ಬಿಗ್‌ಬಾಸ್ ಮನೆಯಲ್ಲಿ ಈ ವಾರ ಕಿಚ್ಚ ಸುದೀಪ್ ಅನುಪಸ್ಥಿತಿಯಲ್ಲಿ ಅಚ್ಚರಿ ಎಲಿಮಿನೇಷನ್ ನಡೆದಿದೆ. ಎಲ್ಲವೂ ಅಂದುಕೊಂಡಂತೆ ನಡೆಯುತ್ತಿದೆ ಅನ್ನುತ್ತಿರುವಾಗಲೇ ಸ್ಪರ್ಧಿಗಳಿಗೆ ಬಿಗ್‌ಬಾಸ್ ಟ್ವಿಸ್ಟ್ ಕೊಟ್ಟಿದ್ದಾರೆ. ಬಿಗ್‌ಬಾಸ್ ಮನೆಯಿಂದ ಮಾಳು ಔಟಾಗಿದ್ದು, ಸ್ಪಂದನಾ ಸೇಫ್ ಆಗಿದ್ದಾರೆ.
ಮೊದಲಿಗೆ ಬಿಗ್ ಬಾಸ್ ಸ್ಪಂದನಾ ಹಾಗೂ ಮಾಳು ಅವರಲ್ಲಿ ಒಬ್ಬರು ಮನೆಯಿಂದ ಆಚೆ ಹೋಗುತ್ತಾರೆ ಎಂದು ಅನೌನ್ಸ್ ಮಾಡಿದ್ದಾರೆ. ಗಿಲ್ಲಿ ಕೂಡ, ಸ್ಪಂದನಾ ಯಾರೂ ಎಂಬುದು ಇದುವರೆಗೂ ಕ್ಲಾರಿಟಿ ಸಿಕ್ಕಿಲ್ಲ ಅಂತ ಗಿಲ್ಲಿ ನಟ ಹೇಳಿದ್ದಾರೆ. ಇನ್ನು ಧನುಷ್ ಕೂಡ ಮಾಳು ಅವರು ಸ್ಟ್ಯಾಂಡ್ ತೆಗೆದುಕೊಂಡಿಲ್ಲ ಎಂದಿದ್ದಾರೆ. ಅಂತೂ ಮಾಳು ಏಲಿಮಿನೇಟ್ ಆಗಿದ್ದಾರೆ.
ಅಂತಿಮವಾಗಿ ಸ್ಪಂದನಾ ಮತ್ತು ಮಾಳು ಉಳಿದುಕೊಂಡರು. ಬಳಿಕ ಬಿಗ್‌ಬಾಸ್ 2 ಕಾರುಗಳನ್ನು ಕರೆಸಿ, ಮಾಳು ಮತ್ತು ಸ್ಪಂದನಾ ತಲಾ ಒಂದು ಕಾರಿನಲ್ಲಿ ಕುಳಿತುಕೊಳ್ಳುವಂತೆ ಸೂಚಿಸಿದರು. ಅಂತೆಯೇ ಮಾಳು ಮತ್ತು ಸ್ಪಂದನಾ ಕಾರುಗಳಲ್ಲಿ ಕುಳಿತರು. ಎರಡೂ ಕಾರುಗಳು ಬಿಗ್‌ಬಾಸ್ ಮನೆಯಿಂದ ಹೊರಗೆ ಹೋದವು. ಈ ವೇಳೆ ಮನೆ ಮಂದಿಗೆಲ್ಲ ದುಗುಡ ಹೆಚ್ಚಾಗಿತ್ತು, ಯಾರು ಬರ್ತಾರೆ? ಯಾರು ಬರ್ತಾರೆ ಅಂತ ಒಬ್ಬರಿಗೊಬ್ಬರು ಕನವರಿಸುತ್ತಲೇ ಇದ್ದರು. ಆದರೆ ವಾಪಸ್ಸಾಗಿದ್ದು ಕೇವಲ ಒಂದು ಕಾರು. ಆ ಕಾರಿನಿಂದ ಸ್ಪಂದನಾ ಕೆಳಗೆ ಇಳಿದರು. ಆ ಮೂಲಕ ಮಾಳು ಬಿಗ್‌ಬಾಸ್ ಮನೆಯಿಂದ ಹೊರಗೆ ಹೋದಂತಾಯ್ತು.
ಕಾರಿನಿಂದ ಇಳಿಯುತ್ತಿದ್ದಂತೆ ಒಂದು ಕಡೆ ಸಂತೋಷ, ಮತ್ತೊಂದು ಕಡೆ ದುಃಖವನ್ನೂ ಹೊರ ಹಾಕಿದ್ರು ಕಣ್ಣೀರು ತುಂಬಿಕೊಂಡು ಒಂದು ಕ್ಷಣ ಹಾಗೇ ನಿಂತುಬಿಟ್ಟರು. ಈ ವೇಳೆ ಮನೆ ಮಂದಿ ಕೂಡ ಮಾಳು ಎಲಿಮಿನೇಟ್ ಆಗಿದ್ದನ್ನ ನೆನೆಸಿಕೊಂಡು ಕಣ್ಣೀರಿಟ್ಟರು. ಕೆಲವೇ ಕ್ಷಣಗಳಲ್ಲಿ ಮತ್ತೆ ನಗುತ್ತಾ ನಗುತ್ತಾ ಮನೆಯೊಳಗೆ ಸೇರಿಕೊಂಡರು.
ಇದನ್ನೂ ಓದಿ : ಕೇಳಿರದ, ನೋಡಿರದ ಲವ್ ಸ್ಟೋರಿ ‘ಸೂರ್ಯ’..!



















