ಬೆಂಗಳೂರು : ಷೇರು ಮಾರುಕಟ್ಟೆಯಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಯಾಗುತ್ತಿರುವ ಹೊತ್ತಿನಲ್ಲಿ, ಹೂಡಿಕೆದಾರರು ನಷ್ಟ ಅನುಭವಿಸುತ್ತಿರುವ ಹೊತ್ತಿನಲ್ಲಿ ಪೋಸ್ಟ್ ಆಫೀಸಿನ ಸುರಕ್ಷಿತ ಹೂಡಿಕೆ ಯೋಜನೆಗಳೇ ಬೆಸ್ಟ್ ಎನ್ನುವವರ ಸಂಖ್ಯೆ ದೊಡ್ಡದಿದೆ. ಹಾಗೆಯೇ, ಇಂತಹ ಸುರಕ್ಷಿತ ಯೋಜನೆಗಳಲ್ಲೂ ಹೆಚ್ಚಿನ ಜನ ಹೂಡಿಕೆ ಮಾಡುತ್ತಾರೆ. ಹೀಗೆ, ಪೋಸ್ಟ್ ಆಫೀಸಿನ ಸುರಕ್ಷಿತ ಯೋಜನೆಗಳಲ್ಲಿ ಹಿರಿಯ ನಾಗರಿಕರ ಉಳಿತಾಯ ಯೋಜನೆ (Post Office Senior Citizen Savings Scheme-SCSS) ಉತ್ತಮವಾಗಿದೆ.
ಹೌದು, ಹಿರಿಯ ನಾಗರಿಕರ ಉಳಿತಾಯ ಯೋಜನೆಯು ಹಿರಿಯ ನಾಗರಿಕರಿಗಾಗಿ ರೂಪಿಸಲಾಗಿದೆ. 60 ವರ್ಷ ಅಥವಾ ಅದಕ್ಕಿಂತ ಮೇಲ್ಪಟ್ಟವರು ಇದರಲ್ಲಿ ಹೂಡಿಕೆ ಮಾಡಬಹುದಾಗಿದೆ. ನೀವು ಈಗಷ್ಟೇ ನಿವೃತ್ತರಾಗಿದ್ದು, ಪಿಎಫ್ ಸೇರಿ ಯಾವುದೇ ಮೊತ್ತವನ್ನು ಹಿರಿಯ ನಾಗರಿಕರ ಉಳಿತಾಯ ಯೋಜನೆಯಲ್ಲಿ ಹೂಡಿಕೆ ಮಾಡಬಹುದಾಗಿದೆ. ಈ ಯೋಜನೆಯಲ್ಲಿ ವರ್ಷಕ್ಕೆ ಶೇ.8.2ರಷ್ಟು ಬಡ್ಡಿಯ ಲಾಭ ಸಿಗುತ್ತದೆ. ಇದು ಯಾವುದೇ ಬ್ಯಾಂಕ್ ನ ಎಫ್ ಡಿ ಯೋಜನೆಗಿಂತ ಹೆಚ್ಚಿನ ಬಡ್ಡಿ ನೀಡುತ್ತದೆ.
ತಿಂಗಳಿಗೆ 17 ಸಾವಿರ ರೂ. ಆದಾಯ ಹೇಗೆ?
ಹಿರಿಯ ನಾಗರಿಕರ ಉಳಿತಾಯ ಯೋಜನೆಯಯಲ್ಲಿ ನೀವು ಕನಿಷ್ಠ 1 ಸಾವಿರ ರೂಪಾಯಿಯಿಂದ 30 ಲಕ್ಷ ರೂಪಾಯಿ ಹೂಡಿಕೆ ಮಾಡಬಹುದಾಗಿದೆ. ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 80ಸಿ ಅನ್ವಯ 1.5 ಲಕ್ಷ ರೂಪಾಯಿವರೆಗೆ ತೆರಿಗೆ ವಿನಾಯಿತಿ ಕೂಡ ಸಿಗುತ್ತದೆ. ಇದು ಕೇಂದ್ರ ಸರ್ಕಾರದ ಹೂಡಿಕೆ ಯೋಜನೆಯಾಗಿರುವ ಕಾರಣ ಸುರಕ್ಷತೆಯೂ ಇರುತ್ತದೆ.
ನೀವು ಹಿರಿಯ ನಾಗರಿಕರ ಉಳಿತಾಯ ಯೋಜನೆಯಲ್ಲಿ 25 ಲಕ್ಷ ರೂಪಾಯಿಯನ್ನು 5 ವರ್ಷಗಳವರೆಗೆ ಹೂಡಿಕೆ ಮಾಡಿದರೆ, ನಿಮಗೆ ಮಾಸಿಕ 17,083 ರೂಪಾಯಿ ಬಡ್ಡಿ ಆದಾಯವೇ ಸಿಗುತ್ತದೆ. ಅಂದರೆ, ನಿಮಗೆ ವರ್ಷಕ್ಕೆ 2,05,000 ರೂಪಾಯಿ ಬಡ್ಡಿ ಆದಾಯವೇ ಸಿಗುತ್ತದೆ. ನಿವೃತ್ತಿಯ ಜೀವನವನ್ನು ಯಾರ ಮೇಲೂ ಅವಲಂಬನೆ ಇಲ್ಲದೆ ಕಳೆಯಲು ಇದು ಒಳ್ಳೆಯ ಯೋಜನೆಯಾಗಿದೆ.
ಗಮನಿಸಿ
ಪೋಸ್ಟ್ ಆಫೀಸಿನ ಹಿರಿಯ ನಾಗರಿಕರ ಉಳಿತಾಯ ಯೋಜನೆಯ ಕುರಿತು ಮಾಹಿತಿ ನೀಡುವ ದೃಷ್ಟಿಯಿಂದ ಮಾತ್ರ ಲೇಖನ ಪ್ರಕಟಿಸಲಾಗಿದೆ. ಇದು ಹೂಡಿಕೆ ಮಾಡಲು ಶಿಫಾರಸು ಅಲ್ಲ. ಯಾವುದೇ ಮಾದರಿಯ ಹೂಡಿಕೆಗೂ ಮುನ್ನ ತಜ್ಞರ ಸಲಹೆ-ಸೂಚನೆ ಪಡೆಯುವುದು ಅತ್ಯವಶ್ಯಕವಾಗಿದೆ.
ಇದನ್ನೂ ಓದಿ : ಮಹಾಶಿವರಾತ್ರಿ ದಿನ ಮಾದಪ್ಪನ ಮೊರೆ ಹೋದ ಡಿಕೆಶಿ ಪತ್ನಿ!



















