ಬೆಂಗಳೂರು: ಜೈಲಿನಲ್ಲಿದ್ದ ಮಗನಿಗೆ ಕೊಡಲು ಮೊಬೈಲ್ ಅನ್ನು ಖಾಸಗಿ ಭಾಗದಲ್ಲಿ ಇಟ್ಟುಕೊಂಡು ಸಾಗಿಸುತ್ತಿದ್ದ ತಾಯಿ ತಪಾಸಣೆ ವೇಳೆ ಸಿಕ್ಕಿಬಿದ್ದಿರುವ ಘಟನೆ ನಗರದ ಪರಪ್ಪನ ಅಗ್ರಹಾರ ಜೈಲಿನಲ್ಲಿ ನಡೆದಿದೆ.
ಜೈಲಿನಲ್ಲಿದ್ದ ಮಗ ಭರತ್ನನ್ನು ನೋಡಲು ತಾಯಿ ಲಕ್ಷ್ಮೀ ನರಸಮ್ಮ ಎಂಬುವವರು ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಮಗನನ್ನು ಭೇಟಿಗೆಂದು ಹೋಗಿದ್ದರು. ವಿಸಿಟರ್ ಪಾಸ್ ಪಡೆದುಕೊಂಡು ಹೋಗಿದ್ದ ಮಹಿಳೆಯನ್ನು ತಪಾಸಣೆ ಮಾಡಿದಾಗ ಖಾಸಗಿ ಭಾಗದಲ್ಲಿ ಮೊಬೈಲ್ ಇಟ್ಟುಕೊಂಡು ಹೋಗಿರುವುದು ಪತ್ತೆಯಾಗಿದೆ.
ಈ ಸಂಬಂಧ ಕೇಂದ್ರ ಕಾರಾಗೃಹದ ಪ್ರಭಾರ ಅಧೀಕ್ಷಕ ಪರಮೇಶ್ ಎಚ್.ಎ ಅವರು ತಮ್ಮ ಸಂಸ್ಥೆಯ ಸಿಬ್ಬಂದಿ ವಸಂತಮ್ಮ ಮುಖಾಂತರ ದೂರು ದಾಖಲಿಸಿದ್ದಾರೆ. ಕೇಂದ್ರ ಕಾರಾಗೃಹದ ಮುಖ್ಯದ್ವಾರದ ಹೊರಗೆ ಎಡಭಾಗದಲ್ಲಿರುವ ತಪಾಸಣಾ ವಿಭಾಗ-01ರಲ್ಲಿ ಜನವರಿ 02ರಂದು ಮಧ್ಯಾಹ್ನ ಲಕ್ಷ್ಮೀ ನರಸಮ್ಮ (38) ಅವರು ವಿಸಿಟರ್ ಪಾಸ್ ಪಡೆದುಕೊಂಡು 9689/2205 ವಿಚಾರಣಾಧೀನಾ ಸಂಖ್ಯೆ ಹೊಂದಿರುವ ಭರತ್ ಎಂಬ ಕಾರಾಗೃಹ ಬಂದಿಯ ಸಂದರ್ಶನಕ್ಕೆ ಬಂದಿದ್ದರು. ಈ ವೇಳೆ ಸಿಬ್ಬಂದಿ, ತಪಾಸಣಾ ಮಾಡಿದಾಗ ಖಾಸಗಿ ಭಾಗದೊಳಗೆ ಸಿಮ್ ಸಹಿತ ಬೇಸಿಕ್ ಮೊಬೈಲ್ ಪತ್ತೆ ಆಗಿದೆ.
ಮಹಿಳೆಯು ಕಾರಾಗೃಹದ ನಿಯಮ ಉಲ್ಲಂಘನೆ ಮಾಡಿ ಕೆಎಸ್ಐಎಸ್ಎಫ್ ಸಿಬ್ಬಂದಿಯವರ ಕಣ್ತಪ್ಪಿ ಕಾರಾಗೃಹದ ಒಳಗಡೆ ನಿಷೇಧಿತ ವಸ್ತು, ಸಾಗಿಸಲು ಪ್ರಯತ್ನಿಸಿರುವುದರಿಂದ ಲಕ್ಷ್ಮೀ ನರಸಮ್ಮ ಮತ್ತು ವಿಚಾರಣಾ ಬಂದಿ ಭರತ್ ವಿರುದ್ಧ ಕಾನೂನು ಕ್ರಮ ಜರುಗಿಸಬೇಕೆಂದು ಎಫ್ಐಆರ್ನಲ್ಲಿ ಉಲ್ಲೇಖಿಸಲಾಗಿದೆ.
ಇದನ್ನೂ ಓದಿ: ಮಂಗಳೂರಲ್ಲಿ CCB ಪೊಲೀಸರ ಭರ್ಜರಿ ಕಾರ್ಯಚರಣೆ | 4 ಕೋಟಿ ರೂ. ಮೌಲ್ಯದ MDMA ಡ್ರಗ್ಸ್ ಜಪ್ತಿ.. ಉಗಾಂಡಾ ಮಹಿಳೆ ಬಂಧನ!



















