತ್ ಸದಸ್ಯ ಶಿವಕುಮಾರ್ ಸೇರಿ ಹಲವರು ವಿದೇಶಿ ಪ್ರವಾಸದ ತಂಡದಲ್ಲಿದ್ದಾರೆ.
ಇದೇ ಫೆ. 17 ರಂದು ವಿದೇಶಿ ಪ್ರವಾಸಕ್ಕೆ ಸಿದ್ಧತೆ ಮಾಡಿಕೊಂಡಿದ್ದಾರೆ. ಈ ಮೊದಲು ಪ್ರವಾಸ ಕೈಗೊಳ್ಳುವ ಶಾಸಕರ ಸಂಖ್ಯೆ 35 ಕ್ಕೆ ಇಳಿಕೆ ಮಾಡಲಾಗಿತ್ತು. ಇದೀಗ 20ಕ್ಕೆ ಇಳಿದಿದೆ, 6-7 ಪರಿಷತ್ ಸದಸ್ಯರು ಪ್ರವಾಸಕ್ಕೆ ಮುಂದಾಗಿದ್ದಾರೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ : ಕಾಂಗ್ರೆಸ್‌ನ್ನ ಭಾರತ ಧೂಳಿಪಟ ಮಾಡುತ್ತೆ | ಎಂ.ಪಿ.ರೇಣುಕಾಚಾರ್ಯ


















