ಬೆಂಗಳೂರು | ವಿದ್ಯೆಗೆ ಮಹತ್ವ ಕೊಡಿ, ವಿದ್ಯಾಭ್ಯಾಸದ ಕಡೆ ಗಮನವಿಡಿ, ಉನ್ನತ ಸಾಧನೆ ಮಾಡಿ ಎಂದು ನಿರ್ಮಾಪಕಿ ಅಶ್ವಿನಿ ಪುನೀತ್ ರಾಜಕುಮಾರ್ ಹೇಳಿದರು.
ಬೆಂಗಳೂರಿನಲ್ಲಿರುವ ಅಶ್ವಿನಿ ಪುನೀತ್ ರಾಜಕುಮಾರ್ ಅವರ ಕಚೇರಿಯಲ್ಲಿ ಶ್ರೀ ನಾರಾಯಣಗುರು ಸೇವಾ ಚಾರಿಟಬಲ್ ಟ್ರಸ್ಟ್ ವತಿಯಿಂದ ಹಮ್ಮಿಕೊಂಡಿದ್ದ ‘ಪುನೀತ ಪುಸ್ತಕ’ ಯೋಜನೆಯ ಅನ್ವಯ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಪ್ರಶ್ನೋತ್ತರ ಕೋಶಗಳನ್ನು ವಿತರಿಸಿದ ಬಳಿಕ ಮಾತನಾಡಿದ ಅವರು, ನಾರಾಯಣ ಗುರು ಸೇವಾ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಹಮ್ಮಿಕೊಂಡಿರುವ ‘ಪುನೀತ ಪುಸ್ತಕ’ ಯೋಜನೆ ನಿಜಕ್ಕೂ ವಿದ್ಯಾರ್ಥಿಗಳಿಗೆ ಅವಶ್ಯಕವಾದ ಯೋಜನೆಯಾಗಿದ್ದು, ಈ ಮೂಲಕ ವಿದ್ಯಾರ್ಥಿಗಳ ಭವಿಷ್ಯಕ್ಕೆ ಭದ್ರ ಬುನಾದಿಯನ್ನು ಹಾಕುತ್ತಿರುವುದು ಸಂತಸ ತಂದಿದೆ ಎಂದು ಹೇಳಿದರು.

ಮುಂದುವರೆದು, ಈ ಯೋಜನೆಯನ್ನು ಪುನೀತ್ ಅವರ ಹೆಸರಿನಲ್ಲಿ ಮಾಡುತ್ತಿರುವುದು ನಮ್ಮ ಹೆಮ್ಮೆ. ವಿದ್ಯಾರ್ಥಿಗಳು ಇದರ ಸದುಪಯೋಗವನ್ನು ಪಡೆದುಕೊಂಡು ಉನ್ನತ ವ್ಯಾಸಂಗ ಮಾಡಿ ಸಾಧನೆ ಮಾಡುವಂತಾಗಬೇಕು ಎಂದು ಅವರು ತಿಳಿಸಿದರು. ಹಾಗೆಯೇ ಕಚೇರಿಯಲ್ಲಿ ಹಲವು ವಿದ್ಯಾರ್ಥಿಗಳಿಗೆ ‘ಪುನೀತ ಪುಸ್ತಕ’ ಯೋಜನೆಯ ಅನ್ವಯ ಪುಸ್ತಕ ವಿತರಣೆ ಮಾಡಿದರು.

ಶ್ರೀ ನಾರಾಯಣಗುರು ಸೇವಾ ಚಾರಿಟಬಲ್ ಟ್ರಸ್ಟ್‌ನ ಸಂಸ್ಥಾಪಕ ಅಧ್ಯಕ್ಷರಾದ ಮಾಸ್ತಿ ಟಿಸಿ ರಮೇಶ್ ಮಾತನಾಡಿ, ನಮ್ಮ ಬಾಲ್ಯದಲ್ಲಿ ವಿದ್ಯಾಭ್ಯಾಸಕ್ಕೆ ತೊಂದರೆಯಿತ್ತು, ಈಗ ದುಡಿಯುತ್ತಿರುವ ನಾನು ವಿದ್ಯೆಗೆ ಏನನ್ನಾದರೂ ನೀಡಬೇಕು ಎಂಬ ಆಶಯದಿಂದ ಈ ಯೋಜನೆಯನ್ನು ಕೈಗೆತ್ತಿಕೊಂಡಿದ್ದು, ಆ ಮೂಲಕ ಪುನೀತ್ ರಾಜಕುಮಾರ್‌ರವರ ಸ್ಮರಣೆ ಮಾಡಬೇಕೆಂದು ‘ಪುನೀತ ಪುಸ್ತಕ’ ಯೋಜನೆ ಎಂದು ಹೆಸರಿಟ್ಟಿದ್ದೇನೆ ಎಂದರು.
ಕರ್ನಾಟಕ ರಾಜ್ಯ ಆರ್ಯ ಈಡಿಗ ಸಂಘದ ಕಾರ್ಯಕಾರಿ ಸಮಿತಿ ಸದಸ್ಯರು ಹಾಗೂ ಉದಾ ಸಹಕಾರಿ ಬ್ಯಾಂಕ್‌ನ ಉಪಾಧ್ಯಕ್ಷರಾದ ಟಿ.ವಾಸನ್‌ರವರು ಮಾತನಾಡಿ, ನಿಜಕ್ಕೂ ನಾರಾಯಣಗುರುಗಳ ಮಾತಿನಂತೆ ವಿದ್ಯೆಯಿಂದ ಸ್ವತಂತ್ರರಾಗಿರಿ ಸಂಘಟನೆಯಿಂದ ಬಲಯುತರಾಗಿರಿ ಎಂಬುದು ನಮ್ಮ ಧ್ಯೇಯ ವಾಕ್ಯವಾಗಬೇಕು ಎಂದರು.
ಈ ಸಂದರ್ಭದಲ್ಲಿ ರಂಗ ವಿಜಯಾ ಟ್ರಸ್ಟ್ ನ ಸಂಸ್ಥಾಪಕ ಅಧ್ಯಕ್ಷರಾದ ಮಾಲೂರು ವಿಜಿ, ನಾರಾಯಣ ಗುರು ಮಹಾ ಸಂಸ್ಥಾನದ ಸಂಸ್ಥಾಪಕ ಅಂಬರೀಶ್, ವ್ಯವಸ್ಥಾಪಕ ಪಿ.ಶ್ರೀನಿವಾಸ್, ಮಂಜುನಾಥ್, ಆರ್ ರಘು , ಕೆ. ರಮೇಶ್ ಬಾಬು, ಕಿರುತರೆ ನಟಿ ಗೀತಾ ರಾಘವೇಂದ್ರ, ಚೈತ್ರ ಲಕ್ಷ್ಮಣ್ ಮೂರ್ತಿ ಶಶಿಕಲಾ ಹರೀಶ್ ಚಿಕ್ಕ ತಿರುಪತಿ, ಹಸಾಡಂಡಳ್ಳಿ ವಿಜಯ್ ಕುಮಾರ್, ಸುನೀಲ್ ದೊಡ್ಡ ಮನೆ, ಕೃಷ್ಣಮೂರ್ತಿ ಚಿಕ್ಕ ತಿರುಪತಿ ಮುಂತಾದವರು ಉಪಸ್ಥಿತರಿದ್ದರು.
ಇದನ್ನೂ ಓದಿ : ಬೈರತಿ ಬಸವರಾಜ್ಗೆ ಬಿಗ್ ಶಾಕ್ | ಸುಪ್ರೀಂ ಕೋರ್ಟ್‌ನಲ್ಲೂ ಜಾಮೀನು ಅರ್ಜಿ ವಜಾ!



















