ತುಮಕೂರು;ಆಗ್ನೇಯ ಪದವೀಧರರ ಕ್ಷೇತ್ರದ ಚುನಾವಣಾ ಪ್ರಚಾರ ಸಭೆ ಬಳಿಕ ಡಿಸಿಎಂ ಜಿ.ಪರಮೇಶ್ವರ್ ಮಾತನಾಡಿದ್ದಾರೆ. “ಪ್ರಚಾರ ಹೆಚ್ಚಿನ ಮಟ್ಟದಲ್ಲಿ ಆಗಿದ್ದು, ಇದು ಫಿನಿಷಿಂಗ್ ಟಚ್ ಆಗಿದೆ. ಚುನಾವಣೆಗೆ ಇನ್ನೂ ನಾಲ್ಕೈದು ದಿನ ಬಾಕಿ ಇದ್ದು, ಮತದಾರರನ್ನು ತಲುಪಲು ಸ್ಟ್ರ್ಯಾಟಜಿ ಮಾಡಬೇಕಿದೆ. ಯಾರಿಗೆ ಮತ ಹಾಕಬೇಕು ಎಂದು ಮತದಾರರೇ ನಿರ್ಧರಿಸಲಿದ್ದು, ನಮ್ಮ ಪರ ನಿಲ್ಲುವ ವಿಶ್ವಾಸವಿದೆ” ಎಂದಿದ್ದಾರೆ.
ರಾಜ್ಯದಲ್ಲಿ ಒಪಿಎಸ್ ಜಾರಿ ಕುರಿತು ಪ್ರತಿಕ್ರಿಯಿಸಿ, “ಇದನ್ನು ಹಂತ ಹಂತವಾಗಿ ವರ್ಕೌಟ್ ಮಾಡಲಾಗುತ್ತಿದ್ದು, ಒಂದೇ ಸಾರಿ ಮಾಡಲು ಆಗುವುದಿಲ್ಲ. ಒಂದೇ ಸಾರಿ 35 ಸಾವಿರ ಕೋಟಿ ರೂ. ಬರುವುದಿಲ್ಲ” ಎಂದು ತಿಳಿಸಿದ್ದಾರೆ.



















