ಕಲಬುರಗಿ: ಜಮೀನು ವಿಚಾರವಾಗಿ ದಾಯಾದಿಗಳ ನಡುವೆ ನಡೆದ ಜಗಳ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಕಲಬುರಗಿ ಜಿಲ್ಲೆಯ ಸೇಡಂ ತಾಲೂಕಿನ ಹಂಗನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಬಸವರಾಜ್ ತಳವಾರ (34) ಕೊಲೆಯಾದ ವ್ಯಕ್ತಿ. ನಿನ್ನೆ ತಡರಾತ್ರಿ 11-30ರ ಸುಮಾರಿಗೆ ಸಹೋದರ ಸಂಬಂಧಿಗಳಾದ ಬಸವರಾಜ್ ತಳವಾರ್ ಮತ್ತು ಘೂಳೇಶ್ ನಡುವೆ ಜಮೀನು ವಿಷಯವಾಗಿ ಗಲಾಟೆಯಾಗಿತ್ತು. ಈ ಗಲಾಟೆ ವಿಕೋಪಕ್ಕೆ ತಿರುಗಿ ಘೂಳೇಶ್, ಬಸವರಾಜ್‌ಗೆ ಚಾಕುವಿನಿಂದ ಇರಿದಿದ್ದಾನೆ ಎನ್ನಲಾಗುತ್ತಿದೆ.
ಈ ಘಟನೆಯಿಂದ ಗಂಭೀರವಾಗಿ ಗಾಯಗೊಂಡ ಬಸವರಾಜ್‌ನನ್ನು ಕೂಡಲೇ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದು, ಆದರೆ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ. ಈ ಘಟನಾ ಸಂಬಂಧ ಸೇಡಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಸಿ.ಜೆ ರಾಯ್ ಅವರೇ ಶೂಟ್ ಮಾಡಿಕೊಂಡ್ರಾ, ಬೇರೆ ಯಾರಾದ್ರೂ ಶೂಟ್ ಮಾಡಿದ್ರಾ? | ಪ್ರದೀಪ್ ಈಶ್ವರ್ ಅನುಮಾನ!



















