ನ್ಯೂಸ್ ಬೀಟ್

ನಾಗರಾಜ್ ಅರೆಹೊಳೆ

ಪ್ರಧಾನ ಸಂಪಾದಕರು

newsbeatkarnataka@gmail.com

  • ಬ್ಲಾಗ್
  • ಜಿಲ್ಲಾ ಸುದ್ದಿ
    • ಬೆಂಗಳೂರು ನಗರ
    • ಬೆಂಗಳೂರು ಗ್ರಾಮಾಂತರ
    • ಬೆಳಗಾವಿ
    • ಬೀದರ್
    • ಬಾಗಲಕೋಟೆ
    • ಬಳ್ಳಾರಿ
    • ಚಾಮರಾಜನಗರ
    • ದಕ್ಷಿಣ ಕನ್ನಡ
    • ಚಿಕ್ಕಬಳ್ಳಾಪುರ
    • ಮಂಗಳೂರು
    • ಧಾರವಾಡ
    • ದಾವಣಗೆರೆ
    • ಚಿತ್ರದುರ್ಗ
    • ಗದಗ
    • ಹಾಸನ
    • ವಿಜಯಪುರ
    • ಹಾವೇರಿ
    • ಕಲಬುರ್ಗಿ
    • ಕೋಲಾರ
    • ರಾಯಚೂರು
    • ಕೊಡಗು
    • ರಾಯಚೂರು
    • ರಾಮನಗರ
    • ಕೊಪ್ಪಳ
    • ತುಮಕೂರು
    • ಮೈಸೂರು
    • ಮಂಡ್ಯ
    • ಉಡುಪಿ
    • ಚಿಕ್ಕಮಗಳೂರು
    • ಉತ್ತರ ಕನ್ನಡ
    • ವಿಜಯನಗರ
    • ಶಿವಮೊಗ್ಗ
    • ಯಾದಗಿರಿ
  • ರಾಜ್ಯ
  • ರಾಜಕೀಯ
  • ದೇಶ
  • ವಿದೇಶ
  • ಕ್ರೀಡೆ
  • ಸಿನಿಮಾ-ಮನರಂಜನೆ
  • ವಿಶೇಷ ಅಂಕಣ
  • ಧರ್ಮ-ಸನಾತನ
  • ಅಪರಾಧ
  • ಆರೋಗ್ಯ-ಆಹಾರ
  • ತಂತ್ರಜ್ಞಾನ
  • ಕೃಷಿ-ಪರಿಸರ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ವಾಣಿಜ್ಯ-ವ್ಯಾಪಾರ
  • ಜ್ಯೋತಿಷ್ಯ
  • ಪುರಾಣ
  • ಇತಿಹಾಸ
No Result
View All Result
Karnataka News Beat
  • ಬ್ಲಾಗ್
  • ಜಿಲ್ಲಾ ಸುದ್ದಿ
    • ಬೆಂಗಳೂರು ನಗರ
    • ಬೆಂಗಳೂರು ಗ್ರಾಮಾಂತರ
    • ಬೆಳಗಾವಿ
    • ಬೀದರ್
    • ಬಾಗಲಕೋಟೆ
    • ಬಳ್ಳಾರಿ
    • ಚಾಮರಾಜನಗರ
    • ದಕ್ಷಿಣ ಕನ್ನಡ
    • ಚಿಕ್ಕಬಳ್ಳಾಪುರ
    • ಮಂಗಳೂರು
    • ಧಾರವಾಡ
    • ದಾವಣಗೆರೆ
    • ಚಿತ್ರದುರ್ಗ
    • ಗದಗ
    • ಹಾಸನ
    • ವಿಜಯಪುರ
    • ಹಾವೇರಿ
    • ಕಲಬುರ್ಗಿ
    • ಕೋಲಾರ
    • ರಾಯಚೂರು
    • ಕೊಡಗು
    • ರಾಯಚೂರು
    • ರಾಮನಗರ
    • ಕೊಪ್ಪಳ
    • ತುಮಕೂರು
    • ಮೈಸೂರು
    • ಮಂಡ್ಯ
    • ಉಡುಪಿ
    • ಚಿಕ್ಕಮಗಳೂರು
    • ಉತ್ತರ ಕನ್ನಡ
    • ವಿಜಯನಗರ
    • ಶಿವಮೊಗ್ಗ
    • ಯಾದಗಿರಿ
  • ರಾಜ್ಯ
  • ರಾಜಕೀಯ
  • ದೇಶ
  • ವಿದೇಶ
  • ಕ್ರೀಡೆ
  • ಸಿನಿಮಾ-ಮನರಂಜನೆ
  • ವಿಶೇಷ ಅಂಕಣ
  • ಧರ್ಮ-ಸನಾತನ
  • ಅಪರಾಧ
  • ಆರೋಗ್ಯ-ಆಹಾರ
  • ತಂತ್ರಜ್ಞಾನ
  • ಕೃಷಿ-ಪರಿಸರ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ವಾಣಿಜ್ಯ-ವ್ಯಾಪಾರ
  • ಜ್ಯೋತಿಷ್ಯ
  • ಪುರಾಣ
  • ಇತಿಹಾಸ
No Result
View All Result
ನ್ಯೂಸ್ ಬೀಟ್

ನಾಗರಾಜ್ ಅರೆಹೊಳೆ
ಪ್ರಧಾನ ಸಂಪಾದಕರು

No Result
View All Result
Home ಸಿನಿಮಾ-ಮನರಂಜನೆ

‘ಅಮೃತ ಅಂಜನ್’ : ಕಾಮೆಡಿ ಉತ್ಸವ..!

January 26, 2026
Share on WhatsappShare on FacebookShare on Twitter

ಬೆಂಗಳೂರು : ಕಿರುಚಿತ್ರದ ಮೂಲಕ ಸಂಪೂರ್ಣ ಮನೋರಂಜನೆ ನೀಡಿದಂತಹ “ಅಮೃತಾಂಜನ್” ಪ್ರೇಕ್ಷಕರ ಮನಸನ್ನ ಗೆದ್ದು ಮಿಲಿಯನ್ಸ್ ಗಟ್ಟಲೆ ವ್ಯೂಸನ್ನು ಪಡೆದುಕೊಂಡಿತ್ತು. ಆ ನಿಟ್ಟಿನಲ್ಲಿ ಯುವ ಪ್ರತಿಭೆಗಳ ತಂಡ ಸೇರಿಕೊಂಡು “ಅಮೃತ ಅಂಜನ್” ಎಂಬ ಸಿನಿಮಾ ಮೂಲಕ ಪ್ರೇಕ್ಷಕರ ಮುಂದೆ ಬರಲು ಸಿದ್ಧರಾಗಿದ್ದಾರೆ.

ಈ ಚಿತ್ರದ ಟ್ರೈಲರ್ ಬಿಡುಗಡೆ ಕಾರ್ಯಕ್ರಮವನ್ನು ನಗರದ ಜಿ ಟಿ ಮಾಲ್‌ನಲ್ಲಿರುವ ಉತ್ಸವ್ ಲಗಸಿಯಲ್ಲಿ ಆಯೋಜನೆ ಮಾಡಿದ್ದು, ವಿಶೇಷವಾಗಿ ಮಾಜಿ ಎಂಎಲ್ಸಿ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಮಾಜಿ ಅಧ್ಯಕ್ಷೆ, ಹಾಗೂ ಹಿರಿಯ ನಟಿ ಜಯಮಾಲಾರವರ ಮೂಲಕ ಟ್ರೈಲರ್ ಲೋಕಾರ್ಪಣೆ ಮಾಡಲಾಯಿತು.

ನಂತರ ಮಾತನಾಡುತ್ತಾ ನಾನು ಈ ಕಾರ್ಯಕ್ರಮಕ್ಕೆ ಬರಲು ಕಾರಣ ಲೋಕೇಶ್ ನಾಗಪ್ಪ, ಅವರು ಇಂಜಿನಿಯರ್ ಈಗ ನಾವು ಇರುವಂತ ಮನೆಯನ್ನ ಕಟ್ಟಿಕೊಟ್ಟಿದವರು ಅವರೇ, ಬಹಳ ಸಜ್ಜನಿಕೆಯ ವ್ಯಕ್ತಿ , ಅವರದು ಶಾಲೆ ಇದೆ, ಒಮ್ಮೆ ಶಾಲಾ ಫಂಕ್ಷನ್ ಗೆ ಬನ್ನಿ ಎಂದಿದ್ದರು. ಆಗ ಭೇಟಿ ಮಾಡಿದಾಗ ನಮ್ಮ ಶಾಲೆಯಲ್ಲಿ ಸುಧಾಕರ್ ಎಂಬ ವಿದ್ಯಾರ್ಥಿ ಇದ್ದಾನೆ. ಅವನಿಗೆ ಸಿನಿಮಾ ಬಗ್ಗೆ ಬಹಳಷ್ಟು ಆಸಕ್ತಿ ಇದೇ ಎಂದಿದ್ದರು. ಅದರಂತೆ ಸುಧಾಕರ್ ಬಹಳ ಟ್ಯಾಲೆಂಟೆಡ್ ಹುಡುಗ , ನಾನು ಆತನಿಗೆ ಡಿಗ್ರಿ ಮುಗಿದ ನಂತರ ಸಿನಿಮಾ ಗೆ ಬನ್ನಿ, ವಿದ್ಯೆ ಬಹಳ ಮುಖ್ಯ ಎಂದಿದೆ, ಅದರಂತೆ ಕೆಮಿಕಲ್ ಇಂಜಿನಿಯರ್ ಕೂಡ ಆದರೂ , ಒಮ್ಮೆ ಅವರ ತಂಡ ಮಾಡಿದಂತಹ ವೆಬ್ ಸೀರೀಸ್ ನೋಡಿದೆ ಎರಡುವರೆ ಕೋಟಿ ಜನ ವೀಕ್ಷಣೆ ಮಾಡಿದ್ದಾರೆ. ಈ ಕಾಮಿಡಿ ವೆಬ್ ಸೀರೀಸ್ ಇಷ್ಟು ಜನ ನೋಡಿದ್ದಾರೆಂದರೆ ಇವರ ಭವಿಷ್ಯ ಮುಂದೆ ಹೇಗಿರಬಹುದು ಎಂದುಕೊಂಡಿದ್ದೆ , ಬಹಳ ಆಸಕ್ತಿಯಿಂದ ಇಡೀ ತಂಡ ಕೆಲಸ ಮಾಡಿದ್ದು ,ಕಲಾವಿದರು , ನಿರ್ದೇಶಕರು, ತಂತ್ರಜ್ಞರಿಗೆ ಎಲ್ಲರಿಗೂ ಒಳ್ಳೆಯದಾಗಲಿ. ಈ ಚಿತ್ರ ಇದೆ 30ರಂದು ಬಿಡುಗಡೆಯಾಗುತ್ತಿದೆ ಎಲ್ಲರೂ ಈ ಯುವ ಪ್ರತಿಭೆಗಳ ಚಿತ್ರವನ್ನ ನೋಡಿ ಬೆಂಬಲ ನೀಡಿ ಎಂದು ಕೇಳಿಕೊಂಡರು.

ಇನ್ನು ಈ ಚಿತ್ರದ ನಿರ್ಮಾಪಕ ಲೋಕೇಶ್ ಮಾತನಾಡುತ್ತ ನಮ್ಮ ಶಾಲೆಯಲ್ಲಿ ಓದಿದಂತಹ ಸುಧಾಕರ್ ಇವತ್ತು ಈ ಮಟ್ಟಕ್ಕೆ ಬೆಳೆದಿದ್ದಾನೆ ಎಂದರೆ ನನಗೆ ಬಹಳ ಖುಷಿ ಇದೆ. ಬಹಳಷ್ಟು ಜನ ನನ್ನ ಬಳಿ ಸುಧಾಕರ ಕೋಪಿಷ್ಟ ಇವನಿಗೆ ಯಾಕೆ ಇಷ್ಟು ಬೆಂಬಲ ಎಂದಿದ್ದಾಗ,ನಾನು ಅವನಲ್ಲಿ ಖಂಡಿತ ಛಲ , ಮುಂದೆ ಬೆಳೆಯುತ್ತಾನೆ ಅಂದುಕೊಂಡೆ ಅದರಂತೆ ಇಂದು ಸಿನಿಮಾ ಮಾಡಿ ನಿಮ್ಮ ಮುಂದೆ ಬಂದಿದ್ದಾನೆ. ನಾನೊಬ್ಬನೇ ನಿರ್ಮಾಪಕನೆಲ್ಲ ನನ್ನ ಜೊತೆ ಇನ್ನೊಬ್ಬರು ಸಾತ್ ನೀಡಿದ್ದಾರೆ. ನಾನು ಈ ಚಿತ್ರದಿಂದ ಹಣ ಬರುತ್ತೆ ಎಂದು ನಿರೀಕ್ಷೆ ಮಾಡಿಲ್ಲ. ನಾನು ತಂಡಕ್ಕೆ ಹೇಳಿದೀನಿ ಪಾಸಿಟಿವ್ ಗಿಂತ ನೆಗೆಟಿವ್ ಬಗ್ಗೆ ಹೆಚ್ಚು ಗಮನ ಇರಲಿ, ಗೆಲ್ಲಲು ಪ್ರಯತ್ನ ಮಾಡಿ , ಗೆಲುವು ಸೋಲು ನಮ್ಮ ಕೈಯಲ್ಲಿ ಇಲ್ಲ ಎಂದಿದ್ದೇನೆ. ಚಿತ್ರ ಚೆನ್ನಾಗಿದ್ದಾರೆ ಖಂಡಿತ ಎಲ್ಲರೂ ಬೆಂಬಲ ನೀಡುತ್ತಾರೆ. ಅದರಂತೆ ಇಂದು ನಮ್ಮ ಕಾರ್ಯಕ್ರಮಕ್ಕೆ ಹಿರಿಯ ನಟಿ ಜಯಮಾಲ ರವರು ಬಂದು ಟ್ರೈಲರ್ ಬಿಡುಗಡೆ ಮಾಡಿ ಬೆಂಬಲ ನೀಡಿದ್ದಾರೆ. ಎಲ್ಲರೂ ಚಿತ್ರ ನೋಡಿ ಪ್ರೋತ್ಸಾಹಿಸಿ ಎಂದರು.

ಈ ಚಿತ್ರದ ನಿರ್ದೇಶಕ ಜ್ಯೋತಿ ರಾವ್ ಮೋಹಿತ್ ಮಾತನಾಡುತ್ತಾ ನಾನು ಈ ಚಿತ್ರವನ್ನು ಆರಂಭಿಸಲು ಮುಖ್ಯ ಕಾರಣವೇ ನನ್ನ ಅಮೃತಾಂಜನ್ ಕಿರುಚಿತ್ರ. ಈ ನಮ್ಮ ಅಮೃತ ಅಂಜನ್ ಚಿತ್ರ ಸಂಪೂರ್ಣ ಕಾಮಿಡಿ ಎಂಟರ್ಟೈನ್ಮೆಂಟ್ ಚಿತ್ರವಾಗಿದ್ದು , 80 ಪರ್ಸೆಂಟ್ ಹಾಸ್ಯ , 20 ಪರ್ಸೆಂಟ್ ಸೆಂಟಿಮೆಂಟ್ ಕಥೆಯನ್ನು ಒಳಗೊಂಡಿದೆ. ಪ್ರೀತಿ, ಸ್ನೇಹ , ಸಂಬಂಧಗಳ ಜೊತೆಗೆ ಹಾಸ್ಯದ ಲೇಪನದೊಂದಿಗೆ ಎರಡು ಹಾಡು, ಫೈಟ್ ಗಳು ಸೇರಿದಂತೆ ಎಲ್ಲರಿಗೂ ಇಷ್ಟವಾಗುವಂತ ಅಂಶ ಒಳಗೊಂಡಿದೆ. ನೈಜಕ್ಕೆ ಪೂರಕವಾಗಿ ಬರಬೇಕೆಂದು ಬಹಳಷ್ಟು ಶ್ರಮಪಟ್ಟು ಎಲ್ಲರೂ ಕೆಲಸ ಮಾಡಿದ್ದೇವೆ.
ವಿಶೇಷವಾಗಿ ನಮ್ಮ ಈ ಚಿತ್ರದ ಟ್ರೈಲರ್ ಬಿಡುಗಡೆಯನ್ನು ಜಯಮಾಲಾ ಮೇಡಂ ರವರು ಮಾಡಿದ್ದು ನಮಗೆ ಬಹಳಷ್ಟು ಬೆಂಬಲ ಸಿಕ್ಕಿದೆ. ನಮ್ಮ ಚಿತ್ರವನ್ನು ಜಯಣ್ಣ ಫಿಲಂಸ್ ಮೂಲಕ ರಿಲೀಸ್ ಮಾಡುತ್ತಿದ್ದೇವೆ , ನಿಮ್ಮೆಲ್ಲರ ಪ್ರೀತಿ ಸಹಕಾರ ನಮ್ಮ ಚಿತ್ರಕ್ಕೆ ಇರಲಿ ಎಂದು ಕೇಳಿಕೊಂಡರು.

ಇನ್ನು ಈ ಚಿತ್ರ ಆರಂಭವಾಗಲು ಮುಖ್ಯ ರೂವಾರಿಯಾಗಿರುವಂತಹ ನಟ ಸುಧಾಕರ್ ಗೌಡ ಮಾತನಾಡುತ್ತಾ ನಮ್ಮ ತಂಡ ಇವತ್ತು ಈ ವೇದಿಕೆ ಮೇಲೆ ಇದೆ ಅಂದರೆ,ಅದಕ್ಕೆ ಮುಖ್ಯ ಕಾರಣ ನನ್ನ ಮಾರ್ಗದರ್ಶಿ, ಗುರುಗಳಾದ ಲೋಕೇಶ್ ನಾಗಪ್ಪ. ನಾನು ಅವರ ಶಾಲೆಯಲ್ಲಿ ಓದಿ ನಂತರ ಇಂಜಿನಿಯರಿಂಗ್ ಮಾಡಿ, ನನ್ನ ಆಸೆಯಂತೆ ಇಂದು ಸಿನಿಮಾ ನಟನಾಗಿ ಕಾಣಿಸಿಕೊಂಡಿದ್ದೇನೆ. ನಾನು ಇಲ್ಲಿವರೆಗೂ ಅವರ ಬಗ್ಗೆ ಎಲ್ಲೂ ಮಾತನಾಡಿಲ್ಲ, ಯಾಕೆಂದರೆ ನಾನು ಏನಾದರೂ ಸಾಧಿಸಿ ನಂತರ ಅವರ ಬಗ್ಗೆ ಹೇಳಿಕೊಡಬೇಕು ಅಂದುಕೊಂಡಿದ್ದೆ , ಇವತ್ತು ಅವಕಾಶ ಸಿಕ್ಕಿದೆ. ಖಂಡಿತ ನಮ್ಮ ಇಡೀ ತಂಡಕ್ಕೆ ಅವರ ಬೆಂಬಲವೇ ಹೆಚ್ಚು ಎಂದರು. ಬಹಳ ಇಷ್ಟಪಟ್ಟು ಶ್ರಮವಹಿಸಿ ಸಿನಿಮಾ ಮಾಡಿದ್ದೇವೆ. ಇಂದು ನಮ್ಮ ಕಾರ್ಯಕ್ರಮಕ್ಕೆ ಹಿರಿಯ ನಟಿ ಜಯಮಾಲಾ ಮೇಡಂ ನೀಡಿರುವ ಸಪ್ಪೋರ್ಟ್ ನಾನು ಎಂದು ಮರೆಯುವುದಿಲ್ಲ. ನಾವು ಜೀರೋ ಇಂದ ಈ ಮಟ್ಟಕ್ಕೆ ಬಂದಿದ್ದೇವೆ. ನಾವು ಚಿತ್ರರಂಗದಲ್ಲಿ ಬೆಳೆಯಬೇಕೆಂದು ಬಂದಿರುವಂತಹವರು , ದಯವಿಟ್ಟು ನಮ್ಮನ್ನು ಹರಸಿ ಬೆಳೆಸಿ ಎಂದು ಕೇಳಿಕೊಂಡರು.

ನಟ ಗೌರವ ಶೆಟ್ಟಿ ಮಾತನಾಡುತ್ತಾ ನಾವು ಏನು ಅಂದುಕೊಂಡಿದ್ದೆವು, ಅದರಂತೆ ನಮ್ಮ ಚಿತ್ರ ಬಂದಿದೆ. ಖಂಡಿತ ಇದು ಸಂಪೂರ್ಣ ಹಾಸ್ಯ ಭರಿತ ಮನೋರಂಜನೆಯ ಚಿತ್ರ. ಇಡೀ ತಂಡ ಬಹಳ ಶ್ರಮಪಟ್ಟು ಕೆಲಸ ಮಾಡಿದೆ. ನನ್ನದು ಈ ಚಿತ್ರದಲ್ಲಿ ಒಂದು ಕುಡುಕನ ಪಾತ್ರ. ಈಗ ನೀವು ಟ್ರೈಲರ್ ನೋಡಿದ್ದೀರಿ ನಿಮಗೆಲ್ಲಾ ಹೇಗೆ ಅನಿಸಿತು ಎಂದು ತಿಳಿಸಿ , ಅದೇ ರೀತಿ ನಮ್ಮ ಚಿತ್ರ ಇದೇ ತಿಂಗಳು 30ರಂದು ಬಿಡುಗಡೆಯಾಗುತ್ತಿದೆ. ಎಲ್ಲರೂ ಬಂದು ಪ್ರೋತ್ಸಾಹಿಸಿ ಎಂದು ಕೇಳಿಕೊಂಡರು.

ನಟಿ ಪಾಯಲ್ ಚಂಗಪ್ಪ ಮಾತನಾಡುತ್ತಾ ಒಂದು ಸಿನಿಮಾ ಮಾಡುವುದು ಅಷ್ಟು ಸುಲಭ ಅಲ್ಲ , ಹೊಸಬರಿಗೆ ಅವಕಾಶ ಕೊಡುವುದು ಬಹಳ ಕಷ್ಟ , ನಾನು ನಿರ್ದೇಶಕರಿಗೆ ಧನ್ಯವಾದ ತಿಳಿಸುತ್ತೇನೆ. ನನಗೆ ಈ ಚಿತ್ರದಲ್ಲಿ ಅಭಿನಯಿಸಲು ಅವಕಾಶ ನೀಡಿದ್ದಕ್ಕೆ, ನಾನು ಕಿರುಚಿತ್ರದಲ್ಲೂ ಅಭಿನಯಿಸಿದ್ದೇನೆ. ಈಗ ಸಿನಿಮಾದಲ್ಲೂ ಉರಿ ಎಂಬ ಪಾತ್ರವನ್ನು ನಿರ್ವಹಿಸಿದ್ದೇನೆ. ಈ ಚಿತ್ರದಲ್ಲಿ ಲವ್ ಸ್ಟೋರಿ , ಕಾಲೇಜು ಕಥೆ , ಫ್ಯಾಮಿಲಿ ಕಂಟೆಂಟ್ ಎಲ್ಲವೂ ಒಳಗೊಂಡಿದೆ. ನಮ್ಮ ಸಿನಿಮಾ ಇದೆ 30ರಂದು ಚಿತ್ರಮಂದಿರಕ್ಕೆ ಬರುತ್ತಿದೆ. ಬಂದು ಎಲ್ಲರೂ ನೋಡಿ ಎಂದು ಕೇಳಿಕೊಂಡರು.

ನಟಿ ಶ್ರೀ ಭವ್ಯ ಮಾತನಾಡುತ್ತಾ ನಾನು ಅಮೃತಂಜನ್ ಹಚ್ಚಿಕೊಂಡು ಎರಡು ಐಡಿಯಾ ಕೊಟ್ಟಿದ್ದೆ ಕಿರು ಚಿತ್ರದಲ್ಲಿ , ಈಗ ಸಿನಿಮಾದಲ್ಲಿ ಬಹಳಷ್ಟು ಐಡಿಯಾಗಳನ್ನು ನೀಡಿದ್ದೇನೆ. ನಮ್ಮ ತಂಡದ ಪ್ರತಿಯೊಬ್ಬರು ಬಹಳ ಟ್ಯಾಲೆಂಟೆಡ್ ಆಗಿದ್ದು, ಬಹಳ ಶ್ರಮವಹಿಸಿ ಈ ಒಂದು ಸಿನಿಮಾವನ್ನು ಮಾಡಿದ್ದೇವೆ ಖಂಡಿತ ಇದು ಎಲ್ಲಾ ವರ್ಗದ ಪ್ರೇಕ್ಷಕರಿಗೂ ಇಷ್ಟವಾಗುತ್ತೆ ನೀವೆಲ್ಲರೂ ನೋಡಿ ಹರಿಸಿ ಎಂದು ಕೇಳಿಕೊಂಡರು.

ಇನ್ನು ಈ ಚಿತ್ರದಲ್ಲಿ ಅಭಿನಯಿಸಿದಂತಹ ಕಲಾವಿದರಾದ ಕಾರ್ತಿಕ್ ರೂವಾರಿ, ಹಾಡನ್ನು ಬರೆದ ವೆಂಕಟೇಶ್ ಕುಲಕರ್ಣಿ ಸಿರಿದಂತೆ ಹಲವರು ಚಿತ್ರದ ಕುರಿತು ತಮ್ಮ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು. ಹಿರಿಯ ನಟ ನವೀನ್. ಡಿ. ಪಡೀಲ್ , ಮಧುಮತಿ ಹಾಗೂ ಇನ್ನು ಮುಂತಾದವರು ಅಭಿನಯಿಸಿದ್ದು, ಈ ಚಿತ್ರಕ್ಕೆ ಸುಮಂತ್ ಆಚಾರ್ಯ ಛಾಯಾಗ್ರಹಣ , ಕಿರಣ್ ಕುಮಾರ್ ಸಂಕಲನ ಹಾಗೂ ರೋಹಿತ್ ಶೋವರ್ ಹಿನ್ನೆಲೆ ಸಂಗೀತವನ್ನು ಒದಗಿಸಿದ್ದಾರೆ. ಯುವ ಪ್ರತಿಭೆಗಳು ಸೇರಿ ನಿರ್ಮಿಸಿರುವ ಈ ಚಿತ್ರ ಇದೇ 30ರಂದು ರಾಜ್ಯಾದ್ಯಂತ ರಾರಾಜಿಸಲಿದೆ.

ಇದನ್ನೂ ಓದಿ : ‘ಕಾಣದ ಕಡಲಿಗೆ’ ಚಿತ್ರದ ಮೊದಲ ಸಾಂಗ್‌ ರಿಲೀಸ್

ಇದನ್ನೂ ಓದಿ : ನೀವು ವಿಶ್ವಕಪ್ ಆಡಲು ಬಾರದಿರುವುದೇ ಲೇಸು, ಬಂದರೆ ಮುಖಭಂಗ ಖಚಿತ | ಪಾಕಿಸ್ತಾನಕ್ಕೆ ಶ್ರೀಕಾಂತ್ ಎಚ್ಚರಿಕೆ!

Tags: Karnataka News beat
SendShareTweet
Previous Post

400 ಕೋಟಿ ರೂಪಾಯಿ ದರೋಡೆಯನ್ನ ನಾನು ಕನಸಿನಲ್ಲೂ ಊಹಿಸಿರಲಿಲ್ಲ | ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

Next Post

ಎರಡು ವರ್ಷಗಳ ಹಿಂದೆ ಮದುವೆಯಾಗಿದ್ದ ವಿವಾಹಿತೆ ಆತ್ಮಹತ್ಯೆ | ಪತಿ ವಿರುದ್ಧ ವರದಕ್ಷಿಣೆ ಕಿರುಕುಳ ಆರೋಪ!

Related Posts

ದರ್ಶನ್ ಬಿಡುಗಡೆಗೆ ರಾಷ್ಟ್ರಪತಿ ಮೊರೆ ಹೋದ ಅಭಿಮಾನಿಗಳು..!
ಸಿನಿಮಾ

ದರ್ಶನ್ ಬಿಡುಗಡೆಗೆ ರಾಷ್ಟ್ರಪತಿ ಮೊರೆ ಹೋದ ಅಭಿಮಾನಿಗಳು..!

ಇಂದು ಪವಿತ್ರಾ ಗೌಡಗೆ ಬಿಗ್‌ ಡೇ.. ಜಾಮೀನು ಸಿಗುತ್ತಾ? ಸಿಗಲ್ವಾ?
ಸಿನಿಮಾ

ಇಂದು ಪವಿತ್ರಾ ಗೌಡಗೆ ಬಿಗ್‌ ಡೇ.. ಜಾಮೀನು ಸಿಗುತ್ತಾ? ಸಿಗಲ್ವಾ?

ದರ್ಶನ್​ ಕೇಸ್​​ನಲ್ಲಿ ಟ್ವಿಸ್ಟ್ ; ವಿರೋಧಿಗಳಿಂದ ನಡೀತಾ ಸಂಚು? ವಿಜಯಲಕ್ಷ್ಮಿ ಹೈಕೋರ್ಟ್‌ ಮೆಟ್ಟಿಲೇರಿದ್ದೇಕೆ?
ಸಿನಿಮಾ-ಮನರಂಜನೆ

ದರ್ಶನ್​ ಕೇಸ್​​ನಲ್ಲಿ ಟ್ವಿಸ್ಟ್ ; ವಿರೋಧಿಗಳಿಂದ ನಡೀತಾ ಸಂಚು? ವಿಜಯಲಕ್ಷ್ಮಿ ಹೈಕೋರ್ಟ್‌ ಮೆಟ್ಟಿಲೇರಿದ್ದೇಕೆ?

ಬಿಗ್ ಬಾಸ್ ವೇದಿಕೆಯಲ್ಲೇ ಟ್ರೋಲಿಗರಿಗೆ ಶರ್ಟ್ ಬಿಚ್ಚಿ ಸವಾಲೆಸೆದ ಸಲ್ಮಾನ್ ಖಾನ್ : ವಯಸ್ಸು, ತೂಕದ ಟೀಕೆಗಳಿಗೆ ಖಡಕ್ ಪ್ರತ್ಯುತ್ತರ!
ಸಿನಿಮಾ-ಮನರಂಜನೆ

ಬಿಗ್ ಬಾಸ್ ವೇದಿಕೆಯಲ್ಲೇ ಟ್ರೋಲಿಗರಿಗೆ ಶರ್ಟ್ ಬಿಚ್ಚಿ ಸವಾಲೆಸೆದ ಸಲ್ಮಾನ್ ಖಾನ್ : ವಯಸ್ಸು, ತೂಕದ ಟೀಕೆಗಳಿಗೆ ಖಡಕ್ ಪ್ರತ್ಯುತ್ತರ!

ಸಿನಿಮಾ ಪರದೆ ಮೇಲೆ ಇನ್ನು ‘ಎಲ್ಲವೂ ಓಕೆ’ ಅಲ್ಲ :  35 ವರ್ಷಗಳ ಬಳಿಕ CBFC ನಿಯಮಕ್ಕೆ ಹೊಸ ರೂಪ!
ಸಿನಿಮಾ-ಮನರಂಜನೆ

ಸಿನಿಮಾ ಪರದೆ ಮೇಲೆ ಇನ್ನು ‘ಎಲ್ಲವೂ ಓಕೆ’ ಅಲ್ಲ : 35 ವರ್ಷಗಳ ಬಳಿಕ CBFC ನಿಯಮಕ್ಕೆ ಹೊಸ ರೂಪ!

ದಿಶಾ ಸಾಲಿಯಾನ್ ಪ್ರಕರಣ : ಆದಿತ್ಯ ಠಾಕ್ರೆ, ಅನಿಲ್ ದೇಶ್‌ಮುಖ್‌ ವಿರುದ್ಧ 500 ಕೋಟಿ ರೂ. ಮಾನನಷ್ಟ ನೋಟಿಸ್!
ಸಿನಿಮಾ-ಮನರಂಜನೆ

ದಿಶಾ ಸಾಲಿಯಾನ್ ಪ್ರಕರಣ : ಆದಿತ್ಯ ಠಾಕ್ರೆ, ಅನಿಲ್ ದೇಶ್‌ಮುಖ್‌ ವಿರುದ್ಧ 500 ಕೋಟಿ ರೂ. ಮಾನನಷ್ಟ ನೋಟಿಸ್!

Next Post
ಎರಡು ವರ್ಷಗಳ ಹಿಂದೆ ಮದುವೆಯಾಗಿದ್ದ ವಿವಾಹಿತೆ ಆತ್ಮಹತ್ಯೆ | ಪತಿ ವಿರುದ್ಧ ವರದಕ್ಷಿಣೆ ಕಿರುಕುಳ ಆರೋಪ!

ಎರಡು ವರ್ಷಗಳ ಹಿಂದೆ ಮದುವೆಯಾಗಿದ್ದ ವಿವಾಹಿತೆ ಆತ್ಮಹತ್ಯೆ | ಪತಿ ವಿರುದ್ಧ ವರದಕ್ಷಿಣೆ ಕಿರುಕುಳ ಆರೋಪ!

  • Trending
  • Comments
  • Latest
ಗಮನಿಸಿ ; ಆಗಸ್ಟ್ 16ರೊಳಗೆ ಈ ಕೆಲಸ ಮಾಡದಿದ್ದರೆ ಮನೆಗೆ ಬರಲ್ಲ LPG ಸಿಲಿಂಡರ್!

ಗಮನಿಸಿ ; ಆಗಸ್ಟ್ 16ರೊಳಗೆ ಈ ಕೆಲಸ ಮಾಡದಿದ್ದರೆ ಮನೆಗೆ ಬರಲ್ಲ LPG ಸಿಲಿಂಡರ್!

ನ್ಯೂಜಿಲೆಂಡ್ ಪ್ರವಾಸಕ್ಕೆ ಟೀಮ್ ಇಂಡಿಯಾ ಒಡಿಐ ತಂಡ ಸೇರುವ ರೇಸ್‌ನಲ್ಲಿ ಸೂರ್ಯಾನ್ಶ್​​ ಶೆಡ್ಗೆ: ಮುಂಬೈ ರಣಜಿ ತಂಡದಲ್ಲಿ ಸ್ಥಾನ

ನ್ಯೂಜಿಲೆಂಡ್ ಪ್ರವಾಸಕ್ಕೆ ಟೀಮ್ ಇಂಡಿಯಾ ಒಡಿಐ ತಂಡ ಸೇರುವ ರೇಸ್‌ನಲ್ಲಿ ಸೂರ್ಯಾನ್ಶ್​​ ಶೆಡ್ಗೆ: ಮುಂಬೈ ರಣಜಿ ತಂಡದಲ್ಲಿ ಸ್ಥಾನ

ಭುವನೇಶ್ವರ್ ಕುಮಾರ್ ಆಯ್ಕೆ ವಿಳಂಬ: ಆಯ್ಕೆ ಸಮಿತಿ ಮುಖ್ಯಸ್ಥ ಅಜಿತ್ ಅಗರ್ಕರ್ ವಿರುದ್ಧ ಮೊಹಮ್ಮದ್ ಶಮಿ ಅಸಮಾಧಾನ

ಭುವನೇಶ್ವರ್ ಕುಮಾರ್ ಆಯ್ಕೆ ವಿಳಂಬ: ಆಯ್ಕೆ ಸಮಿತಿ ಮುಖ್ಯಸ್ಥ ಅಜಿತ್ ಅಗರ್ಕರ್ ವಿರುದ್ಧ ಮೊಹಮ್ಮದ್ ಶಮಿ ಅಸಮಾಧಾನ

ಭಾರತದಲ್ಲಿ ಬಿಡುಗಡೆಯಾಯ್ತು ಹೈಯರ್ Mini LED M70 ಸರಣಿ : ಬೆಲೆ ಹಾಗೂ ವೈಶಿಷ್ಟ್ಯಗಳ ವಿವರ

ಭಾರತದಲ್ಲಿ ಬಿಡುಗಡೆಯಾಯ್ತು ಹೈಯರ್ Mini LED M70 ಸರಣಿ : ಬೆಲೆ ಹಾಗೂ ವೈಶಿಷ್ಟ್ಯಗಳ ವಿವರ

ಕುಡಿದ ಮತ್ತಿನಲ್ಲಿ ಸಿಕ್ಕ ಸಿಕ್ಕವರನ್ನು ಕಚ್ಚಿದ ವ್ಯಕ್ತಿ!

ಕುಡಿದ ಮತ್ತಿನಲ್ಲಿ ಸಿಕ್ಕ ಸಿಕ್ಕವರನ್ನು ಕಚ್ಚಿದ ವ್ಯಕ್ತಿ!

ಹೃದಯಾಘಾತಕ್ಕೆ ಪತಿ ಬಲಿ; 7ನೇ ಮಹಡಿಯಿಂದ ಹಾರಿದ ಪತ್ನಿ!

ಹೃದಯಾಘಾತಕ್ಕೆ ಪತಿ ಬಲಿ; 7ನೇ ಮಹಡಿಯಿಂದ ಹಾರಿದ ಪತ್ನಿ!

ಕನ್ನಡದಲ್ಲಿ ಐಎಸ್ ಬರೆದ ಮೊದಲಿಗ ಹಾಗೂ ನಟ ಶಿವರಾಮ್ ಆರೋಗ್ಯ ಸ್ಥಿತಿ ಗಂಭೀರ!

ಕನ್ನಡದಲ್ಲಿ ಐಎಸ್ ಬರೆದ ಮೊದಲಿಗ ಹಾಗೂ ನಟ ಶಿವರಾಮ್ ಆರೋಗ್ಯ ಸ್ಥಿತಿ ಗಂಭೀರ!

ಪಿಎಂ ಕಿಸಾನ್ 16ನೇ ಕಂತಿನ ಹಣ ಬಿಡುಗಡೆ!

ಪಿಎಂ ಕಿಸಾನ್ 16ನೇ ಕಂತಿನ ಹಣ ಬಿಡುಗಡೆ!

ಹಿರಿಯ ಸಂಗೀತ ನಿರ್ದೇಶಕ ದೇವಾ ಇನ್ನಿಲ್ಲ

ಹಿರಿಯ ಸಂಗೀತ ನಿರ್ದೇಶಕ ದೇವಾ ಇನ್ನಿಲ್ಲ

ನಕಲಿ ಪತ್ರಕರ್ತರ ಗ್ಯಾಂಗ್ ಪೊಲೀಸರ ವಶಕ್ಕೆ!

ನಕಲಿ ಪತ್ರಕರ್ತರ ಗ್ಯಾಂಗ್ ಪೊಲೀಸರ ವಶಕ್ಕೆ!

ಬಾಲಕಿ ಅತ್ಯಾಚಾರ ಕೊಲೆ: ಅಪರಾಧಿಗೆ ಗಲ್ಲು

ಬಾಲಕಿ ಅತ್ಯಾಚಾರ ಕೊಲೆ: ಅಪರಾಧಿಗೆ ಗಲ್ಲು

ನೆಹರು ಮರಿ ಮೊಮ್ಮಗಳ ಹೆಸರು ಇಟ್ಕೊಂಡಿರುವ ನಿಮ್ಮಿಂದ RSS ಬ್ಯಾನ್ ಸಾಧ್ಯವಿಲ್ಲ : ಪ್ರತಾಪ್ ಸಿಂಹ ವಾಗ್ದಾಳಿ

ಪ್ರತಾಪ್ ಸಿಂಹ ಆಕ್ರೋಶ: ಸರ್ಕಾರದ ವಿರುದ್ಧ ವಾಗ್ದಾಳಿ

Recent News

ಹಿರಿಯ ಸಂಗೀತ ನಿರ್ದೇಶಕ ದೇವಾ ಇನ್ನಿಲ್ಲ

ಹಿರಿಯ ಸಂಗೀತ ನಿರ್ದೇಶಕ ದೇವಾ ಇನ್ನಿಲ್ಲ

ನಕಲಿ ಪತ್ರಕರ್ತರ ಗ್ಯಾಂಗ್ ಪೊಲೀಸರ ವಶಕ್ಕೆ!

ನಕಲಿ ಪತ್ರಕರ್ತರ ಗ್ಯಾಂಗ್ ಪೊಲೀಸರ ವಶಕ್ಕೆ!

ಬಾಲಕಿ ಅತ್ಯಾಚಾರ ಕೊಲೆ: ಅಪರಾಧಿಗೆ ಗಲ್ಲು

ಬಾಲಕಿ ಅತ್ಯಾಚಾರ ಕೊಲೆ: ಅಪರಾಧಿಗೆ ಗಲ್ಲು

ನೆಹರು ಮರಿ ಮೊಮ್ಮಗಳ ಹೆಸರು ಇಟ್ಕೊಂಡಿರುವ ನಿಮ್ಮಿಂದ RSS ಬ್ಯಾನ್ ಸಾಧ್ಯವಿಲ್ಲ : ಪ್ರತಾಪ್ ಸಿಂಹ ವಾಗ್ದಾಳಿ

ಪ್ರತಾಪ್ ಸಿಂಹ ಆಕ್ರೋಶ: ಸರ್ಕಾರದ ವಿರುದ್ಧ ವಾಗ್ದಾಳಿ

ನ್ಯೂಸ್ ಬೀಟ್

ಬಂಧು ಮಿತ್ರರೇ ನಮಸ್ತೇ,

ನಿಖರ, ಪ್ರಖರ, ಸ್ಪಷ್ಟ ಹಾಗೂ ವಸ್ತುನಿಷ್ಠ ಸುದ್ದಿ ನೀಡುವ ಭರವಸೆಯೊಂದಿಗೆ ನಮ್ಮ “ಕರ್ನಾಟಕ ನ್ಯೂಸ್ ಬೀಟ್” ಸುದ್ದಿ ಮಾಧ್ಯಮವನ್ನು ಚಾಲ್ತಿಗೆ ತಂದಿದ್ದೇವೆ. ಜಿಲ್ಲಾ ಸುದ್ದಿ, ಪ್ರಸ್ತುತ ಸುದ್ದಿ, ವಿಶೇಷ ಅಂಕಣ, ಧರ್ಮ, ಸನಾತನ, ರಾಜಕೀಯ, ಸಿನಿಮಾ, ಅಪರಾಧ, ಕ್ರೀಡೆ, ಆರೋಗ್ಯ, ಆಹಾರ, ತಂತ್ರಜ್ಞಾನ, ಕೃಷಿ, ಪರಿಸರ, ಸಾಹಿತ್ಯ, ವಾಣಿಜ್ಯ, ಜ್ಯೋತಿಷ್ಯ, ಪುರಾಣ, ಇತಿಹಾಸ ಸೇರಿದಂತೆ ಈ ಸಮಾಜದ ಪ್ರತಿ ವಿಭಾಗದಲ್ಲೂ ನಾವು ಕಣ್ಣಿಡುತ್ತಾ, ಅಲ್ಲಿನ ಆಗು-ಹೋಗುಗಳನ್ನು ನಿರಂತರವಾಗಿ ನಿಮ್ಮ ಮುಂದೆ ತೆರೆದಿಡುತ್ತಾ ಸಾಗುತ್ತೇವೆ. ಒಟ್ಟಿನಲ್ಲಿ, ಬರವಣಿಗೆಯಲ್ಲೇ ಭಗವಂತನನ್ನ ಕಾಣುತ್ತಿರುವ, ಸದೃಢ ತಂಡದೊಂದಿಗೆ, ಕರ್ನಾಟಕ ನ್ಯೂಸ್ ಬೀಟ್ ಸುದ್ದಿ ಮಾಧ್ಯಮವು, ವಿಶೇಷವಾಗಿ ಸುದ್ದಿ, ವರದಿ, ಅಂಕಣ, ಚಿತ್ರಣಗಳನ್ನು ಹೊತ್ತು ತರುತ್ತಾ, ಸದಾ ನಿಮ್ಮೊಂದಿಗೆ ಬೆಸೆದುಕೊಂಡಿರಲಿದೆ.

Follow Us

Join Our WhatsApp Channel

Browse by Category

  • national
  • News & Politics
  • state
  • Uncategorized
  • ಅಪರಾಧ
  • ಅಮರಾವತಿ
  • ಆರೋಗ್ಯ-ಆಹಾರ
  • ಇತರೆ ಸುದ್ದಿ
  • ಇತಿಹಾಸ
  • ಉಡುಪಿ
  • ಉತ್ತರ ಕನ್ನಡ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಕಲಬುರ್ಗಿ
  • ಕೃಷಿ-ಪರಿಸರ
  • ಕೊಡಗು
  • ಕೊಪ್ಪಳ
  • ಕೋಲಾರ
  • ಕ್ರೀಡೆ
  • ಗದಗ
  • ಚಾಮರಾಜನಗರ
  • ಚಿಕ್ಕಬಳ್ಳಾಫುರ
  • ಚಿಕ್ಕಮಗಳೂರು
  • ಚಿತ್ರದುರ್ಗ
  • ಜ್ಯೋತಿಷ್ಯ
  • ತಂತ್ರಜ್ಞಾನ
  • ತುಮಕೂರು
  • ತೆಲಂಗಾಣ
  • ದಕ್ಷಿಣ ಕನ್ನಡ
  • ದಾವಣಗೆರೆ
  • ದೇಶ
  • ಧರ್ಮ-ಸನಾತನ
  • ಧಾರವಾಡ
  • ಪುರಾಣ
  • ಬಳ್ಳಾರಿ
  • ಬಾಗಲಕೋಟೆ
  • ಬೀದರ್
  • ಬೆಂಗಳೂರು
  • ಬೆಂಗಳೂರು ಗ್ರಾಮಾಂತರ
  • ಬೆಂಗಳೂರು ನಗರ
  • ಬೆಳಗಾವಿ
  • ಮಂಗಳೂರು
  • ಮಂಡ್ಯ
  • ಮುಖ್ಯಾಂಶಗಳು
  • ಮೈಸೂರು
  • ಯಾದಗಿರಿ
  • ರಾಜಕೀಯ
  • ರಾಜ್ಯ
  • ರಾಮನಗರ
  • ರಾಯಚೂರು
  • ವಾಣಿಜ್ಯ-ವ್ಯಾಪಾರ
  • ವಿಜಯನಗರ
  • ವಿಜಯಪುರ
  • ವಿದೇಶ
  • ವಿಶೇಷ ಅಂಕಣ
  • ವೀಡಿಯೊ ಸುದ್ದಿ
  • ವ್ಯಾಪಾರ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ಶಿವಮೊಗ್ಗ
  • ಸಿನಿಮಾ
  • ಸಿನಿಮಾ-ಮನರಂಜನೆ
  • ಹಾವೇರಿ
  • ಹಾಸನ
  • ಹುಬ್ಬಳ್ಳಿ

Recent News

ಹಿರಿಯ ಸಂಗೀತ ನಿರ್ದೇಶಕ ದೇವಾ ಇನ್ನಿಲ್ಲ

ಹಿರಿಯ ಸಂಗೀತ ನಿರ್ದೇಶಕ ದೇವಾ ಇನ್ನಿಲ್ಲ

ನಕಲಿ ಪತ್ರಕರ್ತರ ಗ್ಯಾಂಗ್ ಪೊಲೀಸರ ವಶಕ್ಕೆ!

ನಕಲಿ ಪತ್ರಕರ್ತರ ಗ್ಯಾಂಗ್ ಪೊಲೀಸರ ವಶಕ್ಕೆ!

  • About
  • Advertise
  • Privacy & Policy
  • Contact Us

© 2025 News beat

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಬ್ಲಾಗ್
  • ಜಿಲ್ಲಾ ಸುದ್ದಿ
    • ಬೆಂಗಳೂರು ನಗರ
    • ಬೆಂಗಳೂರು ಗ್ರಾಮಾಂತರ
    • ಬೆಳಗಾವಿ
    • ಬೀದರ್
    • ಬಾಗಲಕೋಟೆ
    • ಬಳ್ಳಾರಿ
    • ಚಾಮರಾಜನಗರ
    • ದಕ್ಷಿಣ ಕನ್ನಡ
    • ಚಿಕ್ಕಬಳ್ಳಾಪುರ
    • ಮಂಗಳೂರು
    • ಧಾರವಾಡ
    • ದಾವಣಗೆರೆ
    • ಚಿತ್ರದುರ್ಗ
    • ಗದಗ
    • ಹಾಸನ
    • ವಿಜಯಪುರ
    • ಹಾವೇರಿ
    • ಕಲಬುರ್ಗಿ
    • ಕೋಲಾರ
    • ರಾಯಚೂರು
    • ಕೊಡಗು
    • ರಾಯಚೂರು
    • ರಾಮನಗರ
    • ಕೊಪ್ಪಳ
    • ತುಮಕೂರು
    • ಮೈಸೂರು
    • ಮಂಡ್ಯ
    • ಉಡುಪಿ
    • ಚಿಕ್ಕಮಗಳೂರು
    • ಉತ್ತರ ಕನ್ನಡ
    • ವಿಜಯನಗರ
    • ಶಿವಮೊಗ್ಗ
    • ಯಾದಗಿರಿ
  • ರಾಜ್ಯ
  • ರಾಜಕೀಯ
  • ದೇಶ
  • ವಿದೇಶ
  • ಕ್ರೀಡೆ
  • ಸಿನಿಮಾ-ಮನರಂಜನೆ
  • ವಿಶೇಷ ಅಂಕಣ
  • ಧರ್ಮ-ಸನಾತನ
  • ಅಪರಾಧ
  • ಆರೋಗ್ಯ-ಆಹಾರ
  • ತಂತ್ರಜ್ಞಾನ
  • ಕೃಷಿ-ಪರಿಸರ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ವಾಣಿಜ್ಯ-ವ್ಯಾಪಾರ
  • ಜ್ಯೋತಿಷ್ಯ
  • ಪುರಾಣ
  • ಇತಿಹಾಸ

© 2025 News beat