ಬೆಂಗಳೂರು | ಹೊಂಬಾಳೆ ಫಿಲ್ಮ್ಸ್ ಬಹುನಿರೀಕ್ಷಿತ ಭಕ್ತಿಗೀತೆ ‘ಶಿವ ಶಂಭೋ ಸ್ವಯಂಭೋ’ ಅನ್ನು ನಾಳೆ, ಫೆಬ್ರವರಿ 15ರಂದು ಮಹಾಶಿವರಾತ್ರಿಯ ಪವಿತ್ರ ಸಂದರ್ಭದಲ್ಲಿ ಅದ್ಧೂರಿಯಾಗಿ ಬಿಡುಗಡೆ ಮಾಡಲು ಸಜ್ಜಾಗಿದೆ.
ಈ ಹಾಡು ಬಿಡುಗಡೆಯಾಗುವ ಮೊದಲೇ ಡಿಜಿಟಲ್ ಲೋಕದಲ್ಲಿ ಭಾರಿ ಸಂಚಲನ ಮೂಡಿಸಿದೆ. ಈಗಾಗಲೇ ಪ್ರೋಮೋ 6 ಮಿಲಿಯನ್‌ಗೂ ಹೆಚ್ಚು ವೀಕ್ಷಣೆಗಳನ್ನು ಕಂಡಿದ್ದು, ಅದ್ಭುತ ಪ್ರತಿಕ್ರಿಯೆ ವ್ಯಕ್ತವಾಗಿದೆ. ವಿಶೇಷವೆಂದರೆ, ಈ ಹಾಡಿನ ಪ್ರೋಮೋ ಆಡಿಯೋ ಇನ್‌ಸ್ಟಾಗ್ರಾಮ್‌ನಲ್ಲಿ ಭಾರಿ ಟ್ರೆಂಡ್ ಆಗುತ್ತಿದೆ. ಸಾವಿರಾರು ಮಂದಿ ಈ ಮಂತ್ರಮುಗ್ಧಗೊಳಿಸುವ ಧ್ವನಿಯನ್ನು ಬಳಸಿ ರೀಲ್ಸ್‌ಗಳನ್ನು ಮಾಡುತ್ತಿದ್ದು, ಈ ಹಬ್ಬದ ಸೀಸನ್‌ನ ಅತ್ಯಂತ ಜನಪ್ರಿಯ ಭಕ್ತಿಗೀತೆಯಾಗಿ ಹೊರಹೊಮ್ಮಿದೆ.
ತೀವ್ರವಾದ ಆಧ್ಯಾತ್ಮಿಕ ಶಕ್ತಿ ಹಾಗೂ ಕಂಪನವನ್ನು ಹೊಂದಿರುವ ಈ ಹಾಡಿನ ಸಂಗೀತವು ದೇಶಾದ್ಯಂತ ಕೇಳುಗರ ಮನಗೆದ್ದಿದೆ. ಕೇವಲ ಹಿನ್ನೆಲೆ ಸಂಗೀತವೇ ಪ್ರೇಕ್ಷಕರಲ್ಲಿ ರೋಮಾಂಚನ ಉಂಟುಮಾಡುತ್ತಿದ್ದು, ಪೂರ್ಣ ಪ್ರಮಾಣದ ಹಾಡನ್ನು ಕೇಳಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.
ಭಕ್ತಿ, ಶಕ್ತಿ ಮತ್ತು ಆಧ್ಯಾತ್ಮಿಕ ಜಾಗೃತಿಯ ಸಂಕೇತವಾದ ಮಹಾಶಿವರಾತ್ರಿಯಂದೇ ಈ ಹಾಡು ಬಿಡುಗಡೆಯಾಗುತ್ತಿರುವುದು ವಿಶೇಷ. ‘ಶಿವ ಶಂಭೋ ಸ್ವಯಂಭೋ’ ಕೇವಲ ಹಾಡಾಗಿ ಉಳಿಯದೆ, ಈ ವರ್ಷದ ಶ್ರೇಷ್ಠ ಭಕ್ತಿಗೀತೆಯಾಗುವ (Devotional Anthem) ಎಲ್ಲಾ ಲಕ್ಷಣಗಳನ್ನು ಹೊಂದಿದೆ.
‘ಶಿವ ಶಂಭೋ ಸ್ವಯಂಭೋ’ ನಾಳೆ, ಫೆಬ್ರವರಿ 15ರಂದು ಎಲ್ಲಾ ಪ್ರಮುಖ ಪ್ಲಾಟ್‌ಫಾರ್ಮ್‌ಗಳಲ್ಲಿ ಬಿಡುಗಡೆಯಾಗಲಿದೆ.
ಇದನ್ನೂ ಓದಿ : ಎಂಗೇಜ್ ಆಗಿಬಿಟ್ರಾ ‘ಡಿಂಪಲ್ ಕ್ವೀನ್’? ಪ್ರೇಮಿಗಳ ದಿನ ರಚಿತ ರಾಮ್ ‘I love you’ ಹೇಳಿದ್ಯಾರಿಗೆ?



















