ಮಂಡ್ಯ : ಜಿಲ್ಲೆಯ ಮದ್ದೂರಿನಲ್ಲಿ ಮತ್ತೆ ಚಿರತೆ ಪ್ರತ್ಯಕ್ಷವಾಗಿದ್ದು, ಕಾರಿನಲ್ಲಿ ಹೋಗುತ್ತಿದ್ದವರ ದಾರಿಗೆ ಎದುರಾಗಿ ಚಿರತೆ ರಸ್ತೆದಾಟಿರುವ ಘಟನೆ ನಡೆದಿದೆ.
ಚಿರತೆಯು ಮದ್ದೂರಿನ ಸುಣ್ಣದ ದೊಡ್ಡಿ ಗೇಟ್ ಬಳಿ ಪ್ರತ್ಯಕ್ಷವಾಗಿದೆ. ರಸ್ತೆ ಬದಿಯ ಪೊದೆಯೊಂದರಿಂದ ಬಂದು ಹಾದು ಹೋಗಿದ್ದು, ಈ ದೃಶ್ಯವನ್ನು ಕಾರಿನಲ್ಲಿದ್ದವರು ತಮ್ಮ ಮೊಬೈಲ್ ಫೋನ್‌ನಲ್ಲಿ ಸೆರೆ ಹಿಡಿಯಲಾಗಿದೆ.
ಸದ್ಯ ರಸ್ತೆಯಲ್ಲಿ ಓಡಾಡಲು ಸಾರ್ವಜನಿಕರು ಭಯಭೀತರಾಗಿದ್ದು, ಚಿರತೆ ಸೆರೆ ಹಿಡಿಯುವಂತೆ ಸಾರ್ವಜನಿಕರು ಅರಣ್ಯ ಇಲಾಖೆಗೆ ಒತ್ತಾಯಿಸುತ್ತಿದ್ದಾರೆ.
ಇದನ್ನೂ ಓದಿ : ಬೆಳಗಾವಿಯಲ್ಲಿ ನದಿಗೆ ಹಾರಿ ಪ್ರೇಮಿಗಳು ಆತ್ಮಹತ್ಯೆ



















