ಚಿಕ್ಕಬಳ್ಳಾಪುರ: ಆಸ್ತಿ ಕೊಂಡುಕೊಳ್ಳಲು ಹಣ ಸಹಾಯ ಮಾಡುತ್ತೀನಿ ಎಂದು ಸ್ವಾಮೀಜಿಯೊಬ್ಬರು ಮಹಿಳೆಗೆ ಲೈಂಗಿಕ ದೌರ್ಜನ್ಯ ಮಾಡಿರು ಆರೋಪ ದೊಡ್ಡಬಳ್ಳಾಪುರದಲ್ಲಿ ಕೇಳಿಬಂದಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ಮೇಳೆಕೋಟೆಯ ಮಹರ್ಷಿ ವಾಲ್ಮೀಕಿ ಗುರುಕುಲ ಪೀಠದ ಸ್ವಾಮೀಜಿ ಬ್ರಹ್ಮಾನಂದಗುರೂಜಿ ವಿರುದ್ಧ ಸಂತ್ರಸ್ತ ಮಹಿಳೆ ದೂರು ದಾಖಲಿಸಿದ್ದಾರೆ.
ಸೈಟ್ ಖರೀದಿಗೆ ಹಣ ಸಹಾಯ ಮಾಡುವುದಾಗಿ ತಿಳಿಸಿ, ಮಂಚಕ್ಕೆ ಕರೆದಿದ್ದಾರೆ. ಅಲ್ಲದೇ ಕಾಲ್ ಮಾಡಿ, ರೂಂಗೆ ಬಂದರೆ ಹಣ ಕೊಡುತ್ತೀನಿ ಎಂದಿದ್ದಾರೆ. ಪ್ರತಿನಿತ್ಯ ಪೋನ್ ಮಾಡಿ, ಕಿರುಕುಳ ನೀಡಿ ನಿಂದನೆ ಮಾಡುತ್ತಿದ್ದಾರೆ. ಹಲವು ಬಾರಿ ಆಡಿಯೋ ಕಾಲ್ ಮತ್ತು ವಿಡಿಯೋ ಕಾಲ್ ಮಾಡಿ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿದ್ದಾರೆ.
ಇನ್ನೂ ಆಡಿಯೋ, ವಿಡಿಯೋ ಡಿಲೀಟ್ ಮಾಡಿದರೆ 50 ಸಾವಿರ ರೂ. ಹಣ ನೀಡುವುದಾಗಿ ಆಮಿಷ ಒಡ್ಡಿದ್ದಾರೆ. ನಾನು ಒಬ್ಬಂಟಿಯಾಗಿದ್ದಾಗ ಮನೆಗೆ ಬಂದು ಕಿರುಕುಳ ನೀಡಿದ್ದಾರೆ. ಪೊಲೀಸ್ ಠಾಣೆಗೆ ಆಡಿಯೋ, ವಿಡಿಯೋ ಸಮೇತ ದೂರು ನೀಡಿದರೂ ನ್ಯಾಯ ಸಿಗುತ್ತಿಲ್ಲ. ನನಗೆ ಕಾಟ ಕೊಟ್ಟು ಈಗ ನನ್ನ ವಿರುದ್ಧವೇ ಬ್ರಹ್ಮಾನಂದಗುರೂಜಿ ಮತ್ತು ಆತನ ಪತ್ನಿಯಿಂದ ನಿಂದನೆ ಆರೋಪ ಮಾಡಿದ್ದಾರೆ ಎಂದು ಮಹಿಳೆ ನ್ಯಾಯಕ್ಕಾಗಿ ಒತ್ತಾಯಿಸಿದ್ದಾರೆ.
ಇದನ್ನೂ ಓದಿ: ಕುಂದಾಪುರ | ವಿಜೃಂಭಣೆಯಿಂದ ನಡೆದ ಮಂಡಾಡಿ ಹೋರ್ವರಮನೆಯ ಸಾಂಪ್ರದಾಯಿಕ ಕಂಬಳೋತ್ಸವ!



















